ಲಾಲಿಪಾಪ್ ಮತ್ತು ಇತರ ಕಥೆಗಳು(ಹರಿಕಿರಣ್. ಹೆಚ್) - Lollypop Mattu Itara Kathegalu(Harikiran H)
- ₹90
"ಸೀದಾ ಗ್ರೌಂಡ್ ಫ್ಲೂರ್'ಗೆ ಹೋಗಪ್ಪ, ಲೇಟಾಯ್ತು” ಅಂತಂದ್ಲು ಕರುಣಾ.
"ಆಯಿತು ಮ್ಯಾಡಮ್” ಅಂತಂದ ತನ್ನ ಕ್ಷೀಣ ಸ್ವರದಲ್ಲಿ.
"ಲಿಫ್ಟ್ ಆಪರೇಟರ್ ಎಲ್ಲಿ” ಎಂಬ ಅವಳ ಪ್ರಶ್ನೆಗೆ “ತಂದೆಗೆ ಜ್ವರ” ಎಂದು ಅದೇ ನಿರ್ಲಿಪ್ತ ಭಾವದೊಂದಿಗೆ.
ಸ್ವಲ್ಪಾನೂ ಬುದ್ದಿ ಇಲ್ಲದ ಜನಗಳು ಚಿಕ್ಕ ಮಕ್ಕಳನ್ನೆಲ್ಲ ಯಾಕೆ ಹೀಗೆ ಕೆಲಸಕ್ಕೆ ಹಚ್ಚುತ್ತಾರೆ ಅಂತ ಮನಸಿನಲ್ಲೇ ಬೈದುಕೊಂಡಳು.
"ನೀನು ಯಾಕೆ ಶಾಲೆಗೆ ಹೋಗಿಲ್ಲ, ಸಣ್ಣ ಮಕ್ಳು ಕೆಲಸ ಮಾಡಬಾರದು ಅಂತ ಗೊತ್ತಿಲ್ವಾ ನಿನ್ನ ತಂದೆಗೆ?" ಅಂತ ಸ್ವಲ್ಪ ಗದರಿಸುವ ಸ್ವರದಲ್ಲಿ ಕೇಳಿದಳು. ಈ ಪ್ರಶ್ನೆ ತನಗಲ್ಲವೆಂಬಂತೆ ಅವನು ತನ್ನ ಕಿಸೆಯಿಂದ ಒಂದು ಲಾಲಿಪಾಪ್ ತೆಗೆದು ಬಾಯಿಗಿಟ್ಟ. ಲಾಲಿಪಾಪ್ ನೋಡುತ್ತಲೇ ಅಷ್ಟು ಹೊತ್ತು ಸುಮ್ಮನಿದ್ದ ರಾಹುಲ್ “ಅಮ್ಮ ನಂಗೆ ಆ ಲಾಲಿಪಾಪ್ ಬೇಕು” ಅಂತ ಕೂಗುತ್ತಾ ಹಠ ಮಾಡಲು ಶುರುವಿಟ್ಟ
Reviews
There are no reviews for this product.