ಕಪ್ಪು ಕಾದಂಬರಿ ಕೇಸು(ಕೌಶಿಕ್ ಕೂಡುರಸ್ತೆ) - Kappu Kadambari Casu(Koushik Kooduraste)
- ₹200₹178
"ಸರ್ ಬಹಳ ದಿನಗಳಿಂದ ಈ ಪ್ರಶ್ನೆಯನ್ನು ಕೇಳ್ಬೇಕು ಅಂತ ಇದ್ದೆ. ಜೊತೆಗಿದು ನನ್ನ ಪರ್ಸನಲ್ ಪ್ರಶ್ನೆ ಕೂಡ 'ಎಂದು ಸಣ್ಣಗೆ ನಕ್ಕ ಶೀತಲ್ ತನ್ನ ಮಾತನ್ನು ಮುಂದುವರೆಸಿ
ನಿಮ್ಮ ಈ ಹಿಂದಿನ ಪ್ರತಿ ಕಾದಂಬರಿಗಳಲ್ಲಿ ಮಿನಿಮಮ್ ಎಂದರೂ ನಾಲೈದು ಕೊಲೆಗಳಾಗಿರುತ್ತವೆ. ಆ ಕೊಲೆಗಳನ್ನು ನೀವು ಸೃಷ್ಟಿಸಿರುವ ಪಾತ್ರಗಳೇ ಮಾಡುತ್ತಿದ್ದರೂ ಆ ಸನ್ನಿವೇಶವನ್ನು ಸೃಷ್ಟಿಸೋದು ನೀವೇ ಆಗಿರ್ತಿರ, ಸೋ ನಿಮಗೇನಾದ್ರು ಇದುವರೆಗೆ ಯಾರನ್ನಾದರೂ ಕೊಲೆ ಮಾಡಬೇಕೆಂದು ಅನಿಸಿದೆಯಾ?? ಅಕಸ್ಮಾತ್ ಅನಿಸಿದ್ರೆ ಯಾರನ್ನು?? "
ಎಂದು TV 10ನ ನಿರೂಪಕಿ ಶೀತಲ್ ಕುತೂಹಲದಿಂದ ತನ್ನೆದುರಿಗಿದ್ದ ಖ್ಯಾತ ಥ್ರಿಲ್ಲರ್ ಕಾದ೦ಬರಿಕಾರ ವಿವೇಕ್ ಚಕ್ರವರ್ತಿ ಯನ್ನು ಕೇಳುತ್ತಿದ್ದಂತೆ;
"ನೋಡಿ ಶೀತಲ್ ಹೊರ ಜಗತ್ತಿಗೆ ನಾನು ನಾರ್ಮಲ್ ವ್ಯಕ್ತಿಯ ಹಾಗೆ ಕಾಣಿಸುತ್ತೇನಾದರೂ, ನನಗೂ ಬಹಳಷ್ಟು ಸಲ ಕೊಲೆ ಮಾಡಬೇಕೆಂದು ಅನಿಸಿದೆ. ಅದಕ್ಕಾಗಿ ಪ್ಲಾನ್ ಕೂಡ ಮಾಡಿದ್ದೆ!!"
ಎಂದು ತಣ್ಣನೆಯ ದನಿಯಲ್ಲಿ ಉತ್ತರಿಸಿದ. ಎದೆಯಾಳದಲ್ಲಿ ಅಪಾರವಾದ ನೋವಿತ್ತು.
Reviews
There are no reviews for this product.