ಥ್ಯಾಂಕ್ಯೂ ಟೀಚರ್ : ಗುರುವೇ ನಿಮ್ಮನೆಂತು ಮರೆವೇ(ವಿರೂಪಾಕ್ಷ ದೇವರಮನೆ) - Thank You Teacher(Virupaksha Devaramane)
- Product Code: XN-TY-VD
- Availability: In Stock
- ₹200.00
₹180.00
ಡಾ. ವಿರೂಪಾಕ್ಷ ದೇವರಮನೆ ಅವರು ಬರೆದ ಕೃತಿ-ಥ್ಯಾಂಕ್ಯೂ ಟೀಚರ್. ಗುರುವೇ ನಿಮ್ಮನೆಂತು ಮರೆವೆ-ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಮಕ್ಕಳ ಸಮಸ್ಯೆಗಳನ್ನು ತಾಯಿ ಬಲ್ಲಳು. ನಂತರ ಬಲ್ಲ ವ್ಯಕ್ತಿ ಎಂದರೆ ಶಿಕ್ಷಕಿ. ಹೀಗಾಗಿ, ಮಕ್ಕಳು ತಾಯಿ ಹಾಗೂ ಶಿಕ್ಷಕಿಯರ ಮಾತು ಹೊರತುಪಡಿಸಿ ಉಳಿದೆಲ್ಲರ ಮಾತು ಕೇಳುವುದು ಸ್ವಲ್ಪ ಕಷ್ಟವೇ. ಏಕೆಂದರೆ, ಮಕ್ಕಳ ಮನೋಜಗತ್ತನ್ನು ಅರಿಯಲು ಈ ಇಬ್ಬರಿಗೆ ಮಾತ್ರ ಹೆಚ್ಚು ಸಾಧ್ಯವಾಗುತ್ತದೆ ಎಂದು ಮನೋವೈಜ್ಞಾನಿಕ ಅಧ್ಯಯನಗಳನ್ನು ಆಧರಿಸಿ ಲೇಖಕರು ತಮ್ಮ ಬರಹಗಳನ್ನು ಅರ್ಥವತ್ತಾಗಿಸಿದ್ದಾರೆ. ಮತ್ತು, ಸ್ವತಃ ಲೇಖಕರು ಮನೋ��ಿಜ್ಞಾನಿಯೂ ಆಗಿದ್ದರಿಂದ, ಬರಹಗಳು ಹೆಚ್ಚು ವಿಶ್ವಾಸಭರಿತ ಹಾಗೂ ಆತ್ಮೀಯವಾಗಿವೆ. ಪಾಲಕರು ತಮ್ಮ ಮಕ್ಕಳನ್ನು ಮತ್ತು ಜನಸಾನಮಾನ್ಯರೂ ಸಹ ಮಕ್ಕಳ ಮನಸ್ಸನ್ನು ಅರಿಯಲು ಸಹಾಯಕವಾಗುವ ಉತ್ತಮ ಕೈಪಿಡಿ ಮಾದರಿಯ ಕೃತಿ ಇದು.


