ಮಾಸ್ಕ್ ಧರಿಸಿ, ಸುರಕ್ಷಿತವಾಗಿರಿ
 

ಕರ್ಣ ಕುಂಡಲಧಾರಿಣಿ(ಪರಮ್ ಭಾರದ್ವಾಜ್) - Karna Kundaladaarini(Param Bharadwaj)

  • ₹80

Add to Wish List

Compare this Product

Ex Tax: ₹80

Availability: In Stock

Product Code: KARNA

ಪ್ರತಿ ಸಾಲನ್ನೂ ಅನುಭಾವದ ಕುಂಚದಲ್ಲಿ ಅದ್ದಿ ಚಿತ್ರಿಸಿದಂತಿರುವ ಪರಮ್ ಭಾರದ್ವಾಜ್ ಅವರ ಕಾದಂಬರಿ-ಕರ್ಣ ಕುಂಡಲಧಾರಿಣಿ. ತನ್ನ ವಿನೂತನ ಕತಾ ನಿರೂಪಣೆಯಿಂದ ಓದುಗರನ್ನು ಸೆಳೆಯುತ್ತದೆ. ಕೃತಿಗೆ ಆಶಯ ನುಡಿ ಬರೆದಿರುವ ಚಲನಚಿತ್ರ ನಿರ್ದೇಶಕ ಸುಧೀರ್‌ ಶಾನುಭಾಗ್‌ ಅವರು “ಕಥಾ ನಾಯಕ ಕರ್ಣನ ಸೋಲು, ಗೆಲುವು, ಸುಖ, ದುಃಖ, ಕಣ್ಣೀರು, ನಗು ಎಲ್ಲವನ್ನೂ ಗೆಳೆಯನೆಂಬ ಪಾತ್ರದ ಮೂಲಕ ಬಿಂಬಿಸಿರುವ ಈ ಕಥಾನಕ ಗೆಳೆತನದ ಅವಶ್ಯಕತೆಯನ್ನು ಹೇಳುವ ವಿಶಿಷ್ಟ ಬಗೆಯ ನಿರೂಪಣಾ ಶೈಲಿ ಹೊಂದಿರುವ ಕಿರು ಕಾದಂಬರಿ. ಸಾಮಾನ್ಯವಾಗಿ ಸಿನೆಮಾಗಳಲ್ಲಿರುವಂತಹ ಫ್ಲಾಷ್ಬ್ಯಾಕ್ ತಂತ್ರವನ್ನು ಕಥಾ ನಿರೂಪಣೆಯಲ್ಲಿ ಬಳಸಲಾಗಿದೆ. ಈ ತಂತ್ರ ಕಥೆಯನ್ನು ಕುತೂಹಲಕಾರಿಯಾಗಿ ಸಾಗಿಸುವಲ್ಲಿ ಯಶಸ್ವಿಯಾಗಿದೆ” ಎಂದು ಶ್ಲಾಘಿಸಿದ್ದಾರೆ.

Reviews

There are no reviews for this product.

Write a review

Note: HTML is not translated!