ಮಹಾಭಾರತದ ವಿರಳ ಕಥೆಗಳು(ಕೆ.ಪಿ. ಅಶ್ವಿನ್ ರಾವ್) - Mahabharatada Virala Kathegalu(KP Ashwin Rao)
- ₹120
ಕುರುಕ್ಷೇತ್ರ ಯುದ್ಧವಾದಾಗ ವಿಕರ್ಣ ತನ್ನ ಅಣ್ಣನ ಪರವಾಗಿಯೇ ಯುದ್ಧಕ್ಕೆ ನಿಲ್ಲುತ್ತಾನೆ. ಸುಮಾರು ೧೪ ದಿನಗಳ ಕಾಲ ಪಾಂಡವರ ವಿರುದ್ಧ ವೀರೋಚಿತವಾಗಿ ಯುದ್ಧ ಮಾಡುತ್ತಾನೆ. ಅವನ ಯುಧ್ಧ ಸಾಮರ್ಥ್ಯವನ್ನು ಭೀಷ್ಮ, ದ್ರೋಣರು ತುಂಬಾ ಮೆಚ್ಚುತ್ತಾರೆ. ಹದಿನಾಲ್ಕನೇ ದಿನ ಭೀಮ ವಿಕರ್ಣನಿಗೆ ಎದುರಾಗುತ್ತಾನೆ. ವಿಕರ್ಣನಲ್ಲಿ ಧರ್ಮವಿದೆ ಎಂದು ತಿಳಿದಿದ್ದ ಭೀಮ ಅವನಿಗೆ ಯುದ್ಧ ಬಿಟ್ಟು ಹೋಗು, ನಿನಗೆ ಜೀವದಾನ ನೀಡುತ್ತೇನೆ ಎಂದು ತಿಳಿಸುತ್ತಾನೆ. ಆದರೆ ನಾನು ನನ್ನ ಅಣ್ಣನಾದ ದುರ್ಯೋಧನನನ್ನು ಬಿಡಲು ತಯಾರಿಲ್ಲ ಎನ್ನುತ್ತಾನೆ. ಆಗ ಭೀಮ ನೀನು ಧರ್ಮದ ಪರವಾಗಿದ್ದಿ ಅವನು ಅಧರ್ಮಿ ಆದರೂ ನೀನು ಯಾಕೆ ಅವನನ್ನು ಬೆಂಬಲಿಸುತ್ತಿ? ಎಂದಾಗ ವಿಕರ್ಣ ಹೇಳುತ್ತಾನೆ ಅವನು ನನ್ನ ಅಣ್ಣ. ಅಣ್ಣ ಎಂಥವನೇ ಆಗಲಿ ಧರ್ಮ ನನಗೆ ನನ್ನ ಅಣ್ಣನಿಗೆ ಸಹಾಯ ಮಾಡಲು ಹೇಳುತ್ತದೆ. ಆದುದರಿಂದ ನನ್ನ ಕೊನೆಯುಸಿರು ಇರುವವರೆಗೆ ನಾನು ನಿನ್ನ ಎದುರು ಕಾದಾಡುವೆ. ಯಾವಾಗ ಶ್ರೀಕೃಷ್ಣ ನಿಮ್ಮ ಪಕ್ಷದಲ್ಲಿದ್ದಾರೆಯೋ ಆಗ ನಿಮಗೆ ಜಯ ಶತಸಿದ್ಧ. ಆದರೂ ನಿನ್ನನ್ನು ಎದುರಿಸುತ್ತೇನೆ ಭೀಮ, ಎಂದು ಭೀಮನ ಮೇಲೆ ಗಧಾಪ್ರಹಾರ ಮಾಡುತ್ತಾನೆ. ವಿಕರ್ಣ ಹಾಗೂ ಭೀಮನ ನಡುವೆ ಗಧಾ ಯುದ್ಧ ನಡೆದು ಭೀಮ ವಿಕರ್ಣನನ್ನು ಕೊಲ್ಲುತ್ತಾನೆ. ವಿಕರ್ಣನ ಸಾವು ಭೀಮನಲ್ಲೂ ತುಂಬಾ ವೇದನೆ ತರುತ್ತದೆ. ಅಧರ್ಮದ ಪಕ್ಷದಲ್ಲಿ ಧರ್ಮ ಇದ್ದರೂ ಅದು ಪರಾಜಯವೇ ಕಾಣುತ್ತದೆ ಎಂದು ತಿಳಿದುಕೊಳ್ಳುತ್ತಾನೆ ಭೀಮ.
ಮಹಾಭಾರತದ ಕೆಲವು ಅಪರೂಪದ ಸಂಗತಿಗಳನ್ನು ತಿಳಿಸುವ ಒಂದು ವಿಶಿಷ್ಟ ಪುಸ್ತಕ
Reviews
There are no reviews for this product.