ಅಪ್ಪನ ಹಾದಿ (ಗೆಲುವಿಗೆ ಬೇಕಾಗುವ ಬದುಕಿನ ಪಾಠಗಳು) (ರಂಗಸ್ವಾಮಿ ಮೂಕನಹಳ್ಳಿ) - Appana Haadi(Rangaswamy Mookanahalli)
- Product Code: XN-AH-RM
- Availability: In Stock
- ₹150.00
₹135.00
‘ಅಪ್ಪನ ಹಾದಿ’ ಕೃತಿಯು ರಂಗಸ್ವಾಮಿ ಮೂಕನಹಳ್ಳಿ ಅವರ ಲೇಖನ ಸಂಕಲನವಾಗಿದೆ. ಅಣ್ಣ ಸದಾ ಹೇಳುತ್ತಿದ್ದ ಬದುಕಿನ ಪಾಠಗಳು ನೂರಾರು, ಅಂದಿಗೆ ಅವು ಬದುಕಿಗೆ ಬೇಕಾಗುತ್ತದೆ, ಅವು ಅನುಭವದಿಂದ ದಕ್ಕಿದ ಪಾಠ, ನನಗೆ ಸರಾಗವಾಗಿ ಸಿಕ್ಕುತ್ತಿದೆ ಎನ್ನುವ ಲವಲೇಶ ಜ್ಞಾನವೂ ಇರಲಿಲ್ಲ. ಇಂದಿಗೆ ಅಣ್ಣ ಬೆಲೆ ಕಟ್ಟಲಾಗದ ಖಜಾನೆ ನನಗಾಗಿ ಬಿಟ್ಟು ಹೋಗಿದ್ದಾರೆ ಎನ್ನಿಸುತ್ತದೆ ಎಂಬುದನ್ನು ಕೃತಿಯ ಮುಖೇನ ಹಂಚಿಕೊಂಡಿದ್ದಾರೆ ಇಲ್ಲಿ ಲೇಖಕ. ಅಪ್ಪನ ಹಾದಿ ಕೃತಿಯಲ್ಲಿನ ಕೆಲವೊಂದು ನೆನಪುಗಳನ್ನು ಲೇಖಕ ಹೀಗೆ ತೆರೆದಿಟ್ಟಿದ್ದಾರೆ; 'ಭಟ್ಟ ಮಧ್ಯಮವರ್ಗದ ಜನರ ಮುಂದೆ ಹೆಚ್ಚಿನ ಆಯ್ಕೆಗಳಿಲ್ಲ . ನಾವು ಪ್ರಯತ್ನ ಪಡುತ್ತಲೆ ಇರಬೇಕು. ಸೋತಾಗ ಕುಗ್ಗದೆ , ಗೆದ್ದಾಗ ಬೀಗದೆ ನಡೆಯುತ್ತಲೆ ಇರಬೇಕು.' 'ಬದುಕಿಗೆ ಬ���ಕಾಗಿರುವುದು ಎಂಪಥಿ , ಸಿಂಪಥಿಯಲ್ಲ'. 'ಲಾಟರಿ ಟಿಕೆಟ್ ಕೊಳ್ಳದಿದ್ದರೆ ಅದು ನಮಗೆ ಸಿಕ್ಕುವ ಸಂಭಾವ್ಯತೆ ಶೂನ್ಯ .ನಾವು ಪ್ರಯತ್ನವನ್ನೇ ಪಡದಿದ್ದರೆ ? ಗೆಲುವಿನ ಸಂಭಾವ್ಯತೆ ಕೂಡ ಶೂನ್ಯ. ಸೊ ಬದುಕಿನಲ್ಲಿ ಚಾನ್ಸ್ ತೆಗೆದುಕೊಳ್ಳುತ್ತಾ ಇರಬೇಕು.' 'ಯಾರೂ ಸೋಲಬೇಕು , ಹಾಳಾಗಬೇಕು ಎಂದು ಯಾವುದನ್ನೂ ಮಾಡುವುದಿಲ್ಲ , ಬಟ್ ಕೆಲವೊಮ್ಮೆ ಸನ್ನಿವೇಶ , ಸಮಯ ನಮಗೆ ಜೊತೆಯಾಗುವುದಿಲ್ಲ ಎಂದಿದ್ದಾರೆ.

