ಏನನ್ನು ತಿನ್ನಬೇಕು? ಏನನ್ನು ತಿನ್ನಬಾರದು?(ಡಾ. ನಾ. ಸೋಮೇಶ್ವರ) - Enannu Tinnabeku? Enannu Tinnab(Dr. N. Someswara)
- ₹150
ಆಹಾರವೇ ಅಮೃತ!... ಆಹಾರವೇ ವಿಷ!!
ಹಾಗಾಗಿ ನಾವು ಏನನ್ನು ತಿನ್ನಬೇಕು? ಏನನ್ನು ತಿನ್ನಬಾರದು?
ನಮಗೆ ಹಿತವಾದ ಆಹಾರವನ್ನು ಮಿತ ಪ್ರಮಾಣದಲ್ಲಿ ಸೇವಿಸಿದರೆ, ಅದು ಅಮೃತ!
ನಮಗೆ ಹಿತವಲ್ಲದ ಆಹಾರವನ್ನು ಮಿತಿ ಮೀರಿ ಸೇವಿಸಿದರೆ, ಅದುವೇ ನಮಗೆ ವಿಷ!
ನಾವು ಬದುಕಲು ಆಹಾರವನ್ನು ಸೇವಿಸಬೇಕೇ ಹೊರತು, ಆಹಾರವನ್ನು ಸೇವಿಸಲು ಬದುಕಬಾರದು.
ನಮ್ಮ ಸಮಗ್ರ ಆರೋಗ್ಯದ ಗುಟ್ಟು, ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿದೆ.
ಆಹಾರವು ರುಚಿಯಿದ್ದಾಗ ಹೆಚ್ಚು ತಿನ್ನು ಎನ್ನುತ್ತದೆ, ನಮ್ಮ ಮನಸ್ಸು.
ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು.
ಪ್ರತಿ ದಿನ ನಾವು ತಿನ್ನುವ ಆಹಾರವನ್ನು, ಅಂದೇ ದೈಹಿಕ ಚಟುವಟಿಕೆಗಳ ಮೂಲಕ ಕರಗಿಸಬೇಕು.
ಒಮ್ಮೆಯುಂಡವ ತ್ಯಾಗಿ |
ಇಮ್ಮೆಯುಂಡವ ಭೋಗಿ |
ಬಿಮ್ಮಗುಂಡವನು ನೆರೆಹೋಗಿ |
ಯೋಗಿತಾ ಸುಮ್ಮನಿರುತಿ ಸರ್ವಜ್ಞ ||
ನಾಲಿಗೆಯ ಕಟ್ಟಿದವನು |
ಕಾಲನಿಗೆ ದೂರನಿಹ |
ನಾಲಿಗೆಯು ರುಚಿಯ ಮೇಲಾಡುತಲಿರುವನ |
ಕಾಲ ಹತ್ತಿರವು ಸರ್ವಜ್ಞ ||
ಹಸಿವಿಲ್ಲದುಣಬೇಡ |
ಹಸಿದು ಮತ್ತಿರಬೇಡ |
ಬಿಸಿಬೇಡ ತಂಗಳುಣಬೇಡ ವೈದ್ಯನಾ |
ಗಸಣಿಯೇ ಬೇಡ ಸರ್ವಜ್ಞ ||
Reviews
There are no reviews for this product.