ದೇವರಾಗಲು ಮೂರೇ ಗೇಣು(ಡಾ.ಶಾಂತಲ) - Devaragalu Moore Genu(Dr. Shanthala)
- ₹300
ಸಾಮಾಜಿಕ, ರೋಚಕ, ಐತಿಹಾಸಿಕ ಕಾದಂಬರಿಗಳು ಕನ್ನಡಕ್ಕೆ ಹೊಸತಲ್ಲ. ಈ ಬಗೆಯ ಕಾದಂಬರಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಪರಿ ಮೆಚ್ಚುವಂಥದ್ದು, ಇದೀಗ ವೈಜ್ಞಾನಿಕ ಕಾದಂಬರಿಗಳು ಕನ್ನಡದಲ್ಲಿ ಅಲ್ಲಲ್ಲಿ ಸದ್ದು ಮಾಡುತ್ತಿರುವುದು ಕೂಡ ಸ್ವಾಗತಾರ್ಹ. ಈ ಬಗೆಯ ಕಾದಂಬರಿಗಳು ಕನ್ನಡದಲ್ಲಿ ಹೇರಳವಾಗಿ ಬಂದಷ್ಟು ಹೊಸ ತಲೆಮಾರಿನವರನ್ನು ಓದಿನತ್ತ ಸೆಳೆಯಬಹುದು. ಸದ್ಯಕ್ಕೆ ಈ ಬಗೆಯ ಪುಸ್ತಕಗಳು ಅಪರೂಪದಲ್ಲಿ ಅಪರೂಪ ಎಂಬಂತೆ ಇವೆ. ಆದರೆ ಈ ಕೊರತೆಯನ್ನು ನೀಗಿಸುವ ಒಂದು ಪ್ರಯತ್ನವನ್ನು ಡಾ. ಶಾಂತಲ ಅವರು ಮಾಡಿದ್ದಾರೆ. `ದೇವರಾಗಲು ಮೂರೇ ಗೇಣು' ಒಂದು ಅಪರೂಪದ ವೈಜ್ಞಾನಿಕ ಕಾದಂಬರಿ, ಸುಲಭವಾಗಿ ಓದಿಸಿಕೊಂಡು ಹೋಗುವ, ಕುತೂಹಲವನ್ನು ಕಾಯ್ದುಕೊಳ್ಳುವ, ವಿಜ್ಞಾನದ ಹಿನ್ನೆಲೆ ಇರದ ಸಾಮಾನ್ಯ ಓದುಗನೂ ಸರಳವಾಗಿ ಓದಬಹುದಾದ ಅದ್ಭುತ ಕಾದಂಬರಿ ಇದಾಗಿದೆ. ವಿಷಯವನ್ನಿಟ್ಟುಕೊಂಡು, ಇಷ್ಟೊಂದು ಸರಳವಾಗಿ ಪುಸ್ತಕವೊಂದನ್ನು ಬರೆಯಬಲ್ಲ ಡಾ. ಶಾಂತಲ ಅವರ ಪ್ರತಿಭೆಯನ್ನು ಮೆಚ್ಚಲೇ ಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಐವಿಎಫ್ ತಂತ್ರಜ್ಞಾನವು ಅಗಾಧವಾದ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಈ ಐವಿಎಫ್ ತಂತ್ರಜ್ಞಾನದ ಎಳೆಯನ್ನು ಇಟ್ಟುಕೊಂಡು ಡಾ. ಶಾಂತಲ ಅವರು ಸೊಗಸಾದ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ. ಕನ್ನಡದಲ್ಲಿ ಹೊಸ ಬಗೆಯ ಕಾದಂಬರಿ ಒಂದನ್ನು ನೀವು ಓದಲು ಬಯಸಿದ್ದರೆ, ಹಾಗೂ ಮೊಟ್ಟ ಮೊದಲಬಾರಿಗೆ ಒಂದು ಪುಸ್ತಕವನ್ನು ಓದಬೇಕು ಎಂದು ಮನಸ್ಸು ಮಾಡಿದ್ದರು ದೇವರಾಗಲು ಮೂರೇ ಗೇಣು ನಿಮಗೆ ಹೇಳಿಮಾಡಿಸಿದ ಪುಸ್ತಕವಾಗಿದೆ.
Reviews
There are no reviews for this product.