WhatsApp ಮೂಲಕ ಸಂಪರ್ಕಿಸಿ
ಸಾಲ(ರಂಗಸ್ವಾಮಿ ಮೂಕನಹಳ್ಳಿ) - Saala(Rangaswamy Mookanahalli)

ಸಾಲ(ರಂಗಸ್ವಾಮಿ ಮೂಕನಹಳ್ಳಿ) - Saala(Rangaswamy Mookanahalli)

  • Product Code: SAAVU
  • Availability: In Stock
  • ₹270.00
  • ₹220.00

ಇವತ್ತು ಜಗತ್ತು ನಿಂತಿರುವುದು ಸಾಲದ ಮೇಲೆ! ನೀವು ಗಮನಿಸಿ ನೋಡಿ, ಜಗತ್ತಿನಲ್ಲಿ ಅತಿ ದೊಡ್ಡ ಉತ್ಪಾದನಾ ಘಟಕಗಳಿವೆ. ಅಲ್ಲಿ ಅವರು ನಿಮ್ಮ ಬದುಕಿಗೆ ಬೇಕಾದ ವಸ್ತುಗಳಿಗಿಂತ ಬೇಡವಾದ ವಸ್ತುಗಳನ್ನು ಉತ್ಪಾದಿಸುತ್ತಾರೆ. ಅದನ್ನ ನಿಮಗೆ ಮಾರಲು ಮಾರ್ಕೆಟಿಂಗ್‌ ತಂತ್ರವನ್ನು ಅನುಸರಿಸುತ್ತಾರೆ. ನಿಮ್ಮ ಬಳಿ ಹಣವಿಲ್ಲದದ್ದಿರೆ ನಿಮಗೆ ಸಾಲ ನೀಡುತ್ತಾರೆ. ಸಾಲ ನೀಡಿದ ಹಣದಲ್ಲಿ ನಿಮ್ಮಿಂದ ಖರ್ಚು ಮಾಡಿಸಿ ಅದೇ ಹಣವನ್ನು ಮತ್ತೆ ತಮ್ಮ ಬಳಿಗೆ ತರಿಸಿಕೊಳ್ಳುತ್ತಾರೆ. ನಿಮಗೆ ಗೊತ್ತಿಲ್ಲದೇ ನೀವು, ನಿಮಗೆ ಬೇಡವಾದ ವಸ್ತುವನ್ನು ಕೊಂಡು ಸಾಲಗಾರರಾಗುತ್ತೀರಿ. ಅದಕ್ಕೆ ಕಂತು ಕಟ್ಟುತ್ತೀರಿ, ಕಂತು ಕಟ್ಟಲು ವೇತನಕ್ಕೆ ಮತ್ತೆ ಅವರ ಬಳಿ ದುಡಿಯುತ್ತೀರಿ. ನಿಮ್ಮ ಸಮಯ ಎನ್ನುವುದನ್ನು ಅವರಿಗೆ ಒತ್ತೆ ಇಡುತ್ತೀರಿ. ಇಷ್ಟೆಲ್ಲಾ ಮಾಡಿ ಸುಸ್ತಾಗಿ ಬಂಡವಾಳಶಾಹಿಗಳು ಕಟ್ಟಿದ ರೆಸಾರ್ಟ್‌ನಲ್ಲಿ ವಿಶ್ರಮಿಸುತ್ತೀರಿ. ಎಲ್ಲವನ್ನೂ ಮಾಡುತ್ತೀರಿ ಆದರೆ `ನಿಮಗೆ ಬೇಕಾದ ಬದುಕನ್ನು ನೀವು ಬದುಕಿದಿರಾ?' ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಸಿಗುವುದಿಲ್ಲ. ಏಕೆಂದರೆ ಇಂಟರ್‌ನೆಟ್‌, ಬದುಕು, ಯಶಸ್ಸು, ಹಣ ಇವುಗಳ ಹಿಂದಿನ ಓಟದಲ್ಲಿ ನಮ್ಮೊಂದಿಗೆ ನಾವು ಸಂವಹನ ನಡೆಸುವುದು ಬಿಟ್ಟು ದಶಕಗಳು ಮಾತ್ರ ಸದ್ದಿಲ್ಲದೇ ಕರಗಿ ಹೋಗಿದೆ. ಸಾಲ ಮಾಡುವುದು ತಪ್ಪಲ್ಲ. ಲಿವರೇಜ್‌ ಶಕ್ತಿಯ ಅರಿವಿಲ್ಲದೆ ಸಾಲ ಮಾಡುವುದು ಅಪರಾಧ. ಈ ಪುಸ್ತಕದಲ್ಲಿ ನಿಮಗೆ ಲಿವರೇಜ್‌ ಶಕ್ತಿಯ ಪರಿಚಯ ಮಾಡುವ ಪ್ರಯತ್ನವಿದೆ. 

There are no reviews for this product.

Write a review

Note: HTML is not translated!
Bad           Good

Related Products

ಗಳಿಕೆ ಉಳಿಕೆ ಹೂಡಿಕೆ(ರಂಗಸ್ವಾಮಿ ಮೂಕನಹಳ್ಳಿ) - Galike Ulike Hoodike(Rangaswamy Mookanahalli)

ಗಳಿಕೆ ಉಳಿಕೆ ಹೂಡಿಕೆ(ರಂಗಸ್ವಾಮಿ ಮೂಕನಹಳ್ಳಿ) - Galike Ulike Hoodike(Rangaswamy Mookanahalli)

ಹಣಕಾಸು ವ್ಯವಸ್ಥೆಯನ್ನು ಹೇಗೆ ಕಟ್ಟಲಾಗಿದೆ ಎನ್ನುವುದನ್ನು ಎಲ್ಲಕ್ಕೂ ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು. ನಿಮಗೆಲ್ಲಾ ..

₹243.00 ₹270.00
ಹಣ ಏನಿದು ನಿನ್ನ ವಿಚಿತ್ರ ಗುಣ((ರಂಗಸ್ವಾಮಿ ಮೂಕನಹಳ್ಳಿ) - Hana Yenidu Ninna Vichitra Guna(Rangaswamy Mookanahalli)

ಹಣ ಏನಿದು ನಿನ್ನ ವಿಚಿತ್ರ ಗುಣ((ರಂಗಸ್ವಾಮಿ ಮೂಕನಹಳ್ಳಿ) - Hana Yenidu Ninna Vichitra Guna(Rangaswamy Mookanahalli)

ಹಣ ಏನಿದು ನಿನ್ನ ವಿಚಿತ್ರ ಗುಣ ನಿಮಗೆಲ್ಲಾ ಆನೆಯ ಕಥೆ ಗೊತ್ತಿರುತ್ತದೆ ಎಂದು ಭಾವಿಸುವೆ. ಒಂದು ಮರಿ ಆನೆಯ ಕಾಲಿಗೆ ಸರಪಳ..

₹162.00 ₹180.00
8 ಹಣಕಾಸು ನಿಯಮಗಳು(ರಂಗಸ್ವಾಮಿ ಮೂಕನಹಳ್ಳಿ) - 8 Hanakasu Niyamagalu(Rangaswamy Mookanahalli)

8 ಹಣಕಾಸು ನಿಯಮಗಳು(ರಂಗಸ್ವಾಮಿ ಮೂಕನಹಳ್ಳಿ) - 8 Hanakasu Niyamagalu(Rangaswamy Mookanahalli)

ಟೈಮ್‌ ಇಲ್ಲ, ಹಣವಿಲ್ಲ ಎನ್ನುವ ಗೊಣಗಾಟ ಜಗತ್ತಿನ 90 ಪ್ರತಿಶತ ಜನರದ್ದು! ಉಳಿದ ಹತ್ತು ಪ್ರತಿಶತ ಜನರಲ್ಲಿ ಕೂಡ ಏಳ..

₹160.00 ₹180.00
ಹೂಡಿಕೆದಾರರ ಕೈಪಿಡಿ ಭಾಗ -1(ಚಂದ್ರಶೇಖರ ಮದಭಾವಿ) - Hoodikedaarara Kaipidi Vol.-1(Chandrashekhar Madabhavi)

ಹೂಡಿಕೆದಾರರ ಕೈಪಿಡಿ ಭಾಗ -1(ಚಂದ್ರಶೇಖರ ಮದಭಾವಿ) - Hoodikedaarara Kaipidi Vol.-1(Chandrashekhar Madabhavi)

ಹಣವನ್ನು ಕೇವಲ ಸಂಪಾದಿಸುವುದಲ್ಲ, ಅದು ನಿಮಗಾಗಿ ದುಡಿಯುವಂತೆ ಮಾಡುವುದು ಹೇಗೆ? ಈ ಪುಸ್ತಕವು ಹಣವನ್ನು ಕೇವಲ ಸಂಪ..

₹130.00 ₹150.00