ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 
Search - bhyrappa

Search Criteria
ಅನ್ವೇಷಣ - Anveshana(S L Bhyrappa)
₹260 Ex Tax: ₹260

ಈ ಕಾದಂಬರಿಯ ಪಾತ್ರಗಳು ತಮ್ಮ ತಮ್ಮ ಜೀವನವನ್ನು ಹುಡುಕಿಕೊಳ್ಳುವ ಪರಿಕ್ರಮದಲ್ಲಿ ‘ಗೃಹಭಂಗ’ದ ವಿಶ್ವನಾಥನ ಜೀವನವು ಓದುಗರಿಗೆ ಸ್ಪುಟವಾಗುತ್ತಾ ಹೋಗುತ್ತದೆ. ಅಲೆಮಾರಿಯಾಗಿ, ಹೋಟೆಲು ಕೆಲಸಗಾರನಾಗಿ, ಜಟಕಾ ಹೊಡೆಯುವವನಾಗಿ, ಪ್ರಿಯಕರನಾಗಿ, ಇನ್ನೂ ಹಲವು ರೀತಿಯಲ್ಲಿ ಅವನು ಸಾಗಿದ ದಾರಿಯಿಂದ ವಿವಿಧ ಪಾತ್ರಗಳು ಆಕರ್ಷಿತರಾಗುತ್ತಾರೆ; ತಮ್ಮನ್ನು ಅವನೊಡನೆ ಹೋಲಿಸಿಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ಯಾರಿಗೂ ಅವನ ಜೀವನದ ಸಮಗ್ರ ಚಿತ್ರ ಕಾಣುವುದಿಲ್ಲ. ಈ ಕಾದಂಬರಿಯಲ್ಲಿ ಭೈರಪ್ಪನವರು ಸಾಧಿಸಿರುವ ತಂತ್ರಕೌಶಲ, ಜೀವನಗ್ರಹಿಕೆ ಬುದ್ಧಿಭಾವ, ಇಂದ್ರಿಯಾತ್ಮಕ ಚಿತ್ರಗಳ ಸಮರಸ ಹದವು ಕನ್ನಡ ಕಾದಂಬರೀಲೇಖನದಲ್ಲಿ ಒಂದು ಮುಖ್ಯ ಹಂತವಾಗಿ ನಿಂತಿದೆ...

Add to Cart
ಆವರಣ - Avarana(S L Bhyrappa) - ದಪ್ಪ(Hardback)
₹375 Ex Tax: ₹375

ಇದು ಭೈರಪ್ಪನವರ  ಎರಡನೆಯ  ಐತಿಹಾಸಿಕ  ಕಾದಂಬರಿ . ಎಂಟನೆಯ  ಶತಮಾನದ  ಸಂಧಿಕಾಲದ  ಅಂತಸ್ಸತ್ತ್ವವನ್ನು   ‘ಸಾರ್ಥ’ದಲ್ಲಿ  ಕಾದಂಬರಿಯ ರೂಪದಲ್ಲಿ  ಆವಿಷ್ಕರಿಸಿದ್ದಾರೆ. ’ಆವರಣ’ ದಲ್ಲಿ  ‘ಸಾರ್ಥ’ ದ  ಕಾಲದ  ಆನಂತರದ ಸತ್ಯವನ್ನು ಚಿತ್ರಿಸುವ ಪ್ರಯತ್ನಮಾಡಿದ್ದಾರೆ….. ಸಂವಹನ  ಪ್ರಕ್ರಿಯೆಯಲ್ಲಿ  ಹುಟ್ಟುವ ಸಮಸ್ಯೆಗಳನ್ನು ಪರಿಹರಿಕೊಳ್ಳುವ  ವಿಧಾನಗಳನ್ನು  ತಂತ್ರವೆಂದು ಕರೆಯಬಹುದು. ಇತಿಹಾಸ  ಮತ್ತು ಇತಿಹಾಸಕಾರ ಇಬ್ಬರನ್ನೂ ‘ ಆವರಣ ‘ವು  ಒಳಗೊಳ್ಳುತ್ತದೆ...

Add to Cart
ಆವರಣ - Avarana(S L Bhyrappa) -ಸಾದ(Paperback)
₹305 Ex Tax: ₹305

ಇದು ಭೈರಪ್ಪನವರ  ಎರಡನೆಯ  ಐತಿಹಾಸಿಕ  ಕಾದಂಬರಿ . ಎಂಟನೆಯ  ಶತಮಾನದ  ಸಂಧಿಕಾಲದ  ಅಂತಸ್ಸತ್ತ್ವವನ್ನು   ‘ಸಾರ್ಥ’ದಲ್ಲಿ  ಕಾದಂಬರಿಯ ರೂಪದಲ್ಲಿ  ಆವಿಷ್ಕರಿಸಿದ್ದಾರೆ. ’ಆವರಣ’ ದಲ್ಲಿ  ‘ಸಾರ್ಥ’ ದ  ಕಾಲದ  ಆನಂತರದ ಸತ್ಯವನ್ನು ಚಿತ್ರಿಸುವ ಪ್ರಯತ್ನಮಾಡಿದ್ದಾರೆ….. ಸಂವಹನ  ಪ್ರಕ್ರಿಯೆಯಲ್ಲಿ  ಹುಟ್ಟುವ ಸಮಸ್ಯೆಗಳನ್ನು ಪರಿಹರಿಕೊಳ್ಳುವ  ವಿಧಾನಗಳನ್ನು  ತಂತ್ರವೆಂದು ಕರೆಯಬಹುದು. ಇತಿಹಾಸ  ಮತ್ತು ಇತಿಹಾಸಕಾರ ಇಬ್ಬರನ್ನೂ ‘ ಆವರಣ ‘ವು  ಒಳಗೊಳ್ಳುತ್ತದೆ...

Add to Cart
ಉತ್ತರಕಾಂಡ - Uttarakaanda(S L Bhyrappa)
₹395 Ex Tax: ₹395

ನಲವತ್ತು ವರ್ಷಗಳ ಹಿಂದೆ ‘ಪರ್ವ’ದಲ್ಲಿ ದ್ರೌಪದಿ, ಕುಂತಿ, ಗಾಂಧಾರಿಯರನ್ನು ಚಿತ್ರಿಸಿದ ಭೈರಪ್ಪನವರು ಇಲ್ಲಿ ರಾಮಕಥೆ ಯನ್ನು ಸೀತೆಯ ಅನುಭವ ಮತ್ತು ಚಿಂತನೆಯ ಮೂಲಕ ಮೂಡಿಸಿದ್ದಾರೆ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ಸೀತಾ ಪರಿತ್ಯಾಗವು ಉತ್ತರ ಕಾಂಡದಲ್ಲಿ ಬರುತ್ತದೆ.‘ಜೋಡಿ ಹಕ್ಕಿಗಳಲ್ಲಿ ಬೇಡನು ಒಂದನ್ನು ಹೊಡೆದು ಅಗಲಿಸಿದ ನೋವಿನ ಭಾವವನ್ನು ವ್ಯಕ್ತಪಡಿಸಲು ನಾನು ರಾಮ ಸೀತೆಯರ ಜೀವನವನ್ನು ಬಳಸಿಕೊಂಡೆ. ಇದನ್ನಾದರೂ ಸುಖಾಂತ್ಯ ಮಾಡಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕವಿಯು ಏನನ್ನು ತಾನೆ ಬದಲಿಸಬಲ್ಲ? ಎಂಬ ವೈಫಲ್ಯ ಬಾಧಿಸುತ್ತಿದೆ,’ ಎಂದು ವಾಲ್ಮೀಕಿಮಹರ್ಷಿಗಳು ಶೋಕದಲ್ಲಿ ಮುಳುಗುತ್ತಾರೆ...

