ಕಣ್ ತೆರೆಸುವ ಸ್ಪೂರ್ತಿದಾಯಕ ಕಥೆಗಳು(ರಾಜಮ್ಮ ಡಿ ಕೆ) - Kan Teresuva Spoorthidayaka Kathegalu(Rajamma D K)
- ₹150₹130
ತಮ್ಮ ಹೆಚ್ಚಿನ ಸಮಯವನ್ನು ಇಂಟರ್ನೆಟ್, ಸ್ಮಾರ್ಟ್ಫೋನ್, ದೃಶ್ಯ ಮಾಧ್ಯಮಗಳಲ್ಲಿ ಕಳೆಯುವ ಮಂದಿ ತಮಗರಿವಿಲ್ಲದಂತೆ ಪಡೆಯುವುದಕ್ಕಿಂತ ಹೆಚ್ಚಾಗಿ ಕಳೆದುಕೊಳ್ಳುತ್ತಿರುವುದೇ ಹೆಚ್ಚು. ನಿಜವಾದ ಸಂತಸ, ನೆಮ್ಮದಿ, ಜೀವನ ಪ್ರೀತಿ, ಸಕಾರಾತ್ಮಕ ಆಲೋಚನೆ, ಒಳ್ಳೆಯತನ ಇವೆಲ್ಲ ಮರೆಯಾಗಿ ಖಾಲಿ ಖಾಲಿ ಎನಿಸುವ ಮನಸ್ಸುಗಳಿಗೆ ಖಾಲಿ ಜಾಗವನ್ನು ಭರ್ತಿ ಮಾಡುವ ಪ್ರಯತ್ನವೇ ಕಣ್ ತೆರೆಸುವ ಅಂದರೆ ಹೊಸ ದಿಕ್ಕಿನೆಡೆಗೆ, ಹೊಸ ಸಾಧ್ಯತೆಗಳ ಕಡೆಗೆ ಯೋಚಿಸಲು, ಪ್ರಯತ್ನ ಬಿಡದೆ ಅಂದುಕೊಂಡ ಕಾರ್ಯವನ್ನು ಯಶಸ್ವಿಯಾಗಿ ಸಾಧಿಸಲು, ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಲು, ಬದುಕಿನ ಉದ್ದೇಶವನ್ನು ನೆನಪಿಸಿಕೊಳ್ಳಲು, ಅರ್ಥಪೂರ್ಣವಾಗಿ ಬದುಕಲು ಎಚ್ಚರಿಸುವ ಸ್ಫೂರ್ತಿ ಕಥೆಗಳದ್ದು. ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಪುಸ್ತಕಕ್ಕಿರುವುದರಿಂದ, ವಿಭಿನ್ನ ವಸ್ತು, ವಿಷಯಗಳನ್ನು ಆರಿಸಿಕೊಂಡು ರಚಿಸಲಾಗಿರುವ 50 ಸ್ಫೂರ್ತಿ ಕಥೆಗಳನ್ನು ಓದುವುದರ ಮುಖೇನ ಕಳೆದುಕೊಂಡದ್ದನ್ನು ಮರಳಿ ಪಡೆಯಲಿ, ಹೊರಗಣ್ಣಿನ ಜೊತೆಗೆ ಒಳಗಣ್ಣನ್ನೂ ತೆರೆಯುವಂತಾಗಲಿ ಎಂಬುದೇ ಈ ಕೃತಿಯ ಆಶಯ.
Reviews
There are no reviews for this product.