Special Offers
ಪರಸ್ಪರ ವೈರುಧ್ಯಗಳನ್ನೇ ಅದೃಶ್ಯ ತಂತುಗಳಿಂದ ಸಂಯೋಜಿಸುತ್ತಾ ಸಾಗುವ ಈ ಕಾದಂಬರಿಯೊಂದು ವಿಚಿತ್ರ ಮತ್ತು ಅಸಾಧಾರಣ ಕೃತಿ. ಜೀವನದ ವಿರಾಟ್ ಅರ್ಥಹೀನತೆಯ ಪರಿಧಿಯೊಳಗೇ ಅದರ್ ಆರ್ಥಪೂರ್ಣತೆಯನ್ನು ಅನ್ವೇಷಿಸುತ್ತದೆ. ಅಸಂಗತ ಘಟನಾವಳಿಗಳ ಸರಣಿಯನ್ನೇ ಸುಸಂಗತ ಕಥೆಯನ್ನಾಗಿ ನೇಯುತ್ತದೆ. ಚರಿತ್ರೆಯ ಅಪಹಾಸ್ಯವನ್ನು ತಿಳಿಹಾಸ್ಯ ಮತ್ತು ವಿನೋದಗಳಿಂದ ಪ್ರತಿರೋಧಿಸುತ್ತದೆ. ಶತಮಾನದ ಕಥೆಯನ್ನು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಪ್ರತಿಮಿಸುತ್ತದೆ. ಜೀವನವನ್ನು ಎದುರಿಸಲು ಆಶಾವಾದ, ನಿರಾಶಾವಾದ ಇವುಗಳೆಲ್ಲವನ್ನೂ ಮೀರಿದ ಗಂಭೀರ ಎದೆಗಾರಿಕೆಯನ್ನು ಇದು ನಮಗೆ ತೋರಿಸಿಕೊಡುತ್ತದೆ...
Add to Cart‘ನೀವೇ ನನ್ನ ಸೃಷ್ಟಿಕರ್ತರು‘ ಅನುಮಾನವೇ ಇಲ್ಲ. ‘ನೀವಿಲ್ಲದೇ ನಾವಿಲ್ಲ‘ ಅದು ಪೂರ್ತಿ ನಿಜವಲ್ಲ ‘ನನ್ನ ಬದುಕಿಗೆ ನೀವೇ ಹೊಣೆ‘ ನನಗೆ ನಾನೇಇಲ್ಲ ನಿನಗೆ ನೀನೇ. ‘ನನಗೋಸ್ಕರ ತ್ಯಾಗ ಮಾಡಿ‘ ಕೋಡಲಾರದ್ದನ್ನು ಕೇಳಬೇಡಿ. ‘ನಾನು ನಿಮ್ಮನ್ನೇ ನಂಬಿದ್ದೆನಲ್ಲ‘ ತಂದೆತಾಯಿ ದೇವರಲ್ಲ ‘ಪೂಜಿಸಿ ಫಲವಿಲ್ಲವೇ‘ ಪ್ರೀತಿಸುವುದೇ ಸರಿಯಲ್ಲವೇ...
