ಹುಲಿ ಪತ್ರಿಕೆ ೨ ಪ್ರಿ-ಆರ್ಡರ್ - https://tinyurl.com/5jyh4cfs
 

ದಿವ್ಯ ಸುಳಿ(ಡಾ. ಕೆ.ಎನ್. ಗಣೇಶಯ್ಯ) - Divya Suli(Dr. K.N. Ganeshayya)

  • ₹330

Add to Wish List

Compare this Product

Ex Tax: ₹330

Availability: In Stock

Product Code: DIVYASULI

ಇಡೀ ವಿಶ್ವ, ಬ್ರಹ್ಮಾಂಡವೆ ಆಗಲಿ, ಅದರಲ್ಲಿನ ಜೀವ ಪ್ರಪಂಚವೆ ಆಗಲಿ, ಹಾಗೂ ಆ ಜೀವ ಪ್ರಪಂಚದ ಪ್ರಜ್ಞಾವರ್ತನೆಗಳೆ ಆಗಲಿ, ಎಲ್ಲವೂ ಒಂದಾನೊಂದು ರೀತಿಯಲ್ಲಿ ಯಾವುದೋ ಸುಳಿಗೆ ಸಿಕ್ಕಿ ವಿಕಾಸಗೊಂಡ ಪ್ರಕಾರಗಳು. ಹಾಗೆಯೇ, ವಿಜ್ಞಾನ, ಕಲೆ, ಸಾಹಿತ್ಯ, ಧರ್ಮ, ಇವೆಲ್ಲವೂ ಮಾನವನ ಪ್ರಜ್ಞೆಯ ಕೂಸುಗಳೇ ಆದರೂ, ಅವು ಆ ಪ್ರಜ್ಞೆಯನ್ನೇ ತಮ್ಮ ಸಂಕೋಲೆಗಳಲ್ಲಿ ಕಟ್ಟಿಹಾಕಬಲ್ಲ ಶಕ್ತಿ ಸುಳಿಗಳು ಎಂಬ ಕಟುಸತ್ಯವನ್ನು ಲೇಖಕರು ಇಲ್ಲಿ ಪರಿಚಯಿಸುತ್ತಾರೆ. ಜೀವ ಪ್ರಪಂಚದ ಹಲವಾರು ಆಯಾಮಗಳನ್ನು ಅರಿಯಲು ವೈಜ್ಞಾನಿಕ ಅಧ್ಯಯನದಲ್ಲಿ ನಿರತರಾಗಿದ್ದ ಲೇಖಕರು, ಕ್ರಮೇಣ ವಿಜ್ಞಾನದ ಹಾದಿಯಲ್ಲಿಯೇ ಹಲವು ಧಾರ್ಮಿಕ ವಸ್ತು-ವಿಷಯಗಳನ್ನೂ ಅವಲೋಕಿಸಲು ಮುಂದಾದಾಗ ಕಂಡುಕೊಂಡ ದಿವ್ಯಸುಳಿಗಳ ಪರಿಚಯವನ್ನು, ಆ ಪಯಣದ ಹೆಜ್ಜೆಗಳನ್ನೂ ಈ ಹೊತ್ತಿಗೆ ತೆರೆದಿಡುತ್ತದೆ. ಅವರೇ ಹೇಳುವ ಹಾಗೆ ಈ ಹೊತ್ತಿಗೆಯಲ್ಲಿ- ಪುರಾವೆಗಳನ್ನಾಧರಿಸಿದ ವೈಜ್ಞಾನಿಕ ವಿಷಯಗಳಿಂದ- ಕೇವಲ ತರ್ಕಗಳನ್ನೇ ಆಧರಿಸುವ ಶೋಧಗಳವರೆಗೆ ವೈವಿಧ್ಯಮಯ ವಸ್ತುಗಳ ನಡುವಿನ ಪ್ರಯಾಣವಿದೆ. ವಿಜ್ಞಾನ, ಚರಿತ್ರೆ ಹಾಗೂ ಪೌರಾಣಿಕ ವಿಷಯಗಳ ಸುತ್ತ ಕಥೆಕಾದಂಬರಿ ಹೆಣೆಯುವ ಡಾ.ಕೆ.ಎನ್.ಗಣೇಶಯ್ಯ, ದಿವ್ಯಸುಳಿಯಲ್ಲಿ ಅವೆಲ್ಲ ವಿಷಯಗಳ ಅಂತರಾಳದ ಸಂಬಂಧವನ್ನು ಕೆದಕಿ ತೆಗೆಯಲು ಪ್ರಯತ್ನಿಸಿದ್ದಾರೆ.

Reviews

There are no reviews for this product.

Write a review

Note: HTML is not translated!