ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಕೊನೆಗಾಣದ ರಾತ್ರಿ(ನಾಗೇಶ್ ಕುಮಾರ್) - Konaganada Ratri(Nagesh Kumar)

  • ₹220

Add to Wish List

Compare this Product

Ex Tax: ₹220

Availability: In Stock

Product Code: KONEGANADA

ಬೇಸಿಗೆಯಲ್ಲಿ ಅಂಟಾರ್ಟಿಕಾ ಮೈಯನ್ನು ಮರಗಟ್ಟಿಸುತ್ತದೆ. ಚಳಿಗಾಲದಲ್ಲಿ ಮೂಗುಜ್ಜಿಕೊಂಡರೆ ಚರ್ಮ ಸುಲಿದಿರುವುದು ಕನ್ನಡಿಯನ್ನು ನೋಡಿಕೊಂಡಾಗಲೇ, ಚಳಿಯ ಪರಮಾವಧಿಗೆ ಅಲ್ಲಿ ಸಿಲುಕಿದವರ ಮೈ ವೈಬ್ರೇಟರ್ ಮೋಡ್‌ನಲ್ಲಿರುವ ಮೊಬೈಲ್‌ನಂತೆ ನಡುಗುತ್ತಿರುತ್ತದೆ. ಹವಾಮಾನ ಹೀಗಿರುವಾಗ ಕೊಲೆಗಾರನೊಬ್ಬನು ಸನಿಹದಲ್ಲಿಯೇ ಇದ್ದಾನೆಂಬ ಭಯದಿಂದ ಮೂಡಿದ ಚಳಿಯೂ ಸೇರಿದರೆ… ಊಹೆಗೆ ನಿಲುಕದ ತನು-ಮನಥಂಡಿ!
ಟೆನ್
ಅಲಿಸ್ಟರ್ ಮ್ಯಾಕ್ಲೀನ್ ಆಂಗ್ಲದ ಸಾರ್ವಕಾಲಿಕ ಶ್ರೇಷ್ಠ ಬರಹಗಾರರ ಪೈಕಿ ಅಗ್ರಪಂಕ್ತಿಯಲ್ಲಿರುವವನು. ಮ್ಯಾಕ್ಲೀನಿನ ‘ಗನ್ ಆಫ್ ನವರೋನ್’, ನವರೋನ್” ಮುಂತಾದ ಕೃತಿಗಳು ಚಲನಚಿತ್ರಗಳಾಗಿಯೂ ವಿಶ್ವವಿಖ್ಯಾತವಾಗಿವೆ. ಆತನ ಇಂಗ್ಲಿಷ್ ಭಾಷಾ ಪ್ರಯೋಗದಲ್ಲಿ ಕ್ಲಿಷ್ಟತಮ ನಾವೀನ್ಯತೆ ಇರುತ್ತದೆ. ವಿಷಯಮಂಡಣೆಗೆ ಮುನ್ನ ಆಳವಾದ ಅಧ್ಯಯನವಿರುತ್ತದೆ. ಈ ಕೃತಿಯ ಅನುವಾದಕ್ಕೆ ವಸ್ತುವಾದ ‘ನೈಟ್ ವಿತೌಟ್ ಎಂಡ್’ ಚಳಿಗಾಲದ ಧ್ರುವಪ್ರದೇಶದ ಜೀವನದ ಚಿತ್ರಣವನ್ನು ಕಟ್ಟಿಕೊಡುತ್ತಲೇ ಹಲವಾರು ವೈಜ್ಞಾನಿಕ ಸತ್ಯಗಳನ್ನೂ, ಕಲ್ಪನೆಗಳನ್ನೂ ಹದವಾಗಿ ಹೆಣೆದು ಕೊಟ್ಟಿದೆ. ಈ ಪರಿಪಕ್ವ ಪಾಕವನ್ನು ಗೆಳೆಯ ನಾಗೇಶ್ ಕುಮಾರ್ ‘ಕೊನೆಗಾಣದ ರಾತ್ರಿ’ ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡಿಗರಿಗೆ ಸೊಗಸಾಗಿ ಉಣಬಡಿಸಿದ್ದಾರೆ. ಮೂಲ ಕೃತಿಗೆ ನಿಷ್ಠವಾಗಿರುವ ಈ ಕೃತಿಯು ಗೂಢಚಯ್ಯ, ನಿಗೂಢತೆಗಳನ್ನು ಇಷ್ಟಪಡುವ ಓದುಗರ ಮನೆಯ ಕಪಾಟಿಗೆ ಶೋಭೆ ತರುವುದು ಸುನಿಶ್ಚಿತ.

Reviews

There are no reviews for this product.

Write a review

Note: HTML is not translated!