ಮುಂದೂಡುವುದನ್ನು ತಡೆಗಟ್ಟುವುದು ಹೇಗೆ?(ವೈ. ಜಿ. ಮುರಳೀಧರನ್) - Munduduvudannu Tadegattuvudu Hege?(Y.G. Muralidharan)
- ₹150
ನೀವು ಮಾಡಬೇಕಾದ ಕೆಲಸಗಳ ಬಗ್ಗೆ ಬಹಳವಾಗಿ ಅಲೋಚಿಸಿದರೂ ಅದನ್ನು ಕಾರ್ಯಗತಮಾಡುವುದಿಲ್ಲವೆ? ಉತ್ಸಾಹದಿಂದ ಆರಂಭಿಸಿದ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲವೆ? ನಿಮ್ಮ ಕಲ್ಪನೆಯ ಗುಣಮಟ್ಟಕ್ಕೆ ತಕ್ಕಂತೆ ಕೆಲಸ ಮಾಡಲಾಗದೆ ಅದನ್ನು ಮುಂದೂಡುತ್ತಿದ್ದೆರಾ? ನಿಮಗಿಷ್ಟವಿಲ್ಲದ ಕೆಲಸವನ್ನು ಮಾಡುವಂತೆ ಇತರರು ಒತ್ತಾಯಿಸಿದರೆ ಅದರಿಂದ ಕುಪಿತಗೊಳ್ಳುತ್ತಿದ್ದೆರಾ? ಮುಖ್ಯ ಕೆಲಸಗಳನ್ನು ಮಾಡಲು ಕೊನೆಗಳಿಗೆಯ ವರೆಗೆ ಕಾದು ನಂತರ ಮಾಡುತ್ತೀರಾ? ನೀವು ನಿರ್ವಹಿಸಬೇಕಾದ ಕೆಲಸಗಳೇ ಸಾಕಷ್ಟು ಇರುವಾಗ ಮತ್ತೊಬ್ಬರ ಕೋರಿಕೆಯನ್ನು ನಿರಾಕರಿಸಲು ನಿಮ್ಮಿಂದ ಸಾಧ್ಯವಿಲ್ಲವೆ? ಅಥವಾ ಮತ್ತೊಬ್ಬರನ್ನು ಮೆಚ್ಚಿಸಲು ಅವರು ಹೇಳುವ ಕೆಲಸವನ್ನು ಮಾಡುತ್ತೇನೆ ಎಂದು ಒಪ್ಪಿಕೊಂಡು ಅದನ್ನು ನಿಗದಿತ ಸಮಯದಲ್ಲಿ ಮಾಡಲು ಸಾಧ್ಯವಾಗದೆ ಅವರಲ್ಲಿ ಕ್ಷಮಾಪಣೆ ಕೇಳುವ ಪರಿಸ್ಥಿತಿ ಆಗಾಗ ಉದ್ಭವಿಸುತ್ತಿದಿಯೇ?
ಇವುಗಳಲ್ಲಿ ಯಾವುದಾದರೂ ಒಂದು ಪ್ರಶ್ನೆಗೆ ನಿಮ್ಮ ಉತ್ತರ `ಹೌದು' ಎಂದಾದರೆ ನಿಮ್ಮಲ್ಲಿ ಮುಂದೂಡುವ (ಪ್ರೋಕ್ರಾಸ್ಟಿನೇಷನ್) ವರ್ತನೆ ಎಂದರ್ಥ. ಮುಂದೂಡುವುದು ಪ್ರತಿಯೊಬ್ಬರಲ್ಲೂ ಕಂಡುಬರುವ ವರ್ತನೆ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಗಾಗಿ ಕೆಲಸಗಳನ್ನು ಮುಂದೂಡಬೇಕಾಗುತ್ತದೆ. ಆದರೆ ಅದೇ ಒಂದು ರೂಢಿ ಆಗಿಬಿಟ್ಟರೆ ನೀವು ನಾನಾ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ವಿಶ್ವಾದ್ಯಂತ ಶೇಕಡಾ 20ರಷ್ಟು ಜನರು ಈ ದೀರ್ಘಕಾಲಿಕ (Chronic Procrastination) ಮುಂದೂಡುವ ರೂಢಿಗೆ ಬಲಿಯಾಗಿದ್ದಾರೆ.
ನಿಮ್ಮಲ್ಲಿ ಮುಂದೂಡುವ ಪ್ರವೃತಿ ಇದ್ದಲ್ಲಿ ಅದಕ್ಕೆ ವ್ಯಥೆ ಪಡಬೇಕಿಲ್ಲ. ಈ ಸಮಸ್ಯೆ ಕುರಿತು ವಿಜ್ಞಾನಿಗಳು ಮತ್ತು ಮನೋಶಾಸ್ತ್ರಜ್ಞರು ದೀರ್ಘ ಅಧ್ಯಯನ ನಡೆಸಿ ಆ ವ್ಯೂಹದಿಂದ ಹೊರಬರಲು ಅನೇಕ ಮಾರ್ಗ ಸೂಚಿಸಿದ್ದಾರೆ. ಅವುಗಳಲ್ಲಿ ನಿಮಗಿಷ್ಟವಾದ ಸೂಚನೆಗಳನ್ನು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಮುಂದೂಡುವ ಅಭ್ಯಾಸದಿಂದ ಹೊರಬರಲು ಸಾಧ್ಯವಿದೆ. ಇನ್ನೇಕೆ ತಡ? ಈ ಪುಸ್ತಕ ಓದಲು ಆರಂಭಿಸಿ. ಅದನ್ನೂ ಮುಂದೂಡಬೇಡಿ.
Reviews
There are no reviews for this product.