ಮತ್ತೆ ಹಾಡಿತು ಕೋಗಿಲೆ(ಮಣಿಕಾಂತ್ ಎ ಆರ್) - Matte Haditu Kogile(Manikanth A R)
- ₹160₹142
ಜನಿಸಿದ್ದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆಯಿತನಹಳ್ಳಿ. ಓದಿದ್ದು ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ಬಿ.ಇ. ಆಟೋಮೊಬೈಲ್. ಒಲಿದಿದ್ದು ಪತ್ರಿಕೋದ್ಯಮ. ಮೊದಲು ಹಾಯ್ ಬೆಂಗಳೂರ್, ನಂತರ ಸಂಯುಕ್ತ ಕರ್ನಾಟಕ, ಆನಂತರ ವಿಜಯ ಕರ್ನಾಟಕದಲ್ಲಿ ನೌಕರಿ. ವಿಜಯ ಕರ್ನಾಟಕದಲ್ಲಿ ಬರೆಯುತ್ತಿದ್ದ, ‘ಉಭಯ ಕುಶಲೋಪರಿ ಸಾಂಪ್ರತ’, ‘ಹಾಡು ಹುಟ್ಟಿದ ಸಮಯ’, ‘ಮರೆಯಲಿ ಹ್ಯಾಂಗ’, ‘ಈ ಗುಲಾಬಿಯು ನಿನಗಾಗಿ’ ಅಂಕಣಗಳು ಸಕಲೆಂಟು ಮಂದಿಯ ಮೆಚ್ಚುಗೆಗೆ ಪಾತ್ರವಾದವು. ಪ್ರಸ್ತುತ, ಕನ್ನಡಪ್ರಭದಲ್ಲಿ ಮುಖ್ಯ ಉಪಸಂಪಾದಕ. ‘ಭಾವತೀರಯಾನ’ ಎಂಬ ಅಂಕಣದ ಲೇಖಕ. ಪ್ರಕಟವಾಗಿರುವ ಪುಸ್ತಕಗಳು ನಾಲ್ಕು. ಈ ಪೈಕಿ ‘ಹಾಡು ಹುಟ್ಟಿದ ಸಮಯ’ ಮತ್ತು ‘ಈ ಗುಲಾಬಿಯು ನಿನಗಾಗಿ’ ಪುಸ್ತಕಗಳು ತಲಾ ನಾಲ್ಕು ಮುದ್ರಣಗಳನ್ನು ಕಂಡಿವೆ. ‘ಅಪ್ಪ ಅಂದ್ರೆ ಆಕಾಶ’ ಪುಸ್ತಕದ 20,000 ಪ್ರತಿಗಳು ಕೇವಲ 13 ತಿಂಗಳ ಅವಧಿಯಲ್ಲಿ ಮಾರಾಟವಾಗಿವೆ. ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ 60 ತಿಂಗಳಲ್ಲಿ 60,000 ಪ್ರತಿಗಳು ಮಾರಾಟವಾಗಿ ದಾಖಲೆ ಸ್ಥಾಪಿಸಿರುವ ಪುಸ್ತಕ. ಈ ಪುಸ್ತಕಕ್ಕೆ ಸೇಡಂನ ಅಮ್ಮ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಲಭಿಸಿದೆ.
Reviews
There are no reviews for this product.