Add to Cart
ಉತ್ತರಕಾಂಡ - Uttarakaanda(S L Bhyrappa) - ಸಾದ
₹320 Ex Tax: ₹320

ನಲವತ್ತು ವರ್ಷಗಳ ಹಿಂದೆ ‘ಪರ್ವ’ದಲ್ಲಿ ದ್ರೌಪದಿ, ಕುಂತಿ, ಗಾಂಧಾರಿಯರನ್ನು ಚಿತ್ರಿಸಿದ ಭೈರಪ್ಪನವರು ಇಲ್ಲಿ ರಾಮಕಥೆ ಯನ್ನು ಸೀತೆಯ ಅನುಭವ ಮತ್ತು ಚಿಂತನೆಯ ಮೂಲಕ ಮೂಡಿಸಿದ್ದಾರೆ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ಸೀತಾ ಪರಿತ್ಯಾಗವು ಉತ್ತರ ಕಾಂಡದಲ್ಲಿ ಬರುತ್ತದೆ.‘ಜೋಡಿ ಹಕ್ಕಿಗಳಲ್ಲಿ ಬೇಡನು ಒಂದನ್ನು ಹೊಡೆದು ಅಗಲಿಸಿದ ನೋವಿನ ಭಾವವನ್ನು ವ್ಯಕ್ತಪಡಿಸಲು ನಾನು ರಾಮ ಸೀತೆಯರ ಜೀವನವನ್ನು ಬಳಸಿಕೊಂಡೆ. ಇದನ್ನಾದರೂ ಸುಖಾಂತ್ಯ ಮಾಡಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕವಿಯು ಏನನ್ನು ತಾನೆ ಬದಲಿಸಬಲ್ಲ? ಎಂಬ ವೈಫಲ್ಯ ಬಾಧಿಸುತ್ತಿದೆ,’ ಎಂದು ವಾಲ್ಮೀಕಿಮಹರ್ಷಿಗಳು ಶೋಕದಲ್ಲಿ ಮುಳುಗುತ್ತಾರೆ...

Add to Cart
ಕವಲು - Kavalu(S L Bhyrappa) -ದಪ್ಪ - Harbound
₹395 Ex Tax: ₹395

ಕಾನಿಸ್ಟೇಬಲ್ ನಂಜುಂಡೇ ಗೌಡ ಮುಗುಳ್ನಕ್ಕ. ಹಳ್ಳಿಯ ಅಭ್ಯಾಸದ ಅವನ ನಗೆಯಲ್ಲಿ ಮುಗುಳು ಮತ್ತು ಗಟ್ಟಿ ನಗೆಗಳ ವ್ಯತ್ಯಾಸ ಹೆಚ್ಚು ಗೊತ್ತಾಗಲಿಲ್ಲ. ‘ಯಾಕೆ ನಗ್ತೀರ ?’ ಕಂಬಿಗಳ ಒಳಗಿದ್ದ, ಬಿ.ಇ. ಓದಿ ಉದ್ಯಮಪತಿಯಾದ ಇವನು ಕೇಳಿದ. ‘ಓದಿದ ಗಂಡಸರೆಲ್ಲ ಎಂಗಸರಾಯ್ತಾರೆ. ಓದಿದ ಎಂಗಸರೆಲ್ಲ ಗಂಡಸರಾಯ್ತಾರೆ.’ ಎಂದು  ಅವನು ಈಗ ಗಟ್ಟಿಯಾಗಿ ನಕ್ಕ.* * *‘ಯು ಆರ್ ಮೈ ಕಸಿನ್,’ ಬೆಂಗಳೂರಿನ ಅವಳು ಹಳ್ಳಿ ಮನೆಯ ಹಿತ್ತಲಿನ ಪರಂಗಿ ಗಿಡದ ಹತ್ತಿರ ಅವನನ್ನು ಮಾತನಾಡಿಸಿದಳು.‘ನಿನಗೆ ಯಾರು ಇಂಗ್ಲಿಷ್ ಹೇಳಿಕೊಟ್ಟೋರು?’ ಅವನು ಒರಟಾಗಿ ಕೇಳಿದ, ಅವಳ ಸ್ಕೂಲಿನ ಯಾವ ಮಿಸ್ಸಿಗೂ ಇಲ್ಲದ ಒರಟಿನಿಂದ. ಇವನೇನು ನನಗೆ ಟೀಚರಾ  ಎಂದು ಅವಳಿಗೆ ರೇಗಿತು.‘ನನ್ನ ಮಿಸ್ಸು.ನನ್ನ ಮಮ್ಮಿ. ನನ್ನ ಮಮ್ಮಿ ಇಂಗ್ಲಿಷ್ ರೀಡರ್.’‘ಸರಿಯಾಗಿ ತಿಳಕ. ನಾನು ನಿನಗೆ ಕಸಿನ್ ಅಲ್ಲ. ಬ್ರದರ್. ಅಂದರೆ ಅಣ್ಣ . ನೀನು ನನಗೆ ಸಿಸ್ಟರ್. ಅಂದರೆ ತಂಗಿ,’ ಎಂದ.‘ಆದರೆ ನನ್ನ ಡ್ಯಾಡಿ ಮಮ್ಮಿ ಬೇರೆ. ನಿನ್ನ ಅಪ್ಪ ಅಮ್ಮ ಬೇರೆ,’ ಅವಳ ಅನುಮಾನ ಬಗೆಹರಿಯಲಿಲ್ಲ.‘ಬೇರೆ ಆದರೇನು? ನಿನ್ನಪ್ಪ ನಮ್ಮಪ್ಪನಿಗೆ  ಅಣ್ಣ. ನೀನು ನನಗಿಂತ ಚಿಕ್ಕೋಳು. ಆದ್ದರಿಂದ ನಾನು ನಿನಗೆ ಅಣ್ಣ. ನಿನಗೆ ಇಂಗ್ಲಿಷ್ ಹೇಳಿಕೊಟ್ಟೋರಿಗೆ ಬುದ್ದಿ ಇಲ್ಲ,’ ಅವನು  ಮೇಷ್ಟರಗಿರಿ ಮಾಡಿದ.***ಭಾರತೀಯ ಸಮಾಜದಲ್ಲಿ ಕವಲುದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುತ್ತಾ ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕಾದಂಬರಿ ಇದು...

Add to Cart
ಕವಲು - Kavalu(S L Bhyrappa) ಸಾದ - Paperback
₹340 Ex Tax: ₹340

ಗತಜನ್ಮ - Gatajanma(S L Bhyrappa)
₹70 Ex Tax: ₹70

‘ಗತಜನ್ಮ’ ವನ್ನು  ಶ್ರೀ  ಭೈರಪ್ಪನವರು  ತಮ್ಮ ಹೈಸ್ಕೂಲ್  ದಿನಗಳಲ್ಲಿ ಬರೆದಿದ್ದರು...

Add to Cart
ಗೃಹಭಂಗ - Gruhabhanga(S L Bhyrappa) - Hardbound
₹470 Ex Tax: ₹470

ಯಾವುದೇ ಬೌದ್ಧಿಕ ಜಿಜ್ಞಾಸೆಯ, ತಾತ್ತ್ವಿಕ, ವೈಚಾರಿಕ ವಿಶ್ಲೇಷಣೆಗಳ ಹಂಗಿಲ್ಲದೆ, ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ ‘ಗೃಹಭಂಗ’. ಯಾವುದೇ ಸಿದ್ಧಾಂತದ ವ್ಯಾಖ್ಯೆಗೂ ನಿಲುಕದ ಬದುಕಿನ ಒಳನೋಟಗಳ ಸಂಕೀರ್ಣ ವಿನ್ಯಾಸಗಳ ದರ್ಶನ ಮಾಡಿಸುವ ಈ ಕಾದಂಬರಿ, ಬದುಕಿಗೆ ಬದುಕೇ ಬರೆದ ಭಾಷ್ಯ.‘ಗೃಹಭಂಗ’ ಭಾರತದ ಎಲ್ಲ ಭಾಷೆಗಳಿಗೂ ಅನುವಾದವಾಗಿ ಎಲ್ಲ ಭಾಷೆಗಳ ಓದುಗರನ್ನು ಸೆರೆಹಿಡಿದು, ಸಮಕಾಲೀನ ಭಾರತೀಯ ಕಾದಂಬರಿಗಳಲ್ಲಿ ಅಗ್ರಮಾನ್ಯತೆ ಪಡೆದಿದೆ...

