ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ರಹಸ್ಯಾಯನ(ನಾಗೇಶ್ ಕುಮಾರ್) - Rahasyayana(Nagesh Kumar)

  • ₹180

Add to Wish List

Compare this Product

Ex Tax: ₹180

Availability: In Stock

Product Code: RAHASYANA

‘ರಹಸ್ಯಾಯನ’ ಹೆಸರೇ ಸೂಚಿಸುವಂತೆ ನಿಗೂಢತೆಯತ್ತ ಸಾಗುವ ಪ್ರಯಾಣ. ಸಿ.ಎಸ್. ನಾಗೇಶ್ ಕುಮಾರ್ ಈ ದಿನಗಳಲ್ಲಿ ಪತ್ತೇದಾರಿ ಕಥೆಗಳು, ಕಾದಂಬರಿಗಳನ್ನು ಬರೆಯುವವರ ಪೈಕಿ ಮುಂಚೂಣಿಯಲ್ಲಿರುವವರು. ಒಂದು ವಿಧದಲ್ಲಿ ಅವರು ನಮ್ಮ ಪ್ರಕಾಶನ ಸಂಸ್ಥೆಯ ‘ಶೋಧ’ ಮತ್ತು ಆಸ್ತಿ, ಅದಾವುದನೋ ಅದಾವುದಕೋ ಕೊಂಡಿ ಹಾಕಿ, ಇದಮಿತ್ಥಂ ಎಂದು ಓದುಗನು ನಿರ್ಧರಿಸುವ ಕ್ಷಣದಲ್ಲಿ ಕಲ್ಪನೆಗಳನ್ನು ಬುಡಮೇಲು ಮಾಡುವ ರೀತಿಯಲ್ಲಿ ತಿರುವುಗಳನ್ನಿತ್ತು ಕಥೆ ಹೆಣೆಯುವುದರಲ್ಲಿ ಕರಗತರಿವರು. ಪುರಾಣದ ಕಥೆಗಳನ್ನು ಮೂಲವಾಗಿ ಇರಿಸಿಕೊಂಡು ನವೀನ ಮಾದರಿಯಲ್ಲಿ ಜಾಲಗಳನ್ನು ಹೆಣೆಯುವುದು, ವೈಜ್ಞಾನಿಕ ಸಾಧ್ಯತೆಗಳ ಮಿತಿಯನ್ನು ವಿಸ್ತರಿಸುತ್ತಾ ಸೈನ್ಸ್ ಫಿಕ್ಷನ್ ಮಾದರಿಯ ಕೌತುಕಮಯ ಕಥಾಹಂದರವನ್ನು ಕಟ್ಟುವುದು, ಆಂಗ್ಲದ ಸುಪ್ರಸಿದ್ಧ ಬರಹಗಾರರ ಕಥೆಗಳನ್ನು ಕನ್ನಡೀಕರಿಸುವುದರಲ್ಲಿ ನಾಗೇಶ್ ಕುಮಾರರ ಕೈ ಚೆನ್ನಾಗಿ ಪಳಗಿರುವುದು ಇಲ್ಲಿನ ಕಥೆಗಳಲ್ಲಿಯೂ ವಿದಿತ.
ವಿಭಿನ್ನವೂ, ವೈವಿಧ್ಯಮಯವೂ, ರೋಚಕವೂ ಆದ ಕಥೆಗಳನ್ನು ಹೊಂದಿರುವ ‘ರಹಸ್ಯಾಯನ’ ಓದುತ್ತಾ ಉಗುರುಗಳನ್ನು ಕಚ್ಚುವಾಗ ಬೆರಳುಗಳಿಗೆ ಗಾಯವಾದರೆ ಲೇಖಕರಾಗಲಿ, ಪ್ರಕಾಶಕರಾಗಲಿ ಜವಾಬ್ದಾರರಲ್ಲ ಎಂದು ಮೊದಲೇ ತಿಳಿಸಿಬಿಡುತ್ತಿದ್ದೇವೆ!

Reviews

There are no reviews for this product.

Write a review

Note: HTML is not translated!