ಅಂಶ(ರಂಜಿತ್ ರಾಧಾಕೃಷ್ಣನ್) - Amsha(Ranjit Radhakrishnan)
- Product Code: XN-MSH-RNJ-RDH
- Availability: In Stock
- ₹299.00
₹269.10
ಮಹಾವಿಷ್ಣುವಿನ 6ನೇ ಅವತಾರವಾದ ಪರಶುರಾಮನ 'ಅಂಶ' ಅನುವಾದಿತ ಕೃತಿಯು, ಪಾರ್ಥ್ ಪ್ರಕಾಶನದ ವತಿಯಿಂದ ನವೆಂಬರ್ 30ನೇ ತಾರೀಖು ಲೋಕಾರ್ಪಣೆಗೊಂಡಿದೆ. ಮೂಲ ಆಂಗ್ಲ ಕೃತಿ ' ರಾಮ ಆಫ್ ದಿ ಆಕ್ಸ್ ' ಅನ್ನು ರಂಜಿತ್ ರಾಧಾಕೃಷ್ಣನ್ ಅವರು ರಚಿಸಿದ್ದು, ಕನ್ನಡಕ್ಕೆ ಅಮೂಲ್ಯ ಎಸ್ ಪ್ರಮೋದ್ ಅನುವಾದಿಸಿರುತ್ತಾರೆ. ಪುಸ್ತಕವು 464 ಪುಟಗಳನ್ನು ಒಳಗೊಂಡಿದ್ದು, ಬೆಲೆ 299/-. ಜಮದಗ್ನಿ ಹಾಗು ರೇಣುಕೆಯರ ಧರ್ಮನಿಷ್ಠ ದಾಂಪತ್ಯಕ್ಕೆ ಜನಿಸಿದ ರಾಮಭದ್ರ, ಜನ್ಮತಃ ಪಡೆದ ಧರ್ಮಕ್ಕೆ ಅಪವಾದ ಎನ್ನುವಂತೆ, ಯೋಧನ ಪ್ರವೃತ್ತಿ ಪಡೆದು ಹೋರಾಡುವುದರ ಜೊತೆಗೆ, ತನಗರಿವಿಲ್ಲದೆಯೇ ಭವಿಷ್ಯವಾಣಿಯೊಂದರ ಭಾರವನ್ನೇ ಭುಜದ ಮೇಲೆ ಹೊತ್ತಿರುತ್ತಾನೆ. ಈ ಚಿತ್ತಾಕರ್ಷಕ ಶೌರ್ಯಗಾಥೆಯಲ್ಲಿ ಲೇಖಕರು, ಬ್ರಹ್ಮಕ್ಷತ್ರಿಯ ಪರಶುರಾಮನ ಪಾತ್ರದ ವಿವಿಧ ಮಜಲುಗಳನ್ನು ಬಹಳ ಸಮರ್ಥವಾಗಿ ಚಿತ್ರಿಸಿದ್ದಾರೆ. ಅಷ್ಟೇ ಅಲ್ಲದೆ, ಓದುಗರು ಈ ಹಿಂದೆ ಭಾರ್ಗವರಾಮನ ಕುರಿತು ಈವರೆಗೂ ಓದಿರದಿದ್ದ ಅದೆಷ್ಟೋ ಸುವಿಚಾರಗಳನ್ನು ಸಾದ್ಯಂತವಾಗಿ ವರ್ಣಿಸಿದ್ದಾರೆ.

