ಕಾಲಾಯ ತಸ್ಮೈ ನಮಃ : ಪತ್ತೇದಾರಿ ಕಾದಂಬರಿ(ಕೌಶಿಕ್ ಕೂಡುರಸ್ತೆ) - Kalaya Thasmai Namaha : Pathedaari Kadambari(Kowshik Kudurasthe)
- Product Code: XN-KTN-KK
- Availability: In Stock
- ₹100.00
₹90.00
‘ಕಾಲಾಯ ತಸ್ಮೈ ನಮಃ’ ಕೌಶಿಕ್ ಕೂಡುರಸ್ತೆ ಅವರು ರಚಿಸಿರುವ ಪತ್ತೇದಾರಿ ಕಾದಂಬರಿ. ಈ ಕೃತಿಗೆ ಪ್ರಶಾಂತ ಭಟ್ ಹಾಗೂ ಗುಬ್ಬಚ್ಚಿ ಸತೀಶ್ ಅವರ ಬೆನ್ನುಡಿಯಿದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಆತ್ಮೀಯ ಎಂಬ ಸತ್ಯ ಘಟನೆ ಆಧಾರಿತ ಕಾದಂಬರಿ ಬರೆದ ಕೌಶಿಕ್ ಎರಡನೆಯ ಪ್ರಯತ್ನವಾಗಿ ಕಾದಂಬರಿ ಬರೆದಿದ್ದಾರೆ ಅನ್ನುವಾಗ ಆಶ್ಚರ್ಯವಾಗಿತ್ತು. ಈ ಪ್ರಕಾರದಲ್ಲಿ ಓದುಗರ ಕುತೂಹಲ ಕಾದಿಟ್ಟುಕೊಂಡು ಕತೆ ಹೆಣಿಗೆ ಜಾಡು ತಪ್ಪದ ಹಾಗೇ ಬರೆಯುವುದು ಕಷ್ಟವೇ, ಆದರೆ ಈ ಕಾದಂಬರಿ ಓದುವಾಗ ಓದುಗನಿಗೆ ಕೊನೆಯವರೆಗೆ ಗುಟ್ಟು ಬಯಲಾಗದಂತೆ ಬರೆದ ರೀತಿ ಖುಷಿ ಕೊಟ್ಟಿತು’ ಎನ್ನುತ್ತಾರೆ ಪ್ರಶಾಂತ್ ಭಟ್. ಜೊತೆಗೆ ಒಳ್ಳೆಯ ನಿರ್ದೇಶಕ ಸಿಕ್ಕರೆ ಕುತೂಹಲಭರಿತ ಸಿನಿಮಾ ಆಗಬಲ್ಲ ಕಥೆಯೊಂದು ಇಲ್ಲಿದೆ, ಕೌಶಿಕ್ ರ ಲೇಖನಿಯಿಂದ ಮುಂದೇನು ಬರಬಹುದು ಎಂಬ ಕುತೂಹಲ ನನಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