Add to Cart
ಗೃಹಭಂಗ - Gruhabhanga(S L Bhyrappa) - Paperback
₹390 Ex Tax: ₹390

ಯಾವುದೇ ಬೌದ್ಧಿಕ ಜಿಜ್ಞಾಸೆಯ, ತಾತ್ತ್ವಿಕ, ವೈಚಾರಿಕ ವಿಶ್ಲೇಷಣೆಗಳ ಹಂಗಿಲ್ಲದೆ, ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ ‘ಗೃಹಭಂಗ’. ಯಾವುದೇ ಸಿದ್ಧಾಂತದ ವ್ಯಾಖ್ಯೆಗೂ ನಿಲುಕದ ಬದುಕಿನ ಒಳನೋಟಗಳ ಸಂಕೀರ್ಣ ವಿನ್ಯಾಸಗಳ ದರ್ಶನ ಮಾಡಿಸುವ ಈ ಕಾದಂಬರಿ, ಬದುಕಿಗೆ ಬದುಕೇ ಬರೆದ ಭಾಷ್ಯ.‘ಗೃಹಭಂಗ’ ಭಾರತದ ಎಲ್ಲ ಭಾಷೆಗಳಿಗೂ ಅನುವಾದವಾಗಿ ಎಲ್ಲ ಭಾಷೆಗಳ ಓದುಗರನ್ನು ಸೆರೆಹಿಡಿದು, ಸಮಕಾಲೀನ ಭಾರತೀಯ ಕಾದಂಬರಿಗಳಲ್ಲಿ ಅಗ್ರಮಾನ್ಯತೆ ಪಡೆದಿದೆ...

Add to Cart
ಗ್ರಹಣ - Grahana(S L Bhyrappa)
₹200 Ex Tax: ₹200

ಗ್ರಹಣ, ಅಸತ್ಯವು  ಸತ್ಯವನ್ನು ಆವರಿಸುವ ಕ್ರಿಯೆ. ಸಮಾಜೋದ್ಧಾರಕ್ಕೆ ಅಗತ್ಯವಾದುದು ವ್ಯಕ್ತಿಯ ವರ್ಚಸ್ಸೊ ಅಥವಾ ಸಂಘಟನೆಯ ಧ್ಯೇಯವೊ? ನಾಮರೂಪಾತ್ಮಕ ಪ್ರಪಂಚದ ಉಪಾಧಿಗಳು ಆತ್ಮೋನ್ನತಿಗೆ ತಡೆಗಳಾದರೆ ಅದೇ ಉಪಾಧಿಗಳು ಸಮಾಜೋದ್ದಾರದ ಸಾದನಗಳಾತ್ತವೆಯೆ?ಹೀಗೆ ಸನ್ಯಾಸಿಯ ಸತ್ಯಾನ್ವೇಷಣೆ  ಮತ್ತು ಸಮಾಜದಲ್ಲಿ ಸ್ಥಾಪಿತವಾಗಿರುವ ನಂಬಿಕೆಗಳ ನಡುವೆ ಏರ್ಪಡುವ ಮೌಲ್ಯ ಸಂಘರ್ಷದ ವಿವಿಧ ಮಜಲುಗಳನ್ನು ಪರಾಮರ್ಶಿಸುವ ಕಾದಂಬರಿ ಗ್ರಹಣ...

Add to Cart
ಜಲಪಾತ - Jalapaatha(S L Bhyrappa)
₹190 Ex Tax: ₹190

ಸೃಷ್ಟಿಶಕ್ತಿಯಿಂದ ವಿಜೃಂಭಿಸುವ ಜೀವನಪ್ರವೃತ್ತಿ ಮತ್ತು ಆ ಶಕ್ತಿಯನ್ನು ಹತ್ತಿಕ್ಕುವ ಜೀವನಪರಿಸ್ಥಿತಿಯ ತಾಕಲಾಟವೇ ‘ಜಲಪಾತ’ದ ಕಥಾವಸ್ತು. ನೀರು ಮತ್ತು ಮಣ್ಣಿನ ಶಕ್ತಿಯಿಂದ ಕಂಗೊಳಿಸುವ ವನಶ್ರೀ, ಗಂಡು ಹೆಣ್ಣುಗಳ ಮೂಲಶಕ್ತಿಯಾದ ಜೀವನವಿಕಾಸ, ಮತ್ತು ಬೌದ್ಧಿಕಸ್ತರದಲ್ಲಿ ಆವಿರ್ಭವಿಸುವ ಕಲಾಸೌಂದರ್ಯ-ಇವು ಮೂರು, ವಿವಿಧಸ್ತರಗಳಲ್ಲಿ ಪ್ರಕಟವಾಗುವ ಒಂದೇ ಮೂಲಶಕ್ತಿ ಎಂಬುದನ್ನು ಕಾದಂಬರಿಯ ಅಂಗಗಳಾಗಿ ಬೆಳೆದಿರುವ ಪ್ರತೀಕಗಳು ಎತ್ತಿತೋರಿಸುತ್ತವೆ. ಸಂಯೋಗದ ಕರೆ ಮತ್ತು ಕ್ರಿಯೆ, ಗರ್ಭದ ವಿಕಾಸ, ಜನನಕ್ಕೆ ಪೂರ್ವಭಾವಿಯಾದ ನೋವಿನ ಅನುಭವ, ಮೊದಲಾದ ಸೃಷ್ಟಿಯ ಹಲವು ಹಂತಗಳನ್ನು ಅನುಭವದ ಹೊಚ್ಚ ಹೊಸತನದಿಂದ ಭಾಷೆಯಲ್ಲಿ ಹಿಡಿದಿಡಲು ಅನುಕೂಲವಾಗುವಂತೆ ಕಾದಂಬರಿಯ ಕತೆಯು, ಅದರ ಮೂಲ ಪಾತ್ರಗಳಾದ ಒಂದು ಗಂಡು ಮತ್ತು ಅದರ ಹೆಣ್ಣಿನ ಸ್ವಂತ ಅನುಭವದ ವರ್ಣನೆಯ ರೀತಿಯಲ್ಲಿ ಸಾಗುತ್ತದೆ...

Add to Cart
ತಂತು - Tantu(S L Bhyrappa) - ಸಾದಾ
₹850 Ex Tax: ₹850

ತನ್ನೂರು ಬಸವನಪುರದ ಚನ್ನಕೇಶವ  ದೇವಾಲಯದಲ್ಲಿದ್ದ ದೊಡ್ಡ  ಸರಸ್ವತಿ ವಿಗ್ರಹವನ್ನು ಕಳ್ಳಸಾಗಾಣೆದಾರರು ಮಾಯ  ಮಾಡಿದ್ದಾರೆಂಬ ಸುದ್ದಿ ತಿಳಿದ ಪ್ರತ್ರಿಕಾಸಂಪಾದಕ ರವೀಂದ್ರ  ಅಲ್ಲಿಗೆ ಹೋಗುತ್ತಾನೆ .ಅಲ್ಲಿಂದ ಆರಂಭವಾಗಿ ಇಡೀ ಸ್ವಾತಂತ್ರ್ಯೋತ್ತರ  ಭಾರತದ ನಾಡಿಯ ಕಥೆಯು ಬೆಳೆಯುತ್ತದೆ. ಬೆಂಗಳೂರು, ಬಸವನಪುರ, ಜೋಗಿ ಹಳ್ಳಿ, ಮೈಸೂರು, ದಿಲ್ಲಿ, ಬನಾರಸ್, ಪಟ್ಣ, ಕಲ್ಕತ್ತಾ…., ಸಂಗೀತ , ಶಿಕ್ಷಣ, ವೃತ್ತಪತ್ರಿಕೆ, ಉದ್ಯಮ, ನಿರ್ಯಾತ, ಮೊದಲಾದ ವ್ಯಾಪ್ತಿಗಳಿಗೆ ಪಾತ್ರಗಳ ಸ್ವಂತ ಅನುಭವದ ಮೂಲಕ ಜೀವ ಕೊಟ್ಟು ಆಕಾರದ ಐಕ್ಯವನ್ನು ಸಾಧಿಸಿ ಈ ಕಾದಂಬರಿಯು ಸಮಕಾಲೀನ ವಸ್ತುವನ್ನು ಕಲೆಯಾಗಿಸುವ ನಿರ್ಲಿಪ್ತಿಯನ್ನು ಪಡೆದಿದೆ...

