ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಸೈಬರ್ ಕ್ರೈಮ್(ಸತೀಶ್ ವೆಂಕಟಸುಬ್ಬು) - Cyber Crime(Sathish Venkatasubbu)

  • ₹200

Add to Wish List

Compare this Product

Ex Tax: ₹200

Availability: In Stock

Product Code: CYBERCRIME

Cybercrime | ಸೈಬರ್‌ಕ್ರೈಮ್‌


ಸತೀಶ್‌ ವೆಂಕಟಸುಬ್ಬು ಅವರು ಮೂಲತಃ ಟೆಕ್ಕಿ. ಎರಡು ದಶಕಗಳ ಕಾಲ ಜಗತ್ತಿನ ವಿವಿಧ ದೇಶಗಳಲ್ಲಿ ಸಾಫ್ಟ್‌ವೇರ್ ಸಂಸ್ಥೆಗಳಲ್ಲಿ ದುಡಿದ ಅನುಭವ ಅವರಿಗೆ. ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು ಎನ್ನುವಂತೆ ಮೈಸೂರಿಗೆ ಮರಳಿದವರು. ಆದರೆ ಸುಮ್ಮನೆ ಕೂರುವ ಜಾಯಮಾನ ಅವರದಲ್ಲ, ಹೀಗಾಗಿ ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ಗೆ ಹೋಗಿ ಸೈಬರ್‌ ಕಾನೂನು ಅಭ್ಯಾಸ ಮಾಡುತ್ತಾರೆ. ಇಂದಿಗೆ ಸೈಬರ್‌ ಕ್ರೈಮ್‌ ತಡೆಗಟ್ಟುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೈಸೂರಿನ ಪ್ರಾದೇಶಿಕ ಪತ್ರಿಕೆ `ಪ್ರತಿನಿಧಿ'ಯಲ್ಲಿ ಸೈಬರ್‌ ಮಿತ್ರ ಹೆಸರಿನಲ್ಲಿ ಅಂಕಣಕಾರರಾಗಿ ಕೂಡ ಜನಪ್ರಿಯರು. ಸೈಬರ್‌ ಮಿತ್ರ ಹೆಸರಿನಲ್ಲಿ ವೆಬ್‌ಸೈಟ್‌ ಕೂಡ ಹೊಂದಿದ್ದಾರೆ.


ಸೈಬರ್‌ ಕ್ರೈಮ್‌ ಇಂದಿನ ದಿನದ ಅತಿ ದೊಡ್ಡ ಸಮಸ್ಯೆ. ಹಿಂದೆ ಮನೆಗೆ ನುಗ್ಗಿ ಕಳ್ಳತನ ಮಾಡಬೇಕಿತ್ತು. ಆದರೆ ಇಂದು ಕಳ್ಳತನದ ವ್ಯಾಖ್ಯಾನ ಬದಲಾಗಿದೆ. ಕೆಲವೊಮೆ ನಮ್ಮ ಅನುಮತಿ ಪಡೆದು, ಕೆಲವೊಮ್ಮೆ ನಮ್ಮ ಅನುಮತಿಯಿಲ್ಲದೆ, ಬಹಳಷ್ಟು ಬಾರಿ ನಮ್ಮ ಅಜಾಗರೂಕತೆ ಕಾರಣ ಸೈಬರ್‌ ಕ್ರೈಮ್‌ ಘಟಿಸುತ್ತದೆ. ನಮ್ಮ ವರ್ಷಗಳ ಸಂಪಾದನೆ, ಉಳಿಕೆ ಸದ್ದಿಲ್ಲದೇ ಕ್ಷಣ ಮಾತ್ರದಲ್ಲಿ ಮಾಯವಾಗಿ ಬಿಡುತ್ತದೆ. ಕಾನೂನು ರೀತಿಯಲ್ಲಿ ಆಗೇನು ಮಾಡಬೇಕು? ಯಾರನ್ನು ಕೇಳಬೇಕು? ತಕ್ಷಣ ಕಾರ್ಯಪ್ರವೃತ್ತರಾದರೆ ಹಣವನ್ನು ಮರಳಿ ಪಡೆದುಕೊಳ್ಳಬಹುದೇ? ಎನ್ನುವ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಅದೆಷ್ಟು ವಿಧದಲ್ಲಿ ನಮ್ಮನ್ನು ಲೂಟಿ ಮಾಡಲು ಈ ಖದೀಮರು ನಿಂತಿದ್ದಾರೆ ಎನ್ನುವುದನ್ನು ಎಳೆ ಎಳೆಯಾಗಿ ಸರಳವಾಗಿ ಬಿಡಿಸಿ ಹೇಳುವ ಪ್ರಯತ್ನದಲ್ಲಿ ಸತೀಶ್‌ ಗೆದ್ದಿದ್ದಾರೆ. ಈ ಆಘಾತಕ್ಕೆ ತುತ್ತಾದಾಗ ತಕ್ಷಣ ಏನು ಮಾಡಬೇಕು? ಸಮಸ್ಯೆ-ಸಮಾಧಾನ ಎರಡನ್ನೂ ಇಲ್ಲಿ ಸತೀಶ್‌ ನೀಡಿದ್ದಾರೆ.


ಹೆಚ್ಚುತ್ತಿರುವ ಸೈಬರ್‌ ಕ್ರೈಮ್‌ ಅಪರಾಧಗಳನ್ನು ತಡೆಗಟ್ಟುವುದು ಸರಕಾರದ ಕೆಲಸ ಎಂದು ಸುಮ್ಮನೆ ಕೂರುವಂತಿಲ್ಲ. ಅದರ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಂಡು ಜಾಗೃತರಾಗಿರಬೇಕಾದದ್ದು ನಾಗರಿಕರ ಕರ್ತವ್ಯ. ಆ ನಿಟ್ಟಿನಲ್ಲಿ ಸತೀಶ್‌ ವೆಂಕಟಸುಬ್ಬು ಅವರ ಸೈಬರ್‌ ಕ್ರೈಮ್‌-ತಡೆಗಟ್ಟುವುದು ಹೇಗೆ? ಸಹಾಯ ಮಾಡಲಿದೆ.

Reviews

There are no reviews for this product.

Write a review

Note: HTML is not translated!