Add to Cartಆ ಕಾಲ-ವ್ಯಾಪಾರಕ್ಕೆಂದು ಬಂದ ಬ್ರಿಟಿಷರು, ಪೋರ್ಚುಗೀಸರು ಭಾರತೀಯ ರಾಜರುಗಳ ಒಳಜಗಳದ ಸುಸಂಧಿಯನ್ನೇ ಸಾಧಿಸಿ ‘ತಮ್ಮ ರೊಟ್ಟಿ ಜಾರಿ ಎಲ್ಲಿ ಬೆಣ್ಣೆಗೆ ಬೀಳುತ್ತದೆ’ ಎಂದು ಕಾಯುತ್ತಿದ್ದ ಕಾಲ. ದಕ್ಷಿಣದಲ್ಲಿ ಪ್ರಬಲರಾದ ಮರಾಠರು, ಹೈದರಾಬಾದಿನ ನಿಜಾಮ, ಮೈಸೂರು ಸಂಸ್ಥಾನದ ಸರ್ವಾಧಿಕಾರಿ ಹೈದರಾಲಿ-ಇವರ ನಿರಂತರ ಹೋರಾಟದ ಏಳು-ಬೀಳುಗಳನ್ನವಲಂಬಿಸಿ ತಮ್ಮ ಅಳಿವು-ಉಳಿವುಗಳನ್ನು ಕರ್ನಾಟಕದ ಎಲ್ಲ ಪಾಳೆಯಗಾರರು ನಿರ್ಧರಿಸುತ್ತಿದ್ದ ಪರ್ವಕಾಲ.ಹೈದರಾಲಿಯ ಬಿರುಗಾಳಿಯ ದಾಳಿಯನ್ನು ಎದುರಿಸಲಾಗದೆ, ತಮ್ಮ ಸರ್ವಸ್ವವನ್ನೂ ಅರ್ಪಿಸಿ ತಮ್ಮ ಪ್ರಾಣರಕ್ಷಣೆ ಮಾಡಿಕೊಳ್ಳುತ್ತಿದ ಪಾಳೆಯಗಾರರಿದ್ದಾಗ ತನ್ನ ಅಪ್ರತಿಮ ಶೌರ್ಯ-ಸಾಹಸಗಳಿಂದ, ಜನತೆಯ ಅಭಿಮಾನಕೋಟೆಯ ರಕ್ಷಾಬಲದಿಮ್ದ ಎಂದೂ ಸೋತು, ಶರಣಾಗದೆ ಸುಮಾರು ಎರಡು ವರ್ಷಗಳ ಕಾಲ ಹೈದರಾಲಿಗೆ ಸವಾಲಾಗಿ ನಿಂತು ಸೆಣಸಿದ ಏಕೈಕ ಗಂಡು ಪಾಳೆಯಗಾರ-ಚಿತ್ರದುರ್ಗದ ಮದಕರಿನಾಯಕ.ಮದಕರಿನಾಯಕನ ದುರಂತ-ಒಂದು ನಾಡಿನ ದುರಂತ; ಆ ಕಥೆಯನ್ನೇ ಹೇಳುವ ಈ ‘ದುರ್ಗಾಸ್ತಮಾನ’-ಆ ಕಾಲದ ಮೌಲ್ಯಗಳ ಅಸ್ತಮಾನವನ್ನೂ ಪರ್ಯಾಯವಾಗಿ ಧ್ವನಿಸುತ್ತದೆ. ಎಂದೋ, ಶತಮಾನಗಳ ಹಿಂದೆ ನಡೆದುಹೋಗಿರಬಹುದಾದ ಇತಿಹಾಸವನ್ನು, ತಮ್ಮ ಪ್ರತಿಭೆಯ ಪರಶುಮಣಿಸ್ಪರ್ಶದಿಂದ ಸುವರ್ಣಾಧ್ಯಾಯವನ್ನಾಗಿಸಿ, ಕಣ್ಣಿಗೆ ಕಟ್ಟುವಂತೆ ಪುನರ್ ಸೃಷ್ಟಿಸಬಲ್ಲ ಕಲ್ಪನಾಶಕ್ತಿ, ಕಲಾಕೌಶಲ ಇರುವುದು-ತ.ರಾ.ಸು. ಒಬ್ಬರಿಗೇ.ಸುಳಿಯಲ್ಲಿ ಸಿಕ್ಕವನಂತೆ ದುರಂತದೆಡೆಗೆ ಸಾಗುವ ಮದಕರಿನಾಯಕನ ಬದುಕಿನ ವಿವಿಧ ಮುಖಗಳು ಬಿಚ್ಚಿಕೊಳ್ಳುವ ಬೃಹತ್‍ವೇಶ್ಮದ ಮೇಲೆ ಎಲ್ಲ ರಸಗಳ ವರ್ಣಗಳನ್ನೂ ಬಳಸಿ ಚಿತ್ರಿಸುವಾಗ ಅರವತ್ತಮೂರರ ತ.ರಾ.ಸು. ಹದಿಹರೆಯದವರನ್ನೂ ನಾಚಿಸುವ ಬಿಸಿನೆತ್ತರ ಕಾವನ್ನು ಕಾರುತ್ತಿರುವಮ್ತೆ, ಪುಟಪುಟಗಳಲ್ಲೂ ತಮ್ಮ ಮಣ್ಣಿನ ಮೇಲಣ ಅಭಿಮಾನವನ್ನು ಅಭಿವ್ಯಕ್ತಿಸಿದಂತೆ ಕಾಣುತ್ತದೆ; ನೆತ್ತರು ಕುದಿಸುವ ತಮ್ಮ ಎಂದಿನ ಸಿಡಿಲಭಾಷೆಯಲ್ಲಿ, ಕಣ್ಣುಕೋರೈಸುವ ಮಿಂಚಿನ ಶೈಲಿಯಲ್ಲಿ, ಆಳ ಅನುಭವ-ಚಿಂತನಗಳ ರಸಪಾದಕಲ್ಲಿ ಈ ಕೃತಿಯನ್ನೊಂದು ರುದ್ರಾಧ್ಯಾಯವನ್ನಾಗಿಸಿದ್ದಾರೆ...