Add to Cart
ತಬ್ಬಲಿಯು ನೀನಾದೆ ಮಗನೆ - Tabbaliyu Ninade Magane(S L Bhyrappa)
₹280 Ex Tax: ₹280

 ಗೋವನ್ನು ಸರ್ವದೇವತೆಗಳ ಸ್ವರೂಪವೆಂದು ಪೂಜಿಸುವ ಕಾಳಿಂಗಜ್ಜ ಮತ್ತು ಅದು ಹಾಲು ಮಾಂಸಗಳನ್ನು ಕೊಡುವ ಪ್ರಾಣಿ ಮಾತ್ರ ಎಂದು ಭಾವಿಸುವ ಆಮೆರಿಕೆಯಿಂದ ಹಿಂತಿರುಗಿದ ಮೊಮ್ಮಗ, ಇವರ ಮೌಲ್ಯಸಂವೇದನೆಗಳ ನಡುವೆ ನಡೆಯುವ ತಿಕ್ಕಾಟವೇ ಈ ಕಾದಂಬರಿಯ ವಸ್ತು.ಪ್ರಾಯಶಃ ಭಾರತದ ಎಲ್ಲ ಭಾಷೆಗಳಲ್ಲೂ ಪ್ರಚಲಿತವಿರುವ ಗೋವಿನ ಹಾಡಿನ ಹಿನ್ನಲೆಯಲ್ಲಿ ಆರಂಭವಾಗುವ ಕಾದಂಬರಿಯು, ಭಾರತೀಯ ಸಂಸ್ಕೃತಿಯ ಮೂಲ ಬೇರುಗಳನ್ನು ಹಿನ್ನಲೆಯಲ್ಲಿ ಕಾಣಿಸುತ್ತದೆ. ಈ ಕೃತಿಯನ್ನಾಧರಿಸಿ ಕನ್ನಡ   ಮತ್ತು ಹಿಂದಿಯಲ್ಲಿ ನಿರ್ಮಿಸಿರುವ ಚಲನ ಚಿತ್ರಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮನ್ನಣೆ ಪಡೆದಿವೆ. ಈ ಕಾದಂಬರಿಯ ಹಿಂದೀ ಅನುವಾದವೂ ಅಪಾರವಾದ ಮೆಚ್ಚುಗೆ ಪಡೆದಿದೆ.ಇದೊಂದು ಉತ್ಕೃಷ್ಟ ಸಾಹಿತ್ಯಕೃತಿ ಎಂದು ಭಾವಿಸುವವರಿರುವಂತೆಯೇ, ಪ್ರಗತಿವಿರೋಧಿ,ಪ್ರತಿಗಾಮಿ ಮೌಲ್ಯಗಳನ್ನು ಪ್ರತಿಪಾದಿಸುವ ತೀರ ಕಳಪೆ ಕಾದಂಬರಿ ಎಂದು ಇದನ್ನು ದೇಷಿಸುವವರೂ ಇದ್ದಾರೆ. ಪ್ರೀತಿ ದ್ವೇಷಗಳೆರಡನ್ನೂ ಪ್ರಚೋದಿಸುವ ಈ ಗುಣವು ಕಾದಂಬರಿಯ ಶಕ್ತಿಯ ಗುರುತಾಗಿದೆ...

Add to Cart
ದಾಟು - Daatu(S L Bhyrappa)
₹590 Ex Tax: ₹590

‘ದಾಟು’ ಜಾತಿ ಸಮಸ್ಯೆಯನ್ನು ಕುರಿತು ಭಾರತೀಯ ಭಾಷೆಗಳಲ್ಲಿ ಬಂದಿರುವ ಕಾದಂಬರಿಗಳಲ್ಲೆಲ್ಲ ವಿಶಿಷ್ಟವಾದ ಕೃತಿ ಎಂದು ಪರಿಗಣಿತವಾಗಿದೆ. ಪಶ್ಚಿಮದಿಂದ ಎರವಲು ಪಡೆದ ಅಥವಾ ಸಮಕಾಲೀನ ರಾಜಕೀಯ ಒತ್ತಡದಿಂದ ಹುಟ್ಟಿದ ಸಿದ್ಧಾಂತಗಳನ್ನವಲಂಬಿಸದೆ ಸಾಂದ್ರವಾದ ಜೀವನಾನುಭವವನ್ನೊಳಗೊಂಡು ಭಾರತೀಯ ಸಾಮಾಜಿಕ ಪರಂಪರೆಯ ತಳಮುಟ್ಟುವ ವಿಶ್ಲೇಷಣೆಯನ್ನು ಸಾಧಿಸಿರುವ ಈ ಕೃತಿಯು ದಲಿತ ವಿಚಾರದ ಮೂಲನೆಲವಾದ ಮಹಾರಾಷ್ಟ್ರದಲ್ಲೂ ಅಪಾರ ಮನ್ನಣೆ ಪಡೆದಿದೆ.ಜೀವಂತ ಪಾತ್ರಗಳು, ಇಡೀ ಇತಿಹಾಸವನ್ನು ಧ್ವನಿಸುವ ಮಿತ್ಗಳ ಕಲಾತ್ಮಕ ಬಳಕೆ ಪರಂಪರೆಯೊಳಗೇ ಇರುವ ಕ್ರಾಂತ ದೃಷ್ಟಿಯ ಆವಿಷ್ಕಾರಗಳಿಂದ ‘ದಾಟು’ವು ಭಾರತೀಯ ಬರವಣಿಗೆಯ ಉತ್ತಮ ಮಾದರಿಯಾಗಿದೆ. ಭಾರತದ ಎಲ್ಲ ಭಾಷೆಗಳಿಗೂ, ಇಂಗ್ಲಿಷಿಗೂ ಅನುವಾದವಾಗಿದೆ...

Add to Cart
ದೂರ ಸರಿದರು - Doora Saridaru(S L Bhyrappa)
₹245 Ex Tax: ₹245

ಗಂಡುಹೆಣ್ಣಿನ ಸಂಬಂಧದ ವಿಶ್ಲೇಷಣೆಯು ಪ್ರಪಂಚದ ಎಲ್ಲ ಪ್ರಮುಖ ಸಾಹಿತ್ಯ ಕೃತಿಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ.ನಲವತ್ತೆಂಟು ವರ್ಷ ಕಳೆದರೂ ಪದೇ ಪದೇ ಮರುಮುದ್ರಣ ಕಾಣುತ್ತಾ ಸಾಗಿರುವ ಈ ಕೃತಿಯ ಸಶಕ್ತ ಸನ್ನಿವೇಶ, ಜೀವಂತ ಪಾತ್ರಚಿತ್ರಣ ಮೊದಲಾದ ಗುಣಗಳಿಂದ ನಮ್ಮನ್ನು ನೆನಪಿನಲ್ಲಿ ಮುಳುಗಿಸುತ್ತದೆ...

