ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಪಾತಾಳ ಗರಡಿ(ವಾಸುದೇವ ಮೂರ್ತಿ) - Pathala Garadi(Vasudev Murthy)

  • ₹150

Add to Wish List

Compare this Product

Ex Tax: ₹150

Availability: In Stock

Product Code: PATALAGARDI

ಪ್ರಕಾಶನ: ಹರಿವು ಬುಕ್ಸ್


ವೃತ್ತಿಯಿಂದ ಸಿವಿಲ್ ಇಂಜಿನಿಯರ್ ಆಗಿರುವ ವಾಸುದೇವ್ ಮೂರ್ತಿ ಅವರು, ಒಬ್ಬ ಅತ್ಯುತ್ತಮ ಬರಹಗಾರರೂ ಆಗಿದ್ದಾರೆ. 25 ವರ್ಷಗಳಿಗಿಂತ ಹೆಚ್ಚು ಕಾಲ ಕಾರ್ಪೋರೇಟ್‌ ಸಂಸ್ಥೆಗಳಲ್ಲಿ ದುಡಿದ ಅನುಭವವುಳ್ಳ ಇವರು ಒಬ್ಬ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ನಡವಳಿಕೆ ವಿಶ್ಲೇಷಕರಾಗಿದ್ದಾರೆ. ಕ್ರೈಮ್ ಥ್ರಿಲ್ಲರ್‌ಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರು. ಇವರ ಹಲವಾರು ಕಿರುಗತೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಮೊದಲ ಕೃತಿ, “ದಿ ಪರ್ಫೆಕ್ಟ್ ಮರ್ಡರ್” ಬಹಳಷ್ಟು ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ಬಿಡುಗಡೆಗೆ ಅಣಿಯಾಗಿರುವ “ಪಾತಾಳ ಗರಡಿ”, 7 ಬಗೆಬಗೆಯ ಥ್ರಿಲ್ಲರ್ ಕತೆಗಳ ಗೊಂಚಲು. ಈ ಕತೆಗಳು ರೋಚಕ ಬರವಣಿಗೆಯ ಶೈಲಿಯಿಂದ ಓದುಗರಿಗೆ ಥ್ರಿಲ್ ನೀಡುವುದರಲ್ಲಿ ಯಾವ ಸಂಶಯವೂ ಇಲ್ಲ. ಅವರ ಬರವಣಿಗೆಯ ಶೈಲಿ ಓದುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಅಡಿಗಡಿಗೆ ಕುತೂಹಲದ ಕಡಲಿಗೆ ನೂಕಿ, ಊಟ ನಿದ್ದೆ ಬಿಟ್ಟು ಓದುವಂತೆ ಮಾಡುವ ಗುಣ ಈ ಕತೆಗಳಿವೆ. ಪತ್ತೇದಾರಿ ಕತೆಗಳನ್ನು ಓದುವ ಪ್ರತಿಯೊಬ್ಬರಿಗೂ ಈ ಪುಸ್ತಕ ಖಂಡಿತ ಇಷ್ಟವಾಗಲಿದೆ.

Reviews

There are no reviews for this product.

Write a review

Note: HTML is not translated!