Add to Cartಅಗಾಧ ಪ್ರತಿಭೆ, ನಿರಂತರ ಹುಡುಕಾಟ. ಅಚಲ ಶ್ರದ್ಧೆ, ಅವಿರತ ದುಡಿಮೆ, ಉಕ್ಕುವ ಚಿಲುಮೆಯಂಥ ಹುಮ್ಮಸ್ಸಿನ ಟಿ.ಎನ್. ಸೀತಾರಾಮ್, ತಾವು ನಡೆದು ಬಂದ ಹಾದಿಯ ನೆನಪುಗಳನ್ನು ಬರೆಯುತ್ತಾ ಹೋಗಿದ್ದಾರೆ. ಅವರೇ ಕರೆದಿರುವಂತೆ ಇವು ನೆನಪಿನ ಪುಟಗಳು. ಆದರೆ, ಆ ನೆನಪುಗಳು ನಮ್ಮನ್ನು ಕೂಡ ಅವರ ಕಾಲಕ್ಕೆ ಕರೆದೊಯ್ಯುತ್ತದೆ. ಟೈಮ್ ಮೆಷೀನಿನಲ್ಲಿ ಹಿಂದಕ್ಕೆ ಹೋಗಿ ಕಾಲಾತೀತರಾಗಿ ಅವರು ಕಂಡದ್ದನ್ನು ನಾವೂ ಕಾಣುತ್ತಾ ಹೋಗುತ್ತೇವೆ. ಹೇಳುವುದಕ್ಕಿಂತ ತೋರಿಸುವುದರಲ್ಲಿ ಸೀತಾರಾಮ್ ಅವರಿಗೆ ಆಸಕ್ತಿ.ಈ ನೆನಪಿನ ಪುಟಗಳಿಗೆ ಹಲವು ಬಣ್ಣ. ವಿಷಾದ ಮೆತ್ತಿದ ಹಲವು ಪುಟಗಳು, ತಮಾಷೆ ಲೇಪಿಸಿದ ಅನೇಕ ಪುಟಗಳು, ಬದುಕನ್ನು ಅವಡುಗಚ್ಚಿ ದಿಟ್ಟತನದಿಂದ ಎದುರಿಸಿದ ಪುಟಗಳು, ಪ್ರಯೋಗಶೀಲತೆಯ ಪುಟಗಳು, ಹುಡುಕಾಟದ ಸಾಲುಗಳು, ಅಂತರಂಗದ ಪಿಸುಮಾತು, ಲೋಕಾಂತದ ಹೊಸಿಲಿಗೆ ಹಚ್ಚಿದ ಕಿರುದೀಪ-ಎಲ್ಲವನ್ನು ಟಿಎನ್ನೆಸ್ ಸಂತನ ನಿರುಮ್ಮಳ ಧಾಟಿಯಲ್ಲಿ ನಮ್ಮ ಮುಂದಿಟ್ಟಿದ್ದಾರೆ.ಟಿಎನ್ನೆಸ್ ಅವರ ಐದು ದಶಕಗಳ ಜೀವನ ಚಿತ್ರಗಳಲ್ಲಿ ನೂರಾರು ಜೀವಗಳ ಕತೆಯಿದೆ, ಇಲ್ಲಿ ನಮಗೆ ಬಹುಮುಖಿ ಟಿಎನ್ನೆಸ್ ಸಿಗುತ್ತಾರೆ. ಕೃಷಿಕ, ವಕೀಲ, ಉದ್ಯಮಿ, ನಾಟಕಕಾರ, ನಟ, ನಿರ್ದೇಶಕ, ಸಾಹಿತಿಯಾಗಿ ಅವರನ್ನು ಬಲ್ಲವರಿಗೆ ಮಗ, ತಮ್ಮ, ಅಣ್ಣ, ತಂದೆ, ಗಂಡ, ಗೆಳೆಯ ಟಿಎನ್ನೆಸ್ ಕೂಡ ಎದುರಾಗುತ್ತಾರೆ.