ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಶ್ರೀಮದ್ಭಗವದ್ಗೀತಾ ಮತ್ತು ಕಗ್ಗ ತಾತ್ಪರ್ಯ - Srimadbhavathgeeta Mattu Kagga Tatparya(Srikanth)

  • ₹400

Add to Wish List

Compare this Product

Ex Tax: ₹400

Availability: In Stock

Product Code: BHGAVATHGEETEKAGGA

ಶ್ರೀ ಶ್ರೀಕಾಂತ್ ಅವರು ಅನುಕ್ರಮವಾಗಿ ಭಗವದ್ಗೀತೆಯ ಅಷ್ಟೂ ಶ್ಲೋಕಗಳನ್ನು ಒಂದೊಂದಾಗಿ ಪರಾಮರ್ಶಿಸಿ ಆ ಶ್ಲೋಕಗಳ ಅಂತರ್ನಿಹಿತ ಅರ್ಥಸೂಕ್ಷ್ಮಗಳು ‘ಮಂಕುತಿಮ್ಮನ ಕಗ್ಗ’ದ ಮತ್ತು ‘ಮರುಳಮುನಿಯನ ಕಗ್ಗ’ದ ಪದ್ಯಗಳಲ್ಲಿ ಹೇಗೆ ಅನುರನನಗೊಂಡಿವೆ ಎಂದು ಎತ್ತಿತೋರಿಸಿದ್ದಾರೆ. ಇದೊಂದು ಅಗಾಧವಾದ ಸಾಹಸ; ಅತಿಶಯವಾದ ಅವಧಾನವೂ ಕಗ್ಗದ್ವಯದ ಹಾಗೂ ಭಗವದ್ಗೀತೆಯ ಆಳವಾದ ಅಭ್ಯಾಸವೂ ಇದ್ದಲ್ಲಿ ಮಾತ್ರ ಶಕ್ಯವಾಗುವಂಥದು. ಶ್ರೀ ಶ್ರೀಕಾಂತನ್ ಅವರು ಈ ಕಾರ್ಯಕ್ಕೆ ತಮ್ಮನ್ನು ನಾಲ್ಕಾರು ವರ್ಷಗಳಿಂದ ಸಜ್ಜುಗೊಳಿಸಿಕೊಂಡಿರುವುದು ಈ ಗ್ರಂಥದ ಪುಟಪುಟಗಳಲ್ಲಿಯೂ ಎದ್ದು ಕಾಣುತ್ತದೆ. ವಿಷಯದಲ್ಲಿ ಅಸೀಮ ಪ್ರೀತಿ ಇದ್ದಲ್ಲಿ ಮಾತ್ರ ಇಂತಹ ಕ್ಲೇಶಪೂರ್ಣ ಕಾರ್ಯಕ್ಕೆ ಪ್ರೇರಣೆ ದೊರೆತೀತು. ಅರ್ಥವಿಶೇಷಗಳನ್ನು ಸ್ಪಷ್ಟೀಕರಿಸುವಲ್ಲಿ ಶ್ರೀ ಶೀಕಾಂತನ್ ಅಲ್ಲಲ್ಲಿ ವಿವಿಧ ಗ್ರಂಥಾಂತರಗಳ ಹಿನ್ನೆಲೆಯನ್ನೂ ಬಳಸಿಕೊಂಡಿದ್ದಾರೆ. ಹೀಗೆ ಇದೊಂದು ಉಚ್ಚಕೋಟಿಯ ಸಂಶೋಧನಗ್ರಂಥವೇ ಆಗಿದೆ. ಡಿ.ವಿ.ಜಿ. ವಾಙಯಕ್ಕೆ ಈ ಮಟ್ಟದ ಮತ್ತು ಇಷ್ಟು ಸಾರ್ಥಕವಾದ ಕೈಂಕರ್ಯ ಇದುವರೆಗೆ ಸಂದಿಲ್ಲವೆಂದು ನಿಶ್ಚಿತವಾಗಿ ಹೇಳಬಹುದು.

ಕಗ್ಗದ್ವಯದ ಬಗೆಗೆ ಶ್ರೀ ಶ್ರೀಕಾಂತನ್ ಬೆಳೆಸಿಕೊಂಡಿರುವ ತಪಃದೃಶ ನಿಷ್ಠೆಗೆ ಇದೀಗ ಹೊರಬರುತ್ತಿರುವ ಅವರ ‘ಶ್ರೀಮದ್ಭಗವದ್ಗೀತೆ ಮತ್ತು ಕಗ್ಗ ತಾತ್ಪರ್ಯ’ ಮುಕುಟಪ್ರಾಯವಾಗಿದೆ. ‘ಕಗ್ಗ’-ಆಸಕ್ತರಿಗೆಲ್ಲ ಅನುಪಮವಾದ ದೊಡ್ಡ ನಿಧಿಯನ್ನೇ ಈ ವ್ಯಾಖ್ಯಾನದಲ್ಲಿ ಶ್ರೀ ಶ್ರೀಕಾಂತನ್ ಒದಗಿಸಿದ್ದಾರೆ. ಡಿ.ವಿ.ಜಿ. ವಾಙಯ ಪರಾಮರ್ಶನ ಸಾಹಿತ್ಯಕ್ಕೆ ಇದು ಕಲಶೋಪಮವಾಗಿದೆ.

Reviews

There are no reviews for this product.

Write a review

Note: HTML is not translated!