₹200
Ex Tax: ₹200
"ಏಕಕಾಲಕ್ಕೆ ಐವರು ಪ್ರೇಯಸಿಯರು ಇರಬೇಕು ಅಂತ ಆಸೆಪಟ್ಟೆ. ಒಬ್ಬಳು ಕೈ ಕೊಟ್ಟರೆ ಸಮಾಧಾನಿಸಲು ಮತ್ತೊಬ್ಬಳಾದರೂ ಇರುತ್ತಾಳೆ ಅನ್ನುವುದು ನನ್ನ ಲೆಕ್ಕಾಚಾರ ಆಗಿತ್ತು.ಇಂಥದ್ದೊಂದು ಇಮೋಷನಲ್ ಇನ್ಶೂರೆನ್ಸ್ ಪಾಲಿಸಿ ಇಲ್ಲದೇ ಬದುಕುವುದಾದರೂ ಹೇಗೆ?ಹಾಗಂತ ಬರೆದುಕೊಂಡ ಅಮೆರಿಕನ್ ನಟ ಮರ್ಲನ್ ಬ್ರಾಂಡೋನನ್ನು ಒಂದು ಮಧ್ಯಾಹ್ನ ನನಗೆ ಪರಿಚಯ ಮಾಡಿಕೊಟ್ಟವರು ಪಿ. ಲಂಕೇಶ್. ಆಮೇಲೆ ಅವನ ಜೀವನಚರಿತ್ರೆ ಓದಿದೆ. ಅವನು ಮುಟ್ಟಿದರೆ ಕರಗಿಹೋಗುವ ಮಂಜಿನ ಹನಿಯಂತಿದ್ದ. ಯಾವ ಹೆಣ್ಣನ್ನೂ ನಂಬುತ್ತಿರಲಿಲ್ಲ. ಅವರನ್ನು ದ್ವೇಷಿಸುತ್ತಲೇ ಪ್ರೀತಿಸುವಂತೆ ನಟಿಸುತ್ತಿದ್ದ. ನಟನೆಯೆಂಬುದು ಮತ್ತೊಬ್ಬರನ್ನು ನಂಬಿಸಲು ಹೆಣಗಾಡುವ ಮನುಷ್ಯನಿಗೆ ಸಿಕ್ಕ ಶಾಪ. ನಾವೆಷ್ಟೇ ಚೆನ್ನಾಗಿ ನಟಿಸಿದರೂ ಯಾರಲ್ಲೂ ನಂಬಿಕೆ ಹುಟ್ಟಿಸಲಾರೆವು. ಸಹಜ ಪ್ರತಿಕ್ರಿಯೆಗಳುನಟನೆಯಂತೆಯೂ ನಟನೆ ಸಹಜವಾಗಿಯೂ ಕಾಣುವ ಸನ್ನಿವೇಶದಲ್ಲಿ ಚಿರಂಜೀವಿಯಾದ ಅಶ್ವತ್ಥಾಮ ಸತ್ತ ಅನ್ನುವ ಸುದ್ದಿಯನ್ನು ದ್ರೋಣ ನಂಬುವುದು ಎಂಥ ದುರಂತ. ಪ್ರೀತಿಯೂ ಅಂಥದ್ದೇ. ಅದು ಸಾಯಿಸುತ್ತದೆ ಅಂತ ಗೊತ್ತಿದ್ದರೂ ನಮ್ಮ ಜೀವ ಕೊಟ್ಟು ಅದನ್ನು ಬದುಕಿಸುತ್ತಲೇ ಇರುತ್ತೇವೆ. ಈ ಕಾದಂಬರಿಯಲ್ಲಿ ಅಶ್ವತ್ಥಾಮ ಪ್ರೀತಿಗಾಗಿ ಹಂಬಲಿಸಿ ಸೋತ ಕ್ಷಣಗಳಿವೆ."..
Add to Cart