ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಚಕೋರಿ - Chakori(Chandrashekhara Kambar)

  • ₹150

Add to Wish List

Compare this Product

Ex Tax: ₹150

Availability: In Stock

Product Code: CHAKORI

ಸಮಕಾಲೀನ ಪ್ರಸ್ತುತತೆಯ ಸೋಗು ಅಥವಾ ಸ್ಲೋಗನ್ನುಗಳನ್ನು ಹಾಕದೆ ಕಂಬಾರರ ‘ಚಕೋರಿ’ ಒಂದು ದೊಡ್ಡ ಸಮಕಾಲೀನ ಅಗತ್ಯವನ್ನು ಪೂರೈಸುತ್ತದೆ. ಕಂಬಾರರ ಮಿಥಿಕ ದೃಷ್ಟಿ ನೈಜೀರಿಯಾದ ವೊಲೆ ಶೋಯಂಕಾನ ಮಿಥಿಕ ದೃಷ್ಟಿಯನ್ನು ಹಲವು ರೀತಿಯಲ್ಲಿ ಹೋಲುವಂಥದು. ಶೋಯಂಕಾ ತನ್ನ ಯರೂಬಾ ಬಣದ ಸ್ಮೃತಿಗಳನ್ನು ಆಧರಿಸಿ ಇವತ್ತಿನ ಜಾಗತಿಕ ಅನುಭವದ ಸ್ಥಿರಬಿಂದುಗಳನ್ನು ತನ್ನ ಕೃತಿಯ ಮುಖೇನ ಯುರೋಪಿನ ಮೇಲುಸಂಸ್ಕೃತಿಗಳ ಕಥನಕ್ಕೆ ಪ್ರತಿಯಾಗಿ ಕಟ್ಟಿದ್ದಾನೆ. ಕಂಬಾರರ ಮಿಥಿಕ ದೃಷ್ಟಿ ಯುರೋಪಿನ ಮೇಲುಸಂಸ್ಕೃತಿಗಳಿಗಿಂತ ಭಿನ್ನವಾಗಿರುವುದಲ್ಲದೆ ಭಾರತದ ಅಫಿಷಿಯಲ್ ಸಂಸ್ಕೃತಿ (ರಾಮಾಯಣ, ಮಹಾಭಾರತ ಇತ್ಯಾದಿ)ಗಳ ಅಂಚಿನ ದ್ರವ್ಯಗಳಿಂದ ನಿರ್ಮಾಣವಾದುದು. ಹೀಗೆ ಮೇಲು ಪರಂಪರೆಯ ಹಿಡಿತದಿಂದ ಪೂರ್ತಿ ಬಿಡಿಸಿಕೊಂಡ ಕವಿಗಳು ಈ ಶತಮಾನದಲ್ಲಿ ಇನ್ಯಾರೂ ನೆನಪಾಗುತಿಲ್ಲ. ಒಂದು ವಿಚಿತ್ರ ರೀತಿಯಲ್ಲಿ ಕಂಬಾರರು ಹರಿಹರ, ಚಾಮರಸ ಮತ್ತು ಜನಪದ ಕಾವ್ಯಗಳ ಪರಂಪರೆಯನ್ನು ಇನ್ನೊಂದು ಕಲಾತ್ಮಕ ಎತ್ತರಕ್ಕೆ ಒಯ್ದಿದ್ದಾರೆ. ಆದ್ದರಿಂದಲೇ ‘ಚಕೋರಿ’ಯ ಸಾಂಸ್ಕೃತಿಕ ಮೌಲ್ಯ ಅದರ ಕಾವ್ಯಾತ್ಮಕ ಮೌಲ್ಯದಷ್ಟೇ ಅಗ್ಗಳವಾದುದು. ಕನ್ನಡ ಕಾವ್ಯ ಪರಂಪರೆಗಳ ಅಪೂರ್ವಸಿದ್ಧಿಯಾಗಿ ಈ ಕೃತಿ ನಮ್ಮ ಮುಂದಿದೆ.

Author
Chandrashekhara Kambara
Publisher
Ankita Pustaka

Reviews

There are no reviews for this product.

Write a review

Note: HTML is not translated!