ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಪ್ರಮೇಯ(ಗಜಾನನ ಶರ್ಮ) - Premeya(Gajanana Sharma)

  • ₹395

Add to Wish List

Compare this Product

Ex Tax: ₹395

Availability: In Stock

Product Code: PRAMEYA

ಭಾರತದ ಮಹಾಮಾಪನದ ಕತೆಯನ್ನು ಹೇಳುತ್ತಲೇ, ಭಾರತೀಯ ಮನಸ್ಸು, ದೈವಿಕತೆ, ಅಧ್ಯಾತ್ಮವನ್ನು ಹೇಳುವ ಕಾದಂಬರಿ ಪ್ರಮೇಯ, ಇದರ ಹರಹು ಮತ್ತು ಆಳ ನನ್ನನ್ನು ಅಚ್ಚರಿಗೊಳಿಸಿದೆ. ಇದು ಹಿಮಾಲಯವನ್ನು ಅಳೆದ ಕತೆ, ಅಳೆದವರ ಕತೆ, ಅಳೆದು ಉಳಿದವರ ಕತೆ. ವೈಜ್ಞಾನಿಕ ಜಗತ್ತು ಭಾರತದ ಮಹಾಮಾಪನವನ್ನು ಗ್ರೇಟ್ ಟ್ರಿಗ್ನೋಮೆಟ್ರಿಕ್‌ ಸರ್ವೆ ಎಂದು ಕರೆಯಿತು. ಆ ಯೋಜನೆಯನ್ನು ಮುನ್ನಡೆಸಿದ ಕರ್ನಲ್ ಲ್ಯಾಂಬ್ಟನ್, ಜಾರ್ಜ್ ಎವರೆಸ್ಟ್, ಆಂಡ್ರ್ಯೂವಾ, ಥಾಮಸ್ ಜಾರ್ಜ್ ಮಾಂಟ್ಗೊಮರಿ ಮತ್ತು ನೈನ್ ಸಿಂಗರ ಕಷ್ಟಸುಖದ ಕತೆಯನ್ನು ಹೇಳುತ್ತಲೇ ಭಾರತದ ಕತೆಯನ್ನೂ ಗಜಾನನ ಶರ್ಮರು ಹೇಳುತ್ತಾರೆ.

ಇಂಥದೊಂದು ವಸ್ತುವನ್ನು ಆಧರಿಸಿದ ಮೊದಲ ಭಾರತೀಯ ಕಾದಂಬರಿ ಇದು. ಚರಿತ್ರೆ ಮತ್ತು ಕಲ್ಪನೆ ಎರಡನ್ನೂ ಹದವಾಗಿ ಬೆರೆಸುತ್ತಾ, ಚಾರಿತ್ರಿಕ ವಿವರಗಳಿಗೆ ಅಪಚಾರ ಆಗದಂತೆ, ಕಲಾನುಭವಕ್ಕೆ ಕುಂದಾಗದಂತೆ ಈ ಕತೆಯನ್ನು ಗಜಾನನ ಶರ್ಮ ಕಟ್ಟಿದ್ದಾರೆ. ಕ್ಲುಪ್ತ ವಿವರ, ಸ್ಪಷ್ಟ ಮಾಹಿತಿ, ಸಮರ್ಪಕ ಕ್ಷೇತ್ರಾಧ್ಯಯನ, ಅನುಪಮ ಶ್ರದ್ಧೆ ಮತ್ತು ಸರಳ ಭಾಷೆ ಹುರಿಗಟ್ಟಿರುವ ಕಾದಂಬರಿ ಇದು. ನಮಗೆ ಗೊತ್ತಿಲ್ಲದೆ ಹೊರಜಗತ್ತು ಮತ್ತು ಒಳಜಗತ್ತನ್ನು ಈ ಕಾದಂಬರಿ ಅನಾವರಣ ಮಾಡುತ್ತದೆ.

ಈಗಾಗಲೇ ಪುನರ್ವಸು ಮತ್ತು ಚೆನ್ನಭೈರಾದೇವಿ ಕಾದಂಬರಿಗಳ ಮೂಲಕ ಕನ್ನಡದ ಬಹುಮುಖ್ಯ ಕಾದಂಬರಿಕಾರ ಎಂದೆನಿಸಿಕೊಂಡಿರುವ ಗಜಾನನ ಶರ್ಮರು ಈ ಕಾದಂಬರಿಯಲ್ಲಿ ಮತ್ತೊಂದು ಎತ್ತರವನ್ನು ತಲುಪಿದ್ದಾರೆ. ಈ ಕಾದಂಬರಿಯು ಓದು ನನ್ನನ್ನು ಜ್ಞಾನವಂತನನ್ನಾಗಿಯೂ ಹೃದಯವಂತನನ್ನಾಗಿ ಮಾಡಿದೆ. ಓದಿದ ನಿಮಗೂ ಅದೇ ಆಗಲಿದೆ ಎಂದು ಕಾದಂಬರಿ ಕುರಿತು ಲೇಖಕ ಜೋಗಿ ಅವರು ಬೆನ್ನುಡಿಯಲ್ಲಿ ಬರೆದಿದ್ದಾರೆ.

Reviews

There are no reviews for this product.

Write a review

Note: HTML is not translated!