₹200
Ex Tax: ₹200
ಈ ಸಂಕಲನದಲ್ಲಿ 150 ಪುಟ್ಟಪುಟ್ಟ ಕತೆಗಳಿವೆ. ಒಂದೊಂದೂ ನಮ್ಮನ್ನು ಮೋಟಿವೇಟ್ ಮಾಡುವಂತೆ, ಚಿಂತನೆಗೆ ಹಚ್ಚುವಂತೆ, ಯಾವಾಗಲೋ ಧುತ್ತೆಂದು ಎದುರಾಗುವ ಸಮಸ್ಯೆಗೆ ತಕ್ಷಣದಲ್ಲಿ ಸುಲಭದ ಪರಿಹಾರ ನೀಡುವಂತೆ ರೆಡಿಮೇಡ್ ಆಗಿವೆ. ಸಮಸ್ಯೆಗಳಿಗೆ ಔಟ್ ಆಫ್ ದಿ ಬಾಕ್್ಸ ಪರಿಹಾರ ಹುಡುಕಬೇಕೆಂದು ಆಧುನಿಕ ಮ್ಯಾನೇಜ್ಮೆಂಟ್ ಗುರುಗಳು ಹೇಳುತ್ತಾರಲ್ಲ, ಹಾಗಂದರೇನು ಎಂಬುದಕ್ಕೆ ಇಲ್ಲಿರುವ ಒಂದೊಂದು ಕತೆಯೂ ತಾಜಾ ಉದಾಹರಣೆ. ಪ್ರತಿಯೊಂದನ್ನೂ ನಮ್ಮ ಭಾವಕ್ಕೆ ತಕ್ಕಂತೆ, ಸನ್ನಿವೇಶಕ್ಕೆ ತಕ್ಕಂತೆ ಅರ್ಥೈಸಿಕೊಳ್ಳಬಹುದಾದ ಫ್ಲೆಕ್ಸಿಬಿಲಿಟಿ ಈ ಪುಟ್ಟ ಕತೆಗಳ ದೊಡ್ಡಗುಣ.ಇವು `ಮ್ಯಾನೇಜ್ಮೆಂಟ್ ಕತೆಗಳು' ಏಕೆಂದರೆ ಇವುಗಳಲ್ಲಿ ಆಧುನಿಕ ಕಾರ್ಪೊರೇಟ್ ಯುಗದ ಬದುಕಿಗೆ, ಅದರಲ್ಲಿನ ಸಮಸ್ಯೆಗಳಿಗೆ, ತಲ್ಲಣಗಳಿಗೆ ಮತ್ತು ವಿಚಿತ್ರ ಖುಷಿಗಳಿಗೆ ಕಾರಣ ಮತ್ತು ಪರಿಹಾರ ಬೇಕದ್ದಿರೆ ಅದನ್ನು ನೀಡುವ ಗುಣವಿದೆ. ಇವುಗಳಲ್ಲಿ ಕೆಲ ಕತೆಗಳು ಪರ್ಸನಾಲಿಟಿ ಡೆವಲಪ್ಮೆಂಟ್ ತಜ್ಞರು ಆಗಾಗ ಹೇಳುವ ಕತೆಗಳು. ಇನ್ನು ಕೆಲವು ಇಂಟರ್ನೆಟ್ನಲ್ಲಿ ಓಡಾಡುವಂಥವು, ಮತ್ತೆ ಕೆಲವು ಕತೆಗಳು ಪ್ರಾಚೀನ ನೀತಿಕತೆಗಳಿಂದ ಪ್ರಭಾವಿತವಾಗಿ ಹುಟ್ಟಿದ್ದು. ಇವು ಯಶಸ್ಸಿಗೆ ಅಡ್ಡದಾರಿಗಳದ್ದಿಂತೆ.ಸುಮ್ಮನೇ ಓದಿಕೊಂಡು ಹೋಗಿ. ನಿಮ್ಮ ಹೃದಯವನ್ನಿವು ತಟ್ಟದದ್ದಿರೆ ಆಗ ಹೇಳಿ!..
Add to Cart