Add to Cart
ಧರ್ಮಶ್ರೀ - Dharmashree(S L Bhyrappa)
₹285 Ex Tax: ₹285

ಹಿಂದೂಸ್ಥಾನಕ್ಕೆ ಹೊರಗಿನಿಂದ ಅಲೆಯಲೆಯಾಗಿ ಬಂದ ಜನಕ್ಕೆ ಲೆಕ್ಕವಿಲ್ಲವಾದರೂ ಅವರಲ್ಲಿ ಬಹುಭಾಗ ಜನರು ಸಾಂಸ್ಕೃತಿಕವಾಗಿ ಇಲ್ಲಿಯವರೇ ಆದರು. ರಾಷ್ಟ್ರಕ್ಕೆ ಹೊರಗಿನಿಂದ ಬಂದ ಮತಪ್ರಚಾರಕರು ಮಾತ್ರ ಇಲ್ಲಿಯ ಸಂಸ್ಕೃತಿಗೆ ತದ್ವಿರುದ್ಧವಾದ ಬೇರೊಂದು ಸಂಸ್ಕೃತಿಯನ್ನು ಬಿತ್ತಲು ಪ್ರಯತ್ನಿಸಿದರು. ಮತಾಂತರವು ಕೆಲವು ವ್ಯಕ್ತಿಗಳ ಜೀವನದಲ್ಲಿ ಕ್ವಚಿತ್ತಾಗಿ ನಡೆಯುವ ಘಟನೆಯಲ್ಲ. ಅದೊಂದು ಸಾಂಸ್ಕೃತಿಕ ಘರ್ಷಣೆ. ಭಾರತೀಯ ಪರಂಪರೆಯಲ್ಲಿ ಧರ್ಮ, ಸಂಸ್ಕೃತಿ, ಎರಡೂ ಅವಿಭಿನ್ನವಾದ ರೂಪಗಳು. ಮತಾಂತರದಿಂದ ಸಂಭವಿಸುವ ಸಾಂಸ್ಕೃತಿಕ ಘರ್ಷಣೆಯ ಸ್ವರೂಪವೆಂತಹುದು ಎಂಬುದೇ ‘ಧರ್ಮಶ್ರೀ’ಯ ವಸ್ತು. ನಾಯಕನ ಜೀವನ ಮತ್ತು ಸಮಸ್ಯೆ , ಎರಡೂ ಒಂದೇ ಆಗಿವೆ...

Add to Cart
ನಾಯಿ-ನೆರಳು - Naayi-Neralu(S L Bhyrappa)
₹180 Ex Tax: ₹180

ದೃಶ್ಯಜಗತ್ತಿನ ಒಂದು ವಾಸ್ತವ ಭಾಗವಾಗಿಯೂ ಕೂಡಾ ಇನ್ನೊಂದು ಮಟ್ಟದಲ್ಲಿ ಬೇರೊಂದು ಜಗತ್ತನ್ನೇ ದರ್ಶಿಸುವಂತೆ ಇಲ್ಲಿ ಮೂಡಿರುವ ಪ್ರತೀಕಗಳು ಅತ್ಯಂತ ಸಫಲವಾಗಿ ಅರ್ಥ ಸ್ಥರಗಳ ಒಂದು ಸೌಧವನ್ನು ನಿರ್ಮಿಸುತ್ತವೆ. ವಾಸ್ತವ ಶೈಲಿಯ ನಿರ್ದಿಷ್ಠತೆಯಿಂದಲೇ ಪುರಾಣಕ್ಕೆ ಸಾಧ್ಯವಾಗದ ಅತೀತತೆಯನ್ನು ಆಧುನಿಕ ಯುಗದ ಲೇಖಕರು ಮುಟ್ಟಬಹುದೆಂಬುದನ್ನು ಭೈರಪ್ಪನವರು ಈ ಕೃತಿಯಲ್ಲಿ ಸಾಧಿಸಿ ತೋರಿಸಿದ್ದಾರೆ...

Add to Cart
ನಿರಾಕರಣ - Nirakarana(S L Bhyrappa)
₹185 Ex Tax: ₹185

ಐದು ಪುಟ್ಟ ಮಕ್ಕಳನ್ನು ಸಾಕಲು ಮನೆಯಲ್ಲಿ ಹೆಣ್ಣು ದಿಕ್ಕಿಲ್ಲದ ತಂದೆಯು, ಅವರನ್ನೆಲ್ಲ ದತ್ತು ಕೊಡುವುದಾಗಿ ಮುಂಬೈಯ ಟೈಮ್ಸ್ ಪತ್ರಿಕೆಯಲ್ಲಿ ಜಾಹೀರಾತು ಮಾಡುತ್ತಾನೆ.‘ಬಂಧನಕ್ಕೆ ಮಿತಿ ಎಂಬುದು ಸುಳ್ಳು. ಅಂಟಿದರೆ ಪೂರ್ತಿಯಾಗಿಯೂ ಸೆಳೆದುಬಿಡುತ್ತದೆ – ವಿದ್ಯುತ್ ಶಾಕ್ ನಂತೆ. ಇಲ್ಲ, ಸ್ಪರ್ಶಕ್ಕೆ ಸಿಕ್ಕದಷ್ಟು ದೂರವೇ ಇರಬೇಕು. ಇದಕ್ಕೆ ಮಧ್ಯಮ ಸ್ಥಿತಿ ಇಲ್ಲ’ ಎಂಬ ಗ್ರಹಿಕೆಯಿಂದ ಅವನು ನಿರ್ಧರಿಸುತ್ತಾನೆ.‘ನೀರು ಹರಿಯದಿದ್ದಾಗಲೂ ಅದನ್ನು ನದಿ ಅನ್ನಬಹುದೇ?’‘ಇಲ್ಲ. ಅದು ಬರೀ ರೂಢಿಯ ಸಂಕೇತ. ಹರಿದರೆ ಮಾತ್ರ ಕಾಲ, ಹೆಪ್ಪುಗಟ್ಟಿದರೆ ಅಲ್ಲ… ಉಷ್ಣ ಚಂಚಲ, ಶೀತ ಅಚಲ.’ಹೆಪ್ಪುಗಟ್ಟಲೇಬೇಕೆಂದು ಬಯಲನ್ನು ನಿರಾಕರಿಸಿ ಬೆಟ್ಟವನ್ನು ಏರುತ್ತಾನೆ.ಕನ್ನಡ ಕಾದಂಬರೀ ಪ್ರಪಂಚದಲ್ಲಿ ಒಂದು ವಿನೂತನ ಕೃತಿ...

Add to Cart
ನೆಲೆ - Nele(S L Bhyrappa)
₹180 Ex Tax: ₹180

ನೂರ ಎಂಬತ್ತೇಳು ಪುಟಗಳ ಸಂಕ್ಷಿಪ್ತತೆಯಲ್ಲಿ ‘ನೆಲೆ ‘ ಕಾದಂಬರಿಯು ಅರಗಿಸಿಕೊಂಡಿರುವ ಘಟನೆ  ಶೋಧನೆ ಚಿಂತನೆಗಳ ಆಳವಿಸ್ತಾರಗಳು ಅದ್ಭುತವಾಗಿವೆ. ನಿರುದ್ವೇಗದಿಂದ ವಸ್ತುವನ್ನು,ಆ ಮೂಲಕ ಜೀವನವನ್ನು ಇಲ್ಲಿ ನೋಡಿರುವ ರೀತಿಯು ಮಾಗಿ ಪಕ್ವವಾದ ದೊಡ್ಡ ಕಲಾವಿದನಿಗೆ ಮಾತ್ರ ಸಾಧ್ಯವಾಗುವಂಥದು.ಮೃತ್ಯುವಿನ ಅಂಚಿಗೆ ಪ್ರಜ್ಞೆಯು ತಲುಪಿದಾಗ ಮಾತ್ರ ಜೀವನದ ನಿಜವಾದ ಮಾಪನವು ಸಾಧ್ಯವೆಂಬ ಮೂಲಭೂತ  ಮಾತನ್ನು ಈ  ಕೃತಿಯು  ಸಾಕಾರಗೊಳಿಸಿಕೊಂಡಿದೆ...

