₹180
Ex Tax: ₹180
ಭಾರತದ 11ನೇ ರಾಷ್ಟ್ರಪತಿಯಾಗಿದ್ದ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಆ ಸ್ಥಾನದಿಂದ ವಿಶ್ರಾಂತಿ ಪಡೆದ ನಂತರ ಹಲವು ವರ್ಷಗಳೇ ಸಂದುಹೋಗಿದ್ದರೂ ಅವರು ಇಂದೂ ಕೂಡ ಅತ್ಯಂತ ಜನಪ್ರಿಯ ಸಾರ್ವಜನಿಕ ಮಹನೀಯರಾಗಿಯೇ ಉಳಿದಿರುವಂತಹುದು ಅಪೂರ್ವವಾದುದು. ಹೆಚ್ಚು ಅರಸಲ್ಪಡುವ, ಹೆಚು ಅಭಿಮಾನಿಸಲ್ಪಡುವ ಅವರತ್ತ ಯುವ ಜನತೆ ಸಲಹೆಗಳಿಗಾಗಿ, ಮಾರ್ಗದರ್ಶನಕ್ಕಾಗಿ, ಸಾಂತ್ವನಕ್ಕಾಗಿ ನೋಡುತ್ತಾರೆ ಅಥವಾ ಅವರೊಡನೆ ಸುಮ್ಮನೆ ಸಂಪರ್ಕದಿಂದಿರಲು ಆಶಿಸುತ್ತಾರೆ. ತಾವು ರಾಮೇಶ್ವರದಿಂದ ರಾಷ್ಟ್ರಪತಿ ಭವನದವರೆಗೆ ನಡೆದುಬಂದ ಬಂಡೆಗಲ್ಲುಗಳ ರಸ್ತೆಯಲ್ಲಿ ಎದುರಿಸಿದ ಪರೀಕ್ಷೆಗಳನ್ನು, ನೋವುಗಳನ್ನು ಚೆನ್ನಾಗಿ ಬಲ್ಲ ಡಾ.ಕಲಾಂ ಅವರು ಈ ಕೃತಿಯಲ್ಲಿ ನೀಡಿರುವ ಮಾರ್ಗದರ್ಶನಗಳು, ನಿರ್ದೇಶನಗಳು ಹಾಗೂ ಪರಿಹಾರಗಳು ಅವರ ಅನುಭವ ಪಾಕದಿಂದ ಹುಟ್ಟಿದ ವಿವೇಕದಿಂದ ಬಂದಿರುವವೇ ಆಗಿವೆ.ನಾವು ಪ್ರತಿಯೊಬ್ಬರೂ ನಮ್ಮ ದೈನಂದಿನ ಬದುಕಿನಲ್ಲಿ ಎದುರಿಸುವ ವ್ಯಕ್ತಿತ್ವ ವಿಕಸನದ ಸವಾಲುಗಳಿಂದ ಹಿಡಿದು ಒಂದು ಸಮಾಜವಾಗಿ ಮತ್ತು ಒಂದು ದೇಶವಾಗಿ ನಾವು ಎದುರಿಸುವ ಇನ್ನೂ ಹೆಚ್ಚಿನ ಸಂಕೀರ್ಣ ವಿಷಯಗಳವರೆಗೆ ಪರ್ಯಾಲೋಚಿಸುವ ಈ ಕೃತಿಯು ಒಂದು ಪ್ರೇರಣಾತ್ಮಕವಾದ ಹಾಗೂ ಒಂದು ಸ್ಪಷ್ಟ ಉದ್ದೇಶವುಳ್ಳ ಬದುಕನ್ನು ಜೀವಿಸಲು ಮಾರ್ಗನಕಾಶೆಯಾಗಿದೆ...
Add to Cart