ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಭಗತ್ ಸಿಂಗ್ - Bhagath Singh(Ramakrishna G)

  • ₹72

Add to Wish List

Compare this Product

Ex Tax: ₹72

Availability: In Stock

Product Code: BHAGATHSINGH

ಭಾರತದ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ರೂಪುಗೊಂಡ ರಾಷ್ಟ್ರೀಯ ಗುರಿಗಳ ಬೆಳವಣಿಗೆಯ ಒಂದು ಹಂತದ ಕ್ರಿಯಾಶೀಲ ಸ್ವರೂಪ ಭಗತ್‌ಸಿಂಗ್. ಸ್ವಾತಂತ್ರ್ಯವೊಂದನ್ನೇ ಗುರಿಯಾಗಿಟ್ಟುಕೊಂಡು ಅದರ ಗಳಿಕೆಗೆ ಯಾವುದೇ ವಿಧಾನವನ್ನಾದರೂ ಬಳಸಬಹುದೆನ್ನುವವರ ಮತ್ತು ವೈಜ್ಞಾನಿಕ ಸಮಾಜವಾದವೇ ರಾಷ್ಟ್ರದ ಎಲ್ಲ ಸಮಸ್ಯೆಗಳಿಗೂ ಪರಿಹಾರವಾದ್ದರಿಂದ ಅದರ ಸ್ಥಾಪನೆಯೇ ನಮ್ಮ ಹೆಗ್ಗುರಿಯಾಗಬೇಕೆನ್ನುವವರ ನಡುವಿನ ಕಂದರಕ್ಕೆ ಸೇತುವೆಯಾದ ಭಗತ್‌ಸಿಂಗ್. ರಾಜಕೀಯ ಸ್ವಾತಂತ್ರ್ಯದ ಆಧಾರದ ಮೇಲೆ ಮಾತ್ರ ರಾಷ್ಟ್ರೀಯ ವಿಕಾಸ ಸಾಧ್ಯವೆಂಬ ದೃಷ್ಟಿಯಿಂದ ಹೋರಾಡಿದ ಚಿಂತಕ ಅವನು. ಕಾಲ್ಪನಿಕ ಅಹಿಂಸೆಯ ಶಕಕ್ಕೆ ಇತಿಶ್ರೀ ಹಾಡಿದವರ ಪ್ರತೀಕವಾದ ಭಗತ್ ಜನತೆ ಒಟ್ಟಾಗಿ ಮಾತ್ರ ಸ್ವಾತಂತ್ರ್ಯ ಗಳಿಸಬಲ್ಲುದೆಂದು ನಂಬಿದವನು. ಸ್ವಾತಂತ್ರ್ಯಕ್ಕಾಗಿ ಜೀವ ಮುಡಿಪಾಗಿಟ್ಟವನು. ಆದರೆ, ಅದಷ್ಟೇ ಆಂತಿಮ ಗುರಿಯೆಂದು ಭಾವಿಸಿದವನು. ಒಣಮರಗಳನ್ನು ಕಡಿಯುತ್ತಲೇ ಹೊಸ ಬೀಜಗಳ ಬಿತ್ತನೆಯ ಬಗ್ಗೆ ಆಲೋಚಿಸಿದವನು. ಉಗ್ರ ದೇಶಪ್ರೇಮಿ. ಎಂದರೆ, ಯಾವುದೋ ಭ್ರಾಮಕ ಭವ್ಯ ಸಾಮ್ರಾಜ್ಯದ ಪ್ರೇಮಿಯಲ್ಲ. ದೇಶವೆಂಬ ಮಾನವ ಸಮುದಾಯದ ಪ್ರೇಮಿ. ನಾವು ದಾರಿ ತಪ್ಪಿದರೂ ದಿಕ್ಕುತಪ್ಪದಂತೆ ತಡೆಯಬಲ್ಲ ಧ್ರುವತಾರೆ ಭಗತ್ ಸಿಂಗ್. ಅವನ ಹೋರಾಟದ ಪರಂಪರೆಯ ಹಕ್ಕು ಪಡೆದ ಕ್ರಾಂತಿಕಾರಿ ಜನತೆಯ ದೃಷ್ಟಿಯಿಂದ ಅವನ ವ್ಯಕ್ತಿತ್ವ ಹಾಗೂ ಜೀವನದ ಕ್ರಿಯಾಸರಣಿಯ ನಿರೂಪಣೆ ಇಲ್ಲಿದೆ. ಲೇಖಕ ಡಾ|| ಜಿ. ಆರ್. ನಮ್ಮ ಪರಿಸರದ ವೈಚಾರಿಕ ಚಿಂತನೆಯ ಬೆಳವಣಿಗೆಗೆ ಈಗಾಗಲೇ ನೀಡಿರುವ ಕಾಣಿಕೆಗೆ ಈ ಕೃತಿಯ ಮೂಲಕ ಹೃದಯ ತುಂಬಿದ್ದಾರೆ.

Author
Ramakrishna G
Publisher
Saahitya Bhandara

Reviews

There are no reviews for this product.

Write a review

Note: HTML is not translated!