ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

#ಬದುಕುಸುಂದರ(ರಂಗಸ್ವಾಮಿ ಮೂಕನಹಳ್ಳಿ) - #badukusundara(Rangaswamy Mookanahalli)

  • ₹180

Add to Wish List

Compare this Product

Ex Tax: ₹180

Availability: In Stock

Product Code: BADUKUSUNDARA

ನಮ್ಮ ಮತ್ತು ನಮ್ಮ ಯಶಸ್ಸಿನ ನಡುವೆ ಇರುವ ಅತಿ ದೊಡ್ಡ ತಡೆಗೋಡೆ ಯಾವುದು ಗೊತ್ತಾ? ಅದು ನಾವು ನೀಡುವ ಕಾರಣಗಳು! ನೆಪ ಹೇಳುವುದು, ಸಬೂಬು ಹೇಳಿಕೊಂಡು ನಮ್ಮೆಲ್ಲಾ ಸೋಲಿಗೆ ಇತರರನ್ನು ಹೊಣೆ ಮಾಡುತ್ತಾ, ವ್ಯಕ್ತಿ, ಸನ್ನಿವೇಶಗಳನ್ನು ದೂಷಿಸುತ್ತಾ ಟೈಮ್‌ ಪಾಸ್‌ ಮಾಡುವುದು ನಾವು ಗಳಿಸಿಕೊಳ್ಳಬಹುದಾದ ಯಶಸ್ಸಿಗೆ ಇರುವ ದೊಡ್ಡ ಅಡಚಣೆ. ನಮ್ಮ ಸೋಲು-ಗೆಲುವಿಗೆ ಬೇರಾರೂ ಕಾರಣರಲ್ಲ, ಅದು ನಾವೇ! ಎನ್ನುವುದು ಅರಿತುಕೊಂಡ ದಿನ, ಬದುಕಿನಲ್ಲಿ ಮಹತ್ತರ ತಿರುವಿಗೆ ಓನಾಮ ಹಾಕಿದಂತೆ! ಈ ಸರಳ ಸತ್ಯ ನಾವು ಅರಿತುಕೊಳ್ಳಬೇಕಿದೆ.

ಬದುಕಿನಲ್ಲಿ ನಮ್ಮೆಲ್ಲಾ ಸೋಲಿಗೆ, ಅಪಜಯಕ್ಕೆ ಒಬ್ಬರನ್ನು ಹೊಣೆ ಮಾಡುತ್ತೇವೆ. ಅವರನ್ನು ಶತ್ರು ಎಂದು ಬಿಂಬಿಸಿಕೊಳ್ಳುತ್ತೇವೆ. ಅವರಿಲ್ಲದದ್ದಿರೆ, ಸನ್ನಿವೇಶ ಸರಿಯಾಗಿದ್ದದ್ದಿರೆ ನಾವೇನೋ ಮಹತ್ತರವಾದದ್ದನ್ನು ಸಾಧಿಸಿ ಬಿಡುತ್ತಿದ್ದೆವು ಎನ್ನುವ ಭ್ರಮೆಯಲ್ಲಿ ಬದುಕುತ್ತೇವೆ. ಆದರೆ ನಮ್ಮ ಅತಿ ದೊಡ್ಡ ಶತ್ರು ಬೇರಾರೂ ಅಲ್ಲ ಅದು ನಾವು ಎನ್ನುವುದನ್ನು ಮರೆತು ಬಿಡುತ್ತೇವೆ. ನಮ್ಮ ಆಲೋಚನೆಗಳು, ನಮ್ಮ ಕಾರ್ಯವೈಖರಿ ನಮ್ಮ ಅತಿ ದೊಡ್ಡ ಶತ್ರು ಅಥವಾ ಅತಿ ದೊಡ್ಡ ಮಿತ್ರ ಎನ್ನುವುದನ್ನು ನಾವು ಅರಿತುಕೊಳ್ಳಬೇಕಿದೆ. ನಮ್ಮ ಚಿಂತನೆ, ಆಲೋಚನೆ ಬದಲಿಸಿಕೊಳ್ಳುವುದರ ಮೂಲಕ ಬದುಕನ್ನು ಬದಲಾಯಿಸಿಕೊಳ್ಳಬಹುದು!

ಬದುಕು ಸುಂದರ ಮಾಡಿಕೊಳ್ಳಲು ಬೇಕಾದ ಎಲ್ಲವನ್ನೂ ಭಗವಂತ ನಮಗೆ ನೀಡಿದ್ದಾನೆ. ನಾವೆಂತ ದಡ್ಡರು ಎಂದರೆ, ನಾವು ಅದನ್ನು ಜಗತ್ತಿನೆಲ್ಲೆಡೆ ಹುಡುಕಲು ಶುರು ಮಾಡುತ್ತೇವೆ. ಬಯಸಿದ ಬದುಕು ನಮ್ಮದಾಗಬೇಕದ್ದಿರೆ `ಲುಕ್‌ ಇನ್ವರ್ಡ್‌.' ಎಷ್ಟು ಸಾಧ್ಯವೋ ಅಷ್ಟೂ ನಮ್ಮನ್ನು ನಾವು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಎಲ್ಲವೂ ನಮ್ಮಲ್ಲೆ ಅಡಕವಾಗಿದೆ.

#ಬದುಕುಸುಂದರ ಇಂತಹ ಹತ್ತಾರು ಗುಟ್ಟುಗಳನ್ನು ರಟ್ಟು ಮಾಡಿದೆ.

Reviews

There are no reviews for this product.

Write a review

Note: HTML is not translated!