WhatsApp ಮೂಲಕ ಸಂಪರ್ಕಿಸಿ
ಡೂಡಲ್ ಕಥೆಗಳು(ಪೂರ್ಣಿಮಾ ಮಾಳಗಿಮನಿ) - Doodal Kathegalu(Poornima Malagimani)

ಡೂಡಲ್ ಕಥೆಗಳು(ಪೂರ್ಣಿಮಾ ಮಾಳಗಿಮನಿ) - Doodal Kathegalu(Poornima Malagimani)

  • Product Code: XN-DK-PM
  • Availability: In Stock
  • ₹200.00
  • ₹180.00



ಕತೆಗಾರ್ತಿ ಪೂರ್ಣಿಮಾ ಮಾಳಗಿಮನಿ ಅವರ ಕತೆಗಳ ಸಂಕಲನ ಡೂಡಲ್ ಕತೆಗಳು. ಕೃತಿಯಲ್ಲಿ ಹಿರಿಯ ಪತ್ರಕರ್ತ, ಲೇಖಕ ಗೋಪಾಲಕೃಷ್ಣ ಕುಂಟಿನಿ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಡೂಡಲಿಂಗ್ ಎನ್ನುವುದು ಸೃಜನಶೀಲ ಚಿಂತನೆಯನ್ನು ವಽಸುವ ಒಂದು ಕಲೆ. ಈ ಸಂಕಲನದಲ್ಲಿ ಬರುವ ಅಷ್ಟೂ ಕತೆಗಳು ಒಂದು ರೀತಿಯಲ್ಲಿ ಜೀವನದ ಬೃಹತ್ ಕ್ಯಾನ್ವಾಸ್ ಮೇಲೆ ನಾವಿಡುವ ಒಂದೊಂದು ಹೆಜ್ಜೆಯೂ ಮತ್ತೆ ತಿದ್ದಲಾಗದ ಡೂಡಲ್ ಮಾದರಿಯ ಚದುರಿದ ಚಿತ್ರಗಳಾಗಿಬಿಡುತ್ತವೆ ಎನ್ನುವುದನ್ನೇ ಹೇಳಿದಂತಿವೆ. ಆದರೆ ಎಲ್ಲಾ ಚಿತ್ರಗಳೂ ಒಂದಕ್ಕೊಂದು ಅಂಟಿಕೊಂಡು ಮತ್ತೊಂದು ಅರ್ಥವನ್ನು ಹುಟ್ಟಿಸಿ ಓದುಗನ ತಾದಾತ್ಮ್ಯವನ್ನು ಬಯಸುವಂತೆ ಮಾಡುತ್ತಿವೆ. ಹಾಗಾಗಿ ಇಲ್ಲಿನ ಒಂದೊಂದು ಕತೆಯೂ ಮತ್ತೊಂದರ ಕೊಂಡಿಯೋ ಎಂಬಂಥ ಸೂಕ್ಷ್ಮ ನೇಯ್ಗೆ ಎಂದಿದ್ದಾರೆ.

There are no reviews for this product.

Write a review

Note: HTML is not translated!
Bad           Good