ಸೋಲನ್ನು ಸೋಲಿಸಿ(ಗೋಪಾಲ್ ಯಡಗೆರೆ) - Solannu Solisi(Gopal Yadagere)
- Product Code: XN-SS-GY
- Availability: In Stock
- ₹150.00
₹135.00
ಶೇಕಡಾ ಒಂದರಷ್ಟು ಸ್ಫೂರ್ತಿ ಮತ್ತು ಶೇಕಡಾ ತೊಂಬತ್ತೊಂಬತ್ತರಷ್ಟು ಪರಿಶ್ರಮದಿಂದ ಯಶಸ್ಸು ಲಭಿಸುತ್ತದೆ ಎನ್ನುತ್ತಾರೆ ಖ್ಯಾತ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್, ಹೌದು, ಸ್ಫೂರ್ತಿ ಇಲ್ಲದಿದ್ದರೆ ನಾವು ಪರಿಶ್ರಮ ಪಡಲು ಹೋಗುವುದಿಲ್ಲ, ಯಶಸ್ಸಿನ ಮಾತಂತೂ ��ತ್ತಿರ ಸುಳಿಯುವುದಿಲ್ಲ ಬಿಡಿ. ಈ ಸ್ಫೂರ್ತಿಯನ್ನು ಪಡೆಯುವುದು ಹೇಗೆ? ಇದಕ್ಕಾಗಿ ನಾವೆಲ್ಲರೂ ಹೊರ ಜಗತ್ತಿನಲ್ಲಿಯೇ ಹುಡುಕಾಟ ನಡೆಸುತ್ತಾ ಬಂದಿದ್ದೇವೆ. ಮಹಾತ್ಮರ ಜೀವನ, ಇನ್ಯಾರದೋ ಹೇಳಿಕೆ, ಯಶಸ್ವಿ ಸಾಧಕರ ಏಳು-ಬೀಳು... ಹೀಗೆ ನಮ್ಮ ಹುಡುಕಾಟಕ್ಕೆ ಎಲ್ಲೆ ಇಲ್ಲ. ಇದೆಲ್ಲಾ ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಹುಡುಕಾಟ ನಡೆಸಿದಂತೆ. ಖಂಡಿತಾ ಹೌದು, ಈ ಪುಸ್ತಕ ಓದುತ್ತಾ ಹೋದಂತೆ ಇದು ನಿಮ್ಮ ಅರಿವಿಗೆ ಬರುತ್ತದೆ. ಜೀವನದಲ್ಲಿನ ಘಟನೆಗಳನ್ನು ಪಾಸಿಟಿವ್ ಆಗಿ ನೋಡಿ, ಅದರಿಂದಲೇ ಸ್ಫೂರ್ತಿ ಪಡೆಯುವುದು ಹೇಗೆಂಬದನ್ನು ಗೋಪಾಲ್ ಯಡಗೆರೆ ಇಲ್ಲಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ನೀವೂ ಓದಿ, ಜೀವನದಲ್ಲಿನ ಸೋಲುಗಳನ್ನು ಸೋಲಿಸುತ್ತಾ, ಗೆಲುವಿನೆತ್ತರಕ್ಕೆ ಜಿಗಿಯಿರಿ...