ಇದು ಟಿಎನ್ನೆಸ್ ಒಬ್ಬರ ನೆನಪಿನ ಪುಟಗಳಲ್ಲ, ಒಂದು ಕಾಲಾವಧಿಯ ಜ್ಞಾಪಕ ಚಿತ್ರಶಾಲೆ. ಇದನ್ನು ಓದುತ್ತಾ ನಾನು ಬೆರಗಾಗಿದ್ದೇನೆ, ಮೌನವಾಗಿದ್ದೇನೆ. ತಲ್ಲಣಿಸಿದ್ದೇನೆ, ನಕ್ಕು ಹಗುರಾಗಿದ್ದೇನೆ. ವಿಷಾದದಿಂದ ತೊಯ್ದು ಹೋಗಿದ್ದೇನೆ. ತನ್ನ ಕತೆಯನ್ನು ಮತ್ತೊಬ್ಬರ ಅನುಭವ ಆಗಿಸಲಿಕ್ಕೆ ಪ್ರಾಮಾಣಿಕತೆ ಇದ್ದರೆ ಸಾಕು. ಅದು ಈ ಪುಟಗಳಲ್ಲಿ ದಟ್ಟವಾಗಿದೆ.-ಜೋಗಿ..
Add to Cart.... ನಮ್ಮ ಕನಸುಗಳಿಗೆ ಎಂಥಾ ಅದ್ಭುತ ಶಕ್ತಿ ಇದೆ ! ಕನಸು ಕಾಣಬೇಕಷ್ಟೆ, ಹಾರಲು ರೆಕ್ಕೆಗಳು ಮೊಳೆಯುತ್ತವೆ. ಆರಂಭವಷ್ಟೆ ಕಷ್ಟ, ಮೊದಲ ಹೆಜ್ಜೆ ಇಟ್ಟಂತೆ ಹಾದಿ ಸುಗಮ....ಹೀಗೆ, ಪೆರು ಕಣಿವೆಗೆಂದು ಹೊರಟು, ಪರವಾನಗಿ ಇಲ್ಲದಿದ್ದರೂ ಅಕ್ಕಪಕ್ಕದ ದೇಶಗಳಲ್ಲೂ ಸುಳಿದಾಡಿ, ಪ್ರವಾಸ ಹೋದಾಗ ಎದುರಾಗುವ ಭಾಷೆಯ ಸಮಸ್ಯೆಯನ್ನು ತಮ್ಮದೇ ಕೈ ಬಾಯಿ ಸನ್ನೆಗಳ ಮೂಲಕ ನಿಭಾಯಿಸಿಕೊಂಡು, ಅದೇ ರೀತಿ ಆಹಾರದ ಪ್ರಶ್ನೆಯನ್ನು ಬಗೆಹರಿಸಿಕೊಂಡು, ಹೋದ ಕಡೆ ನಮ್ಮ ಊರಿನದೇ ಪರಿಸ್ಥಿತಿಯನ್ನು, ನಮ್ಮ ಜನರಂತೆಯೇ ಆದರಿಸುವ, ಪ್ರೀತಿಸುವ, ಸ್ನೇಹಭಾವ ತೋರಿಸುವ ಜನರನ್ನು ಭೇಟಿ ಮಾಡಿದ ಅನುಭವಗಳನ್ನು ಲೇಖಕಿ ಇಲ್ಲಿ ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ. ಕನಸುಗಾರ್ತಿ ಗೆಳತಿಯ ಜೊತೆಗೂಡಿ ಬೆಟ್ಟವೇರಿ, ಕಣಿವೆ ಇಳಿದು, ಅಮೆಜಾನ್ ನದಿಯಲ್ಲಿ ರಾತ್ರಿ ದೋಣಿ ಪಯಣ ಮಾಡಿದ ರೋಮಾಂಚಕ ಸನ್ನಿವೇಶಗಳನ್ನು, ಮಹಿಳೆಯರ ಅಪೂರ್ವ ಸಾಧನೆಯನ್ನು ದಾಖಲಿಸುವ ಕೃತಿ. ಪುಸ್ತಕ ಓದಿಯೇ ