ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಚೆನ್ನಬಸವ ನಾಯಕ - Chenna Basava Naayaka(Masti Venkatesh Iyengar)

  • ₹700

Add to Wish List

Compare this Product

Ex Tax: ₹700

Availability: In Stock

Product Code: CHENNABASAVANAYAKA

ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಜೂನ್ 6, 1891 - ಜೂನ್ 7, 1986) ಅವರು ಕನ್ನಡದ ಅಣ್ಣ! ವಿನಾಯಕ ಕೃಷ್ಣ ಗೋಕಾಕರು ಮಾಸ್ತಿಯವರನ್ನು ಕನ್ನಡದ ಆಸ್ತಿ ಎಂದು ಕರೆದರು. ಕುವೆಂಪು ಅವರು ‘ಮಾಸ್ತಿಯವರ ಸಾಹಿತ್ಯ ದೊಡ್ಡದು; ಅವರು ಅದಕ್ಕಿಂತಲೂ ದೊಡ್ಡವರೆಂದು ನನ್ನ ಭಾವನೆ‘ ಎಂದಿರುವ ಮಾತು ಅಕ್ಷರಶಃ ನಿಜ. ಮಾಸ್ತಿಯವರು ಬದುಕಿದ್ದು 95 ವರ್ಷಗಳು! ಇದರಲ್ಲಿ 65 ವರ್ಷಗಳ ಕಾಲ ಅವರು ಕನ್ನಡದಲ್ಲಿ ಬರೆದರು! ಇತರ ಸಾಹಿತಿಗಳಿಂದ ಕನ್ನಡ ಸಾಹಿತ್ಯ ಕೃತಿಗಳನ್ನು ಬರೆಯಿಸಿದರು. ಅನೇಕ ಜನರ ಪುಸ್ತಕಗಳು ಪ್ರಕಟವಾಗಲು ಹಣ ಸಹಾಯ ಮಾಡಿದರು ಇಲ್ಲವೇ ತಮ್ಮ ಸ್ವಂತ ಹಣದಿಂದ ಪ್ರಕಟಿಸಿದರು. ‘ಜೀವನ‘ ದಂತಹ ಮಾಸಪತ್ರಿಕೆಯನ್ನು 21 ವರ್ಷಗಳ ಕಾಲ ನಡೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಕರ್ನಾಟಕದಲ್ಲಿ ಕನ್ನಡ ಜಾಗೃತಿಯನ್ನುಂಟು ಮಾಡಿದರು. ಮಾಸ್ತಿಯವರು ಸುಮಾರು 15,000 ಪುಟಗಳ ಸಾಹಿತ್ಯವನ್ನು ಕನ್ನಡಿಗರಿಗೆ ಬಿಟ್ಟುಹೋಗಿದ್ದಾರೆ ಎಂದರೆ ಅವರ ಪ್ರತಿಭೆ ಎಂತಹ ದೈತ್ಯ ಸ್ವರೂಪದ್ದಾಗಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳಬಹುದು. ಅವರ ಗದ್ಯ ಶೈಲಿ ಎಷ್ಟು ಸರಳವಾಗಿದೆ, ಎಷ್ಟು ಆಕರ್ಷಕವಾಗಿದೆ ಎಂದರೆ, ಅಂತಹ ಶೈಲಿಯನ್ನು ರೂಪಿಸಿಕೊಂಡ ಮತ್ತೊಬ್ಬ ಸಾಹಿತಿ ಅಪರೂಪ. ಮಾಸ್ತಿಯವರ ಬದುಕನ್ನು ಶ್ರೀ ಟಿ.ಎಸ್.ಗೋಪಾಲ್ ಅವರು ಈ ಪುಸ್ತಕದಲ್ಲಿ ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆ.

Author
Masti Venkatesh Iyengar
Publisher
Masti Venkatesh Iyengar Jeevana Karyalaya Trust

Reviews

There are no reviews for this product.

Write a review

Note: HTML is not translated!