ಓದಿನ ಮನೆ(ದೀಪಾ ಫಡ್ಕೆ) - Odina Mane(Deepa Padke)

  • ₹150₹135

Add to Wish List

Compare this Product

Ex Tax: ₹135

Availability: In Stock

Product Code: ODINAMANE

ಈ ರೀತಿಯ ವಿಮರ್ಶಾ ಮಾರ್ಗ ಕನ್ನಡಕ್ಕೆ ಅಗತ್ಯವಿದೆ. ಒಂದು ಪುಸ್ತಕ ಹೀಗೆಯೇ ಇರಬೇಕು ಎನ್ನುವ ಸ್ಥಾಪಿತ ಸಿದ್ಧಾಂತದ ಮೂಲಕ ನೋಡುವ ವಿಮರ್ಶಾ ಕ್ರಮಕ್ಕಿಂತ ಭಿನ್ನವಾದ ಕ್ರಮವಿದು. ಒಂದು ಪುಸ್ತಕ ಹೇಗಿದೆಯೋ ಹಾಗೆಯೇ ಅದನ್ನು ಸ್ವೀಕರಿಸುವುದು ಇಲ್ಲಿ ಕಾಣಿಸುವ ‘ಓದುಗ ದೃಷ್ಟಿ’. ಆ ಮೂಲಕ ಪುಸ್ತಕ ಹೇಗಿದ್ದರೆ ಓದುಗರ ಅನುಭವದೊಂದಿಗೆ ಒಂದಾಗಿ ಬೆಳೆಯುತ್ತದೆ ಎನ್ನುವುದನ್ನು ಹೇಳುವ ಮೂಲಕ ದೀಪಾ ಅವರು ಲೇಖಕರಿಗೆ ಹೆಚ್ಚು ಸಾಧ್ಯತೆಗಳನ್ನು ತೆರೆದಿಡುತ್ತಾರೆ. ತಾನು ಓದುವ ಲೇಖಕ/ಲೇಖಿಕೆಯರ ಸ್ವಾತಂತ್ರ್ಯವನ್ನು ರಕ್ಷಿಸುವುದರಲ್ಲಿ ದೀಪಾ ಅವರದು ಎತ್ತಿದ ಕೈ. ಆದ್ದರಿಂದ ದೀಪಾ ಅವರ ಬರೆಹಗಳನ್ನು ಸಮಾಜಮುಖಿ ಎನ್ನುವುದಕ್ಕಿಂತ ಜೀವನ್ಮುಖಿ ಎನ್ನುವುದು ನನಗೆ ಪ್ರಿಯವೆನಿಸುತ್ತದೆ. ಸಾಕ್ಷಿ ಬೇಕಾದರೆ ‘ನೆನಪೇ ಸಂಗೀತ’ದ ಬಗ್ಗೆ ಬರೆಯುತ್ತಾ, ‘ದಾಂಪತ್ಯ ಮತ್ತು ಸನ್ಯಾಸ’ ಎರಡೂ ವ್ಯಕ್ತಿ ತನ್ನ ವೈಯಕ್ತಿಕ ಗುರುತನ್ನು ಕಳೆದುಕೊಳ್ಳುವ ಸುಂದರವಾದ ದಾರಿಗಳು” ಎಂಬ ಮಾತನ್ನು ಗಮನಿಸಿ.

Reviews

There are no reviews for this product.

Write a review

Note: HTML is not translated!