ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ನೂರಕ್ಕೆ ನೂರು(ವಿಠಲ್ ಶೆಣೈ) - Noorakke Nooru(Vittal Shenoy)

  • ₹170

Add to Wish List

Compare this Product

Ex Tax: ₹170

Availability: In Stock

Product Code: NURAKKENURU


ಹತ್ತನೆಯ ತರಗತಿಯ ವಿದ್ಯಾರ್ಥಿಯೊಬ್ಬನ ಜೀವನದ ಮಹತ್ತರ ತಿರುವಿನ ವಿಶಿಷ್ಟ ಕಥೆ


ನ್ಯೂಟನ್ ನ ಮೇಲೆ ಕೂತು ಕಿಟ್ಟಿ ಹರಸಾಹಸಪಟ್ಟು ಪ್ರಣವ್ ನ ಸ್ಕೂಟರನ್ನು ಹಿಂಬಾಲಿಸುತ್ತಿದ್ದ. 


“ಲೇ, ಪ್ರಣವ್ ಸ್ವಲ್ಪ ಸ್ಲೋ ಆಗಿ ಹೋಗಲ್ಲೆ... ಪೆಡಲ್ ತುಳಿದು ತುಳಿದು ಸುಸ್ತಾಗ್ತಾ ಇದೆ,” ಕಿಶೋರ್ ಕಿರುಚಿ ಹೇಳಿದ.


“ಎಲ್ಲಿ ಕರ್ಕೊಂಡು ಹೋಗ್ತೀನಿ ಅಂದ್ರೆ, ಇನ್ನು ಸುಸ್ತು ಅನ್ನೋ ಪದವೇ ನಿನ್ನ ತಲೆಯಿಂದ ಹೊರಟು ಹೋಗತ್ತೆ ನೋಡು,” ಸ್ಕೂಟರ್ ನಿಧಾನಿಸುತ್ತಾ ಪ್ರಣವ್ ಅಂದ.


“ಹೌದಾ? ಎಲ್ಲಿಗೋ ನಮ್ಮ ಪಯಣ?” ಹಿಂದುಗಡೆ ಕುಳಿತಿದ್ದ ಸುರೇಂದ್ರ ಆತುರದಿಂದ ಕೇಳಿದ. ಪ್ರಣವ್ ಅವರನ್ನು ಆನೆಕುಪ್ಪೆಯ ಹೊರರಸ್ತೆಗೆ ಕರೆದು ತಂದು, ಅಲ್ಲಿ ಎಡ, ಬಲ, ಎಡ, ಬಲ ತಿರುಗಿ ತಿರುಗಿ, ಕಷ್ಟಕರವಾದ ಹಾದಿಯಲ್ಲಿ ಕರೆದೊಯ್ದು, ಒಂದು ಹಾಳು ಬಿದ್ದ ಶೆಡ್ ಬಳಿ ಬಂದ. 


“ಯಾರಿದ್ದಾರೋ ಇಲ್ಲಿ?” ಕಿಶೋರ್ ಕೇಳಿದ. ಸ್ಕೂಟರ್ ಸ್ಟ್ಯಾಂಡ್ ಹಾಕಿ ಪ್ರಣವ್ ಒಮ್ಮೆ ತನ್ನ ಇಬ್ಬರೂ ಗೆಳೆಯರನ್ನು ದಿಟ್ಟಿಸಿದ.


“ಪರೀಕ್ಷೆ ಹತ್ರ ಬರ್ತಾ ಇದೆ ಅಲ್ವಾ?” ಪ್ರಣವ್ ಕೇಳಿದ.


“ಅದಕ್ಕೆ?” ಕಿಶೋರ್ ಪ್ರಶ್ನೆ.


“ನಮ್ಮ ಜ್ಞಾಪಕ ಶಕ್ತಿ ಹೆಚ್ಚಿಸುವ ಡ್ರಗ್ ಒಂದು ಹೊಸದಾಗಿ ಮಾರ್ಕೆಟ್ ಗೆ ಬಂದಿದೆಯಂತೆ! ಟ್ರೈ ಮಾಡೋಣ್ವಾ?” ಪ್ರಣವ್ ಕೇಳಿದ.


“ಏನೋ ಡ್ರಗ್ಸಾ? ಯಪ್ಪಾ... ನೀನು ಡ್ರಗ್ಸ್ ತಗೋತಿಯಾ?” ಕಿಶೋರ್ ಆಶ್ಚರ್ಯದಿಂದ ಕೇಳಿದ.

Reviews

There are no reviews for this product.

Write a review

Note: HTML is not translated!