WhatsApp ಮೂಲಕ ಸಂಪರ್ಕಿಸಿ
ಉತ್ತರೆ(ಮೋಹನ ಭಾಸ್ಕರ ಹೆಗಡೆ) - Uttare(Mohan Bhaskar Hegde)

ಉತ್ತರೆ(ಮೋಹನ ಭಾಸ್ಕರ ಹೆಗಡೆ) - Uttare(Mohan Bhaskar Hegde)

  • Product Code: UTTARE
  • Availability: In Stock
  • ₹250.00
  • ₹220.00



ದ್ರೌಪದಿಯ ಛಲವಿಲ್ಲಕುಂತಿಯ ಹಠವಿಲ್ಲಗಾಂಧಾರಿಯ ಕಾಠಿಣ್ಯವಿಲ್ಲ.

ದುರಂತವಾಗಿಯೂ ದುರಂತವಲ್ಲದಂತಾದ ಪಾತ್ರ ಉತ್ತರೆ.

ಆರು ತಿಂಗಳ ದಾಂಪತ್ಯ ಆರಿಹೋದ ಮೇಲೆ ಗರ್ಭದಲ್ಲದ್ದಿ ಮಗುವೊಂದೇ ಕುರುಕುಲದ ಏಕೈಕ ವಾರೀಸುದಾರ. ಅದೂ ಶಾಪಿತ ಪಿಂಡ. ಅದನ್ನು ಹೊತ್ತುಕೊಂಡು ಬಂದ ಹಸ್ತಿನಾವತಿ ಶೋಕಸ್ಥ. ಕೃಷ್ಣನ ಕಾರುಣ್ಯದಿಂದ ಕುಲಕ್ಷಯದ ಹೊತ್ತಲ್ಲಿ ಬಂದ ಪರಿ ರಕ್ಷಿತ ಮಗ.

ಗೆಳೆಯ ಮೋಹನ ಹೆಗಡೆಯವರ ಚೊಚ್ಚಲ ಕಾದಂಬರಿ ಉತ್ತರೆ ಭಕ್ತಿಭಾವಸಂಕೀರ್ತನೆವೀರವಿಷಾದದುಃಖ ದುಮ್ಮಾನಗಳಿಲ್ಲದ ಯುದ್ಧೋತ್ತರ ಹಸ್ತಿನಾವತಿಯ ನಿರುಮ್ಮಳ ನಿರೂಪಣೆ.

ಉಪ್ಪರಿಗೆಯ ಮೇಲಿದ್ದಾಳೆ ಉತ್ತರೆ ಎಂದು ಆರಂಭವಾಗುವ ಕಾದಂಬರಿ ಉತ್ತರೆಯನ್ನು ಕಾದಂಬರಿಯದ್ದುಕ್ಕೂ ಬೇರೆಬೇರೆ ಪಾತ್ರಗಳ ಮೂಲಕ ನೋಡುತ್ತದೆ. ಕಾದಂಬರಿಯ ಕೊನೆಯಲ್ಲಿ ಕಣ್ಣು ಮುಚ್ಚಿ ಮಲಗದ್ದಿ ಉತ್ತರೆ ವಿರಾಟ ಭಾರತವನ್ನು ಕಾಣುತ್ತಾಳೆ. ಆ ವಿರಾಟಭಾರತದಲ್ಲಿ ಎಲ್ಲರೂ ನಾಶವಾದ ಅವಳ ತವರೂ ಇದೆ,ಅವಳಿರುವ ಕುರುಕುಲದ ಉತ್ತರೋತ್ತರತೆಯೂ ಇದೆ.

ಈ ಕಾದಂಬರಿ ಹಸ್ತಿನಾವತಿಯ ಅರಮನೆಗಳೊಳಗೆ ಸುತ್ತಾಡುತ್ತದೆ. ಕುಂತಿದ್ರೌಪದಿಉತ್ತರೆ ಎಂಬ ಮೂರು ತಲೆಮಾರಿನ ಹಸ್ತಿನಾವತಿಯ ಅಂತಃಪುರದ ಪಾತ್ರಗಳು ಇಲ್ಲಿ ಸಂಭಾಷಿಸುತ್ತವೆ. ಈ ಹೊತ್ತಿಗೆ ಎಲ್ಲವೂ ಮುಗಿದಿದೆ ಮತ್ತು ಹೊಸತೊಂದು ಆರಂಭವಾಗಿದೆ. ಮುಗಿದ ಕಾಲ ಮತ್ತು ಶುರುವಿಟ್ಟುಕೊಂಡ ಕಾಲಗಳ ಸಮಾಗಮದಲ್ಲಿ ಸಂಧಿಸುವ ಮೂರು ಪಾತ್ರಗಳು ಭೂತವನ್ನು ನಿಡುಸುಯ್ಯಲಿಂದ ನೋಡುತ್ತವೆ ಮತ್ತು ಭವಿಷ್ಯವನ್ನು ಬೆಳಕಿನಿಂದ ಕಾಣುತ್ತವೆ.

ಎಲೆಮನೆಗೂ ಅರಮನೆಗೂ ಸಂಕಟ ಸಂತೋಷ ಎರಡೂ ಒಂದೇ... ಎನ್ನುತ್ತದೆ ಕಾದಂಬರಿ. ಅದನ್ನು ತೋರಿಸುವಲ್ಲಿ ಕಾದಂಬರಿಕಾರ ಯಶಸ್ವಿಯಾಗಿದ್ದಾರೆ.

-ಗೋಪಾಲಕೃಷ್ಣ ಕುಂಟಿನಿ 

There are no reviews for this product.

Write a review

Note: HTML is not translated!
Bad           Good

Related Products

ಭೀಷ್ಮ ಹೇಳಿದ ಮ್ಯಾನೇಜ್ ಮೆಂಟ್ ಕಥೆಗಳು(ಜಗದೀಶಶರ್ಮಾ ಸಂಪ) - Bheeshma Helida Management Kathegalu(Jagadisha Sharma Sampa)

ಭೀಷ್ಮ ಹೇಳಿದ ಮ್ಯಾನೇಜ್ ಮೆಂಟ್ ಕಥೆಗಳು(ಜಗದೀಶಶರ್ಮಾ ಸಂಪ) - Bheeshma Helida Management Kathegalu(Jagadisha Sharma Sampa)

ಅವನು ಎಂಟು ನೂರು ವರ್ಷಗಳ ಸುದೀರ್ಘ ಕಾಲ ಬದುಕಿದ್ದ. ಆರಕ್ಕೂ ಹೆಚ್ಚು ತಲೆಮಾರುಗಳನ್ನು ಕಂಡಿದ್ದ. ಅದಕ್ಕೂ ಹಿಂದೆ ಅವನದ್ದ..

₹180.00 ₹200.00
ಮಹಾಭಾರತ ಅನ್ವೇಷಣೆ(ಜಗದೀಶಶರ್ಮಾ ಸಂಪ) - Mahabharata Anveshane(Jagadisha Sharma Sampa)

ಮಹಾಭಾರತ ಅನ್ವೇಷಣೆ(ಜಗದೀಶಶರ್ಮಾ ಸಂಪ) - Mahabharata Anveshane(Jagadisha Sharma Sampa)

ಮಹಾಭಾರತ ಅನ್ವೇಷಣೆ ಹುಡುಕಿದಷ್ಟೂ ಹುಡುಕಲು ಉಳಿಯುವ ಅನನ್ಯತೆ ಮಹಾಭಾರತದ್ದು. ವ್ಯಾಸರು ಬರೆದಂದಿನಿಂದ ಈ ಹುಡುಕಾಟ ನಡೆದ..

₹162.00 ₹180.00
ನಿತ್ಯ ಚೈತನ್ಯಕ್ಕೆ ಸರಳ ಸೂತ್ರಗಳು(ಶ್ವೇತಾ ಭಿಡೆ) - Nitya Chaitanyakke Sarala Sutragalu(Shwetha Bhide)

ನಿತ್ಯ ಚೈತನ್ಯಕ್ಕೆ ಸರಳ ಸೂತ್ರಗಳು(ಶ್ವೇತಾ ಭಿಡೆ) - Nitya Chaitanyakke Sarala Sutragalu(Shwetha Bhide)

ನನಗ್ಯಾಕೆ ಯಾವಾಗಲೂ ಸುಸ್ತಾಗುತ್ತದೆ? ನಾನ್ಯಾಕೆ ಹೀಗೆ? ಅವರಂತೆ ನಾನ್ಯಾಕೆ ಫಿಟ್‌ ಇಲ್ಲ? ಎನ್ನುವ ಅನೇಕ ಪ್ರಶ..

₹160.00 ₹180.00