Add to Cart
ಪರ್ವ - Parva(S Bhyrappa) - Hardcover
₹900 Ex Tax: ₹900

ವ್ಯಾಸ ಮಹರ್ಷಿಗಳ ‘ಮಹಾಭಾರತ’ವನ್ನು ಆಧಾರವಾಗಿಟ್ಟುಕೊಂಡು  ರಚಿತವಾಗಿರುವ ಕಾದಂಬರಿ ‘ಪರ್ವ’. ಇದೊಂದು ಮರುಸೃಷ್ಟಿ. ಕಾವ್ಯ ಇತಿಹಾಸ ಪುರಾಣಗಳ ಮಿಶ್ರಣವಾದ ಪ್ರಾಚೀನ ಮಹಾಕೃತಿಯೊಂದನ್ನು ಆಧುನಿಕ ಸಾಹಿತ್ಯಪ್ರಕಾರವಾದ ಕಾದಂಬರಿಯನ್ನಾಗಿ ನಿರ್ಮಿಸುವ ಪ್ರಕ್ರಿಯೆಯಲ್ಲಿ, ಶ್ರೇಷ್ಠ ಕಾದಂಬರಿಕಾರರೊಬ್ಬರ ಪಕ್ವವಾದ ಮನಸ್ಸು ಕಾಲ ದೇಶಗಳನ್ನು ದಾಟಿ ಹೇಗೆ ಕೆಲಸ ಮಾಡಿದೆ ಎಂಬುದನ್ನು ಇಲ್ಲಿ ನೋಡಬಹುದು. ಸೃಜನಶೀಲ ಪ್ರತಿಭೆಯ ಸಾಹಸ ಈ ಬೃಹತ್ಕಾದಂಬರಿಯ ಪುಟಪುಟಗಳಲ್ಲಿ  ಸ್ಫುಟಗೊಂಡಿದೆ. ಮೂಲಕೃತಿಯ ಅಲೌಕಿಕ ಅಂಶಗಳಿಂದ ಪಾರಾಗಿ, ಸಾಮಾನ್ಯರನ್ನೂ ಅಸಾಮಾನ್ಯರನ್ನೂ ಒಂದೇ ದೃಷ್ಟಿಯಿಂದ ನೋಡಿ, ಆದರ್ಶ ವಾಸ್ತವತೆಗಳನ್ನು ಮೇಳವಿಸಿ, ಯಾವುದೋ ಕಾಲದ ವ್ಯಕ್ತಿ ಸಂಗತಿಗಳು ನಮ್ಮ ಕಾಲದವಾಗಿ, ನಮಗೆ ತೀರ ಹತ್ತಿರದವಾಗಿ ಮಾರ್ಪಡುವ ಕಲಾಕೌಶಲವನ್ನು ಈ ಕಾದಂಬರಿ ತೋರಿಸುತ್ತದೆ. ಕಾದಂಬರಿಕಾರರಿಗಿರುವ ಮಾನವಸ್ವಭಾವದ ನಿಕಟ  ಪರಿಚಯ, ಈ ಪರಿಚಯವನ್ನು ತೋರುವಲ್ಲಿ ಅವರು ಮೆರೆಯುವ ಸಂಯಮ ಹಾಗೂ ಅಲಿಪ್ತತೆಗಳು ವ್ಯಾಸಗುಣಗಳೇ ಆಗಿವೆ. ಫಲವಾಗಿ ‘ಪರ್ವ’ ನಮ್ಮ ಕಾಲದ ಒಂದು ಶ್ರೇಷ್ಠ ಕಲಾಕೃತಿಯಾಗಿದೆ...

Add to Cart
ಪರ್ವ - Parva(S Bhyrappa) - Paperback
₹730 Ex Tax: ₹730

ಭಿತ್ತಿ - Bhitti(S L Bhyrappa)
₹610 Ex Tax: ₹610

ಕಲಾವಿದನ ಜೀವನಭಿತ್ತಿ ಮತ್ತು ಅವನ ಸೃಷ್ಟಿಗಳ ಪರಸ್ಪರ ಸಂಬಂಧವು ರಹಸ್ಯಪೂರ್ಣವಾದುದು. ಜೀವನದ ಪರಿಮಿತಿಗಳನ್ನು ದಾಟಿ ಕೌತುಕಮಯ ವಲಯಕ್ಕೆ ಬೆಳೆಯದೆ ಕಲೆಯ ಆವಿರ್ಭವವಾಗುವುದಿಲ್ಲ. ಚಿತ್ರವು ಮೂಡಿದ ನಂತರ ಭಿತ್ತಿಯು ಇಲ್ಲದೆ ಆಗಿಬಿಡುತ್ತದೆ. ಕಲಾಕೃತಿಯನ್ನು ಅರಿಯಲು ವಾಸ್ತವಾವಾಗಿ ಜೀವನಚರಿತ್ರೆಯ ಅಗತ್ಯವಿಲ್ಲ. ಈ ನೆರವು ಆ ಅರಿವಿಗೆ ಬಾಧಕವೂ ಆಗಬಹುದು.ಆದರೆ ಕೃತಿಗಳನ್ನು ಓದಿ ಲೇಖಕನ ಜೀವನದ ಘಟನೆಗಳನ್ನು ಅನ್ಯರು ತಮ್ಮ ತಮ್ಮ ಇಚ್ಛೆಯಂತೆ ಕಲ್ಪಿಸಿಕೊಳ್ಳುವುದನ್ನು ತಪ್ಪಿಸಲೆಂದು ಕೆಲವು ಸ್ನೇಹಿತರು ಒತ್ತಾಯಿಸಿದ್ದರ ಫಲವಾಗಿ ಈ ಆತ್ಮವೃತ್ತಾಂತ ಮೂಡಿಬಂದಿದೆ. ಈ ಬರಹದ ನಂತರ ಭೈರಪ್ಪನವರು ಹೊಸತೊಂದು ಕಾದಂಬರಿಯನ್ನು ಬರೆದಿರುವುದು, ಆತ್ಮಚರಿತ್ರೆಯನ್ನು ಬರೆದರೆ ಅನುಭವದ ಬೀಜಗಳು ಹೊರಬಿದ್ದು ಸೃಜನಶೀಲತೆಯು ನಿಂತುಹೋಗಬಹುದೆಂಬ ಶಂಕೆಗೆ ಆಧಾರವಿಲ್ಲವೆಂಬುದನ್ನು ತೋರಿಸುತ್ತದೆ. ಸಾಹಿತಿಯ ಜೀವನದಲ್ಲಿ ಗುರುತಿಸಬಹುದಾದ ಅಂಶಗಳ ಹಂಗಿಲ್ಲದೆಯೂ ಸಾಹಿತ್ಯವು ಸೃಷ್ಟಿಯಾಗುತ್ತದೆ. ಅಂಥದನ್ನು ಸೃಷ್ಟಿಸುವುದೇ ಪ್ರತಿಭೆಯ ಗುರುತು...

Add to Cart
ಭೀಮಕಾಯ - Bheemakaaya(S L Bhyrappa)
₹185 Ex Tax: ₹185

ಕುಸ್ತಿಪಟುಗಳ  ಬದುಕು  ರೋಮಾಂಚಕಾರಿಯಾದಷ್ಟೇ  ಗುಂಡಾಂತರಪೂರ್ವವೂ  ಅಗಿದೆ. ಕುಸ್ತಿಪಟುವಿಗೆ ದೊರೆಯುವ ಮಾನಸಮ್ಮಾನದ  ಹಿಂದೆ ಎಂತಹ ಸಂಯಮ ಬೇಕು ಎನ್ನುವುದು ಯಾರೂ ಆರಿಯರು. ಕುಸ್ತಿಕಣದ ನಿಕಟ  ಸಂಪರ್ಕವಿರಿಸಿಕೊಂಡ  ಈ ಕಾದಂಬರಿಕಾರರು ಕುಸ್ತಿಪಟುಗಳ  ಜೀವನವನ್ನು  ಸೌಹಾರ್ದತೆಯಿಂದ  ಕಂಡುದೇ  ಈ ಕಾದಂಬರಿಯಲ್ಲಿ ವಾಸ್ತವಿಕವಾಗಿದೆ; ಕಲಾತ್ವಕವಾಗಿದೆ...

