ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ನನ್ನ ತಮ್ಮ ಶಂಕರ - Nanna Tamma Shankara(Ananth Nag)

  • ₹250

Add to Wish List

Compare this Product

Ex Tax: ₹250

Availability: In Stock

Product Code: NANNATHAMMASHANKARA

ಬೆಂಗಳೂರಿನಲ್ಲಿ ಸುಮಾರು 10,000 ಆಟೋರಿಕ್ಷಾಗಳು ಇರಬಹುದು. ಅವುಗಳಲ್ಲಿ ಸುಮಾರು 80% ಆಟೋಗಳ ಮೇಲೆ ಶಂಕರ್ ನಾಗ್ ಚಿತ್ರವಿದೆ. ಆಶ್ಚರ್ಯವೇನೆಂದರೆ ಶಂಕರ್ ನಾಗ್ ಕಾಲಾನಂತರದಲ್ಲಿ ಹುಟ್ಟಿ ಇಂದು ಆಟೋ ಚಾಲಕರಾಗಿರುವ ಎಷ್ಟೋ ಮಂದಿ ತಮ್ಮ ಆಟೋಗಳ ಹಿಂದೆ ಶಂರ್‌ನಾಗ್‌ರ ಚಿತ್ರಗಳನ್ನು ಆಂಟಿಸಿಕೊಂಡಿದ್ದಾರೆ. ಇದು ಕೇವಲ ಅಭಿಮಾನವಲ್ಲ.. ಬದಲಿಗೆ ಕನ್ನಡಿಗರಿಗೆ ಅವರ ಮೇಲಿರುವ ಪ್ರೀತಿ. ಬಹುಶಃ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೇರುನಟ ಡಾ. ರಾಜ್ ನಂತರ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಏಕೈಕ ನಟ ಎಂದರೆ ಅದು ಶಂಕರ್ ನಾಗ್ ಮಾತ್ರ.

ಶಂಕರ್ ಇದ್ದಿದ್ರೆ ನಮ್ಮ ಕನ್ನಡ ಚಿತ್ರರಂಗ ಎಲ್ಲೋ ಇರುತ್ತಿತ್ತು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. 2014ರ ಈ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಮೆಟ್ರೋ ರೈಲನ್ನು ಆಗಿನ ಕಾಲಕ್ಕೆ ಕಾರ್ಯ ರೂಪಕ್ಕೆ ತರಲು ಬಯಸಿದ್ದರು ಶಂಕರ್ ನಾಗ್. ಕೇವಲ ಚಲನಚಿತ್ರಗಳಷ್ಟೇ ಅಲ್ಲ. ಇಡೀ ಬೆಂಗಳೂರಿಗೆ ಅವರಂತಹ ಒಬ್ಬ ದೂರ ದೃಷ್ಟಿ ಮತ್ತು ವಿಶಾಲ ದೃಷ್ಟಿ ಇರುವ ನಾಯಕ ಬೇಕಿತ್ತು. ಬೇಕಿದೆ.. ಎಂದು ಹೇಳುವವರು ಸಾವಿರಾರು ಮಂದಿ.

ಈ ಎಲ್ಲ ಪ್ರಶ್ನೆಗಳಿಗೆ, ಅವರನ್ನು ಬಹಳ ಹತ್ತಿರದಿಂದ ಬಲ್ಲ, ಅವರೊಂದಿಗೆ ಹುಟ್ಟಿ ಬೆಳೆದ ಅವರ ಅಣ್ಣ ಶ್ರೀ ಅನಂತ ನಾಗ್‌ರಿಂದಲೇ ಉತ್ತರ ಪಡೆಯಬಹುದೇ? ಈ ಪ್ರಶ್ನೆಗಳ ಉತ್ತರಗಳ ಜೊತೆಗೆ, ಶಂಕರ್ ನಾಗ್‌ರ ಬದುಕು.. ಅವರ ಮನಸ್ಸು ಯೋಚಿಸುತ್ತಿದ್ದ ರೀತಿ.. ಅವರ ಕನಸುಗಳು.. ಅವರ ಕಾರ್ಯವೈಖರಿ.. ಬದುಕಿನೆಡೆಗಿನ ಅವರ ಅದಮ್ಯ ಉತ್ಸಾಹ.. ಇವುಗಳ ಪರಿಚಯವು ಆಗಬಹುದೇ?

ಓದಿ ನೋಡಿ.. ಶ್ರೀ ಅನಂತ ನಾಗ್‌ರ ಪ್ರೀತಿಯ, ಕನ್ನಡಿಗರ ಅಭಿಮಾನದ... ನನ್ನ ತಮ್ಮ ಶಂಕರ.

Author
Ananth Nag
Publisher
Total Kannada

Reviews

There are no reviews for this product.

Write a review

Note: HTML is not translated!