ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಹಣ ಹಣಿ(ರಂಗಸ್ವಾಮಿ ಮೂಕನಹಳ್ಳಿ) - Hana Hani(Rangaswamy Mookanahalli)

  • ₹270₹240

Add to Wish List

Compare this Product

Ex Tax: ₹240

Availability: In Stock

Product Code: HANAHANI

ನಾವು ಕ್ರಿಕೆಟ್, ಚೆಸ್, ಕಬಡ್ಡಿ : ಹೀಗೆ ಹಲವಾರು ಆಟಗಳನ್ನು ನೋಡಿದ್ದೇವೆ, ಆಡಿದ್ದೇವೆ.

ಆ ಆಟಗಳಿಗೆ ನಿಯಮಾವಳಿಗಳಿವೆ. ನಿಯಮವನ್ನು ಸರಿಯಾಗಿ ತಿಳಿದುಕೊಂಡವರು, ಶ್ರದ್ಧೆಯಿಂದ ಆಟವನ್ನು ಪ್ರಾಕ್ಟಿಸ್ ಮಾಡಿದವರು ಆಟದಲ್ಲಿ ಮೇಲುಗೈ ಸಾಧಿಸುವುದು ಸಹಜ. ಬದುಕು ಕೂಡ ಥೇಟ್ ಹೀಗೇ ಕಿಬ್ರೇ, ಇಲ್ಲೂ ನಿಯಮಾವಳಿಗಳಿವೆ. ಅದನ್ನು ಎಷ್ಟು ಬೇಗ ಅರಿತುಕೊಳ್ಳುತ್ತೇವೆ ಅಷ್ಟು ನಮಗೆ ಒಳ್ಳೆಯದು. ಈ ರೀತಿಯ ಹುಟ್ಟಿನಿಂದ-ಸಾವಿನವರೆಗೆ ಮನುಷ್ಯನ ಜೀವನದಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರಗಳಿಗೆ ಒಂದು ಔಟ್ ಲೈನ್ ಅಥವಾ ಒಂದು ಸ್ಟ್ಯಾಂಡರ್ಡ್ ಪ್ಯಾರಾಮೀಟರ್, ಪರಿಧಿಯನ್ನು ಇಲ್ಲಿಯವರೆಗೆ ಯಾರೂ ಹೇಳಿಲ್ಲ. ಏಕೆಂದರೆ ಬದುಕು ಎರಡು ಪ್ಲಸ್ ಎರಡು ನಾಲ್ಕಕ್ಕೆ ಸಮ ಎನ್ನುವಷ್ಟು ಸರಳವಲ್ಲ. ಆದರೆ ಬಹುಪಾಲು ಸಮಯ ನಾವು ಎಲ್ಲಕ್ಕೂ ಪ್ಯಾರಾಮೀಟರ್ ಸೆಟ್ ಮಾಡಬಹುದು. ವೈದ್ಯಕೀಯ ವಿಜ್ಞಾನದಲ್ಲಿ ಬಿಪಿ, ಶುಗರ್, ಪ್ಲೇಟೈಟ್ ಇಷ್ಟಿರಬೇಕು. ಎನ್ನುವ ಪ್ಯಾರಾಮೀಟ‌ರ್ ಇದೆ. ಅದೇ ರೀತಿ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳಲು ಒಂದು ಪ್ಯಾರಾಮೀಟರ್ ಸೃಷ್ಟಿಸುವ ಪ್ರಯತ್ನ ಈ ಪುಸ್ತಕದಲ್ಲಿ ಮಾಡಿದ್ದೇನೆ. ಹೇಗೆ ಬಿಪಿ. ಶುಗರ್ ಅವರು ಹೇಳಿದಷ್ಟು ಎಲ್ಲರಲ್ಲೂ ಇರುವುದಿಲ್ಲವೋ ಹಾಗೆಯೇ ಇಲ್ಲಿ ನಾನು ಹೇಳಿರುವ ಪ್ಯಾರಾಮೀಟರ್ ಕೂಡ ನಿಮ್ಮ ಬದುಕಿನ ಲೆಕ್ಕಾಚಾರಕ್ಕಿಂತ ಭಿನ್ನವಾಗಿರಬಹುದು. ಇಲ್ಲಿ ಹೇಳಿರುವುದು ಒಂದು ಸ್ಟ್ಯಾಂಡರ್ಡ್ ಪರಿಧಿ. ಇದರ ಸುತ್ತಮುತ್ತವಿದ್ದರೆ ಅಷ್ಟರಮಟ್ಟಿಗೆ ನಮ್ಮ ಬದುಕು ಸರಾಗ.

Reviews

There are no reviews for this product.

Write a review

Note: HTML is not translated!