Add to Cart
ಮಂದ್ರ - Mandra(S L Bhyrappa) - ದಪ್ಪ(Hardback)
₹790 Ex Tax: ₹790

ಎಷ್ಟೋ  ಹೊತ್ತಿನ  ನಂತರ  ಭೋಸ್ಲೆಯ  ಧ್ವನಿ: ‘ಕಲೆಯನ್ನ  ನೋಡಿದಾಗ  ಸ್ವರ್ಗಪ್ರವೇಶ  ಮಾಡಿದ  ಹಾಗಾಗುತ್ತೆ. ಕಲಾವಿದನ  ಒಳ ಹೊಕ್ಕಾಗ  ಬೇರೆಯೇ  ಇರುತ್ತೆ ಯಾಕೆ ಈ  ಕಾಂಟ್ರಡಿಕ್ಷನ್ ?’..

Add to Cart
ಮಂದ್ರ - Mandra(S L Bhyrappa) - ಸಾದ(Paperback)
₹815 Ex Tax: ₹815

ಎಷ್ಟೋ  ಹೊತ್ತಿನ  ನಂತರ  ಭೋಸ್ಲೆಯ  ಧ್ವನಿ: ‘ಕಲೆಯನ್ನ  ನೋಡಿದಾಗ  ಸ್ವರ್ಗಪ್ರವೇಶ  ಮಾಡಿದ  ಹಾಗಾಗುತ್ತೆ. ಕಲಾವಿದನ  ಒಳ ಹೊಕ್ಕಾಗ  ಬೇರೆಯೇ  ಇರುತ್ತೆ ಯಾಕೆ ಈ  ಕಾಂಟ್ರಡಿಕ್ಷನ್ ?’..

Add to Cart
ಮತದಾನ - Matadana(S L Bhyrappa)
₹195 Ex Tax: ₹195

ಎಮ್.ಬಿ.ಬಿ.ಎಸ್. ಮಾಡಿದ ಒಬ್ಬ ತರುಣ ತನ್ನ ಹಳ್ಳಿಯಲ್ಲಿ ಗಾಂಧಿಯ ಮಾರ್ಗದಲ್ಲಿ ಸೇವೆ ಮಾಡತೊಡಗಿ ಜನಾದರಣೆ ಗಳಿಸುತ್ತಾನೆ. ಅವನ ಜನಾದರಣೆಯನ್ನು ಬಳಸಿಕೊಳ್ಳುವ ತಂತ್ರಹೂಡಿ ಆಳುವ ಪಕ್ಷವು ಇನ್ನೂ ಹೆಚ್ಚು ಸೇವೆ ಮಾಡುವ ಅವಕಾಶಗಳು ದೊರೆಯುತ್ತವೆಂಬ ಆಮಿಷ ಹೂಡಿ ಅವನನ್ನು ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸುತ್ತದೆ. ಚುನಾವಣಾ ಓಡಾಟದಲ್ಲಿ ತೊಡಗಿದ ಅವನು ಒಬ್ಬ ರೋಗಿಗೆ ಗಮನಕೊಡದೆ ಆ ರೋಗಿ ಸಾಯುತ್ತಾನೆ. ವ್ಯೆದ್ಯನು ಚುನಾವಣೆಯಲ್ಲಿ ಸೋಲುತ್ತಾನೆ. ಮಂತ್ರಿಗಳ ಚುನಾವಣಾ ಫಂಡಿಗೆ ತನ್ನ ಆದಾಯದಮಿತಿಮೀರಿ ಸಾಲಮಾಡಿ ಹಣ ಒದಗಿಸಿದ ಒಬ್ಬ ಕಿರು ಕಂಟ್ರಾಕ್ಟರು ಕೊನೆಗೆ ತಾನು ನಿರೀಕ್ಷಿಸಿದ ಕಂಟ್ರಾಕ್ಟು ಸಿಕ್ಕದೆ ಸಾಲ ತೀರಿಸಲಾರದೆ ದೊಡ್ಡಕೆರೆಯ ತೂಬಿಗೆ ಕಲ್ಲು ಕಟ್ಟಿಕೊಂಡು ಮುಳುಗಿ ಸಾಯುತ್ತಾನೆ...

Add to Cart
ಯಾನ - Yaana(S L Bhyrappa)
₹230 Ex Tax: ₹230

೧೫೦ ಅಡಿ ಅಗಲ, ೩೦೦ ಅಡಿ ಉದ್ದದ ಆಕಾಶ ನೌಕೆಯನ್ನು ಕಟ್ಟಿ ಅದರಲ್ಲಿ ಒಬ್ಬ ಗಂಡು, ಒಬ್ಬಳು ಹೆಣ್ಣನ್ನು ಕೂರಿಸಿ ೪.೬ ಜ್ಯೋತಿರ್ವರ್ಷ ದೂರದಲ್ಲಿರುವ ಪ್ರಾಕ್ಸಿಮಾ ಸೆಂಟಾರಿಸ್ ನಕ್ಷತ್ರಮಂಡಲವನ್ನು ತಲುಪುವ ಯೋಜನೆಗೆ ಕಳಿಸುತ್ತಾರೆ. ಸೂರ್ಯಮಂಡಲದಲ್ಲಿ ಸೃಷ್ಟಿಸಿಕೊಂಡ ನೈತಿಕ ನಿಯಮಗಳು ಸೂರ್ಯನ ಗುರುತ್ವಾಕರ್ಷಣೆಯ ವಲಯದ ಆಚೆಗೆ ಹೋದಮೇಲೂ ಸಿಂಧುವಾಗುತ್ತವೆಯೆ ? ಎಂಬಂಥ ಪ್ರಶ್ನೆಗಳನ್ನು ಈ ಪಾತ್ರಗಳು ಎದುರಿಸಬೇಕಾಗುತ್ತದೆ.ಭೈರಪ್ಪನವರ ಪಾತ್ರಶೋಧನೆಯು ಇದುವರೆಗೆ ವಿಸ್ತರಿಸಿಕೊಂಡಿರದ ವ್ಯಾಪ್ತಿಗೆ ‘ಯಾನ’ದಲ್ಲಿ ಬೆಳೆದಿದೆ. ಕನ್ನಡ ಸಾಹಿತ್ಯದಲ್ಲಿ ಇಲ್ಲಿಯತನಕ ಕಾಣದ ವಸ್ತುವು ಈ ಕಾದಂಬರಿಯಲ್ಲಿ ಜೀವಂತವಾಗಿ ಮೂಡಿಬಂದಿದೆ.ಪ್ರಕಾಶಕರು – ಸಾಹಿತ್ಯ ಭಂಡಾರ..

Add to Cart
ವಂಶವೃಕ್ಷ - Vamshavruksha(S L Bhyrappa) - Hard Bound
₹460 Ex Tax: ₹460

ಬದುಕಿನ ಸೂಕ್ಷ್ಮ, ಸಂಕೀರ್ಣ ನೆಲೆಗಳ ಆಳಕ್ಕಿಳಿದು ಪ್ರಖರವಾದ ವೈಚಾರಿಕ, ತಾತ್ತ್ವಿಕ, ಮಾನವೀಯ ಅಂಶಗಳನ್ನು ಸಂವೇದನಾಶೀಲತೆಯಿಂದ ಶೋಧಿಸುವ ಕಾದಂಬರಿ ‘ವಂಶವೃಕ್ಷ’. ಹಿಂದಿ, ಮರಾಠಿ, ಗುಜರಾತಿ, ತೆಲುಗು, ಉರ್ದು, ಇಂಗ್ಲಿಷ್ ಮೊದಲಾಗಿ ಹಲವು ಭಾಷೆಗಳಿಗೆ ಅನುವಾದಿತವಾಗಿ ಭಾರತದ ಶ್ರೇಷ್ಠ ಕಾದಂಬರಿಗಳಲ್ಲೊಂದು ಎಂಬ ಮನ್ನಣೆಯನ್ನು ಗಳಿಸಿಕೊಂಡಿದೆ.ಬದುಕಿನ ಬೇರುಗಳನ್ನು ಶೋಧಿಸುವ ಈ ಸಾಹಿತ್ಯಕೃತಿಯನ್ನು ಓದುವುದೇ ಒಂದು ವಿಶಿಷ್ಟ ಅನುಭವ...

Add to Cart
ವಂಶವೃಕ್ಷ - Vamshavruksha(S L Bhyrappa) - Paperback
₹445 Ex Tax: ₹445

ಬದುಕಿನ ಸೂಕ್ಷ್ಮ, ಸಂಕೀರ್ಣ ನೆಲೆಗಳ ಆಳಕ್ಕಿಳಿದು ಪ್ರಖರವಾದ ವೈಚಾರಿಕ, ತಾತ್ತ್ವಿಕ, ಮಾನವೀಯ ಅಂಶಗಳನ್ನು ಸಂವೇದನಾಶೀಲತೆಯಿಂದ ಶೋಧಿಸುವ ಕಾದಂಬರಿ ‘ವಂಶವೃಕ್ಷ’. ಹಿಂದಿ, ಮರಾಠಿ, ಗುಜರಾತಿ, ತೆಲುಗು, ಉರ್ದು, ಇಂಗ್ಲಿಷ್ ಮೊದಲಾಗಿ ಹಲವು ಭಾಷೆಗಳಿಗೆ ಅನುವಾದಿತವಾಗಿ ಭಾರತದ ಶ್ರೇಷ್ಠ ಕಾದಂಬರಿಗಳಲ್ಲೊಂದು ಎಂಬ ಮನ್ನಣೆಯನ್ನು ಗಳಿಸಿಕೊಂಡಿದೆ.ಬದುಕಿನ ಬೇರುಗಳನ್ನು ಶೋಧಿಸುವ ಈ ಸಾಹಿತ್ಯಕೃತಿಯನ್ನು ಓದುವುದೇ ಒಂದು ವಿಶಿಷ್ಟ ಅನುಭವ...

Add to Cart
ಸಂದರ್ಭ : ಸಂವಾದ - Sandarbha : Samvaada(S L Bhyrappa)
₹240 Ex Tax: ₹240

ಭೈರಪ್ಪನವರು ಆಡಿದ ಮಾತು, ಬರೆದ ಲೇಖನಗಳ ಸಂಗ್ರಹ ..

Add to Cart
ಸಾಕ್ಷಿ - Sakshi(S L Bhyrappa)
₹305 Ex Tax: ₹305

‘ಸಾಕ್ಷಿ’ಯು ಪುರಾಣ ಮತ್ತು ನಮ್ಮ ಈ ಇಂದ್ರಿಯ ವಾಸ್ತವ ಜಗತ್ತುಗಳನ್ನು ಜೋಡಿಸುವ ಮೂಲಕ ಮನುಷ್ಯನ ನೀತಿಯ ಬೇರುಗಳನ್ನು ಶೋಧಿಸುತ್ತದೆ. ನಿಜವೂ ನೀತಿಯ ನೆಲೆಯೋ, ನೀತಿಯು ನಿಜದ ನೆಲೆಯೋ ಎಂಬಂತಹ ಮೂಲಭೂತ ಪ್ರಶ್ನೆಗಳನ್ನು ಅರಗಿಸಿಕೊಂಡಿರುವ ಈ ಕಾದಂಬರಿಯ ಪಾತ್ರ ವೈಶಿಷ್ಟ್ಯ ರಚನಾ ವಿಧಾನ ಹಾಗು ಕಲಾತ್ಮಕ ಅನುಭವಗಳು ಭೈರಪ್ಪನವರ ಹಿಂದಿನ ಕಾದಂಬರಿಗಳಿಗಿಂತ ಮೂರು ಮೆಟ್ಟಿಲು ಮೇಲೆ ಹೋಗಿವೆ...

Add to Cart
ಸಾಕ್ಷಿ - ಪರ್ವ - Sakshi - Parva(S L Bhyrappa)
₹135 Ex Tax: ₹135

ಪ್ರಕಾಶಕರು : ಸಾಹಿತ್ಯ ಭಂಡಾರ ..

Add to Cart
ಸಾರ್ಥ - Saartha(S L Bhyrappa) - ದಪ್ಪ(Hardback)
₹375 Ex Tax: ₹375

ಸಾರ್ಥದ  ಮರ್ಮವನ್ನು  ತಿಳಿಯಲು ಮನೆ ಮಾರು ಬಿಟ್ಟುಹೋದ  ನಾಗಭಟ್ಟನು ತನ್ನ ಗುರಿಯಿಲ್ಲದ  ಸಂಚಾರಿಪರಿಕ್ರಮದಲ್ಲಿ ಜನಪದದ ಜೀವನಾಡಿಯಂತಿದ್ದ  ಹತ್ತಾರು ಧಾರ್ಮಿಕ, ಸಾಮಾಜಿಕ  ಮತ್ತು ಸಾಂಸ್ಕೃತಿಕ ಪ್ರವೃತ್ತಿಗಳ  ಪ್ರಭಾವಕ್ಕೊಳಗಾಗಿ  ಆಚ್ಚರಿಯ  ಜೀವನದರ್ಶನಕ್ಕೆ  ಸಾಕ್ಷಿಯಾಗುತ್ತಾನೆ .‘ಸಾರ್ಥ’ ಕ್ರಿ .ಶ. ಎಂಟನೆಯ  ಶತಮಾನದ  ಭರತಖಂಡದಲ್ಲಿ ನಡೆಯಿತೆಂದು  ಕಲ್ಪಿಸಿಕೊಳ್ಳಬೇಕಾದ  ಸಂಗತಿಗಳನ್ನಾಧರಿಸಿದ  ಕಾದಂಬರಿ. ಆನೆ  ಕುದುರೆ ಹೇಸರಗತ್ತೆ   ನೂರಾರು  ಗಾಡಿಗಳ ಮೇಲೆ ವಾಣಿಜ್ಯ  ಪದಾರ್ಥಗಳನ್ನು  ಹೇರಿಕೊಂಡು  ವ್ಯಾಪಾರ  ಮಾಡುತ್ತ  ದೂರ ದೂರ ದೇಶಗಳಲ್ಲಿ  ಸಂಚರಿಸುವುದನ್ನು ಆ ಕಾಲದಲ್ಲಿ  ‘ಸಾರ್ಥ’ ಎನ್ನುತಿದ್ದರು .ಭಾರತದ  ಇತಿಹಾಸದ  ಒಂದು   ಸ್ಥಿತ್ಯಂತರ  ಅವಧಿಯ ಈ ಕಾದಂಬರಿಯಲ್ಲಿ  ಅಪೂರ್ವ ಅನುಭವ ಮತ್ತು ಪಾತ್ರಗಳು ಒಡಮೂಡಿವೆ. ಆಳವೂ  ವಿಸ್ತಾರವೂ  ಆದ ಐತಿಹಾಸಿಕ ಅಧ್ಯನಯದ ಅಡಿಪಾಯದ ಮೇಲೆ ಶಕ್ತ  ಸೃಜನಶೀಲತೆಯು ಕೆಲಸಮಾಡಿ ಈ  ವಿಶಿಷ್ಟ  ಕಾದಂಬರಿಯನ್ನು  ನಿರ್ಮಿಸಿದೆ .ಭಾರತವು  ಸತತವಾಗಿ  ಎದುರಿಸುತ್ತಿರುವ  ಧಾರ್ಮಿಕ ಸಂಘರ್ಷಗಳ ತಾತ್ತ್ವಿಕಬೇರುಗಳನ್ನು ‘ಸಾರ್ಥ’ ಸೃಜನಶೀಲವಾಗಿ ಅನ್ವೇಷಿಸುತ್ತದೆ...

Add to Cart
ಸಾರ್ಥ - Saartha(S L Bhyrappa) - ಸಾದ(Paperback)
₹355 Ex Tax: ₹355

Showing 1 to 40 of 40 (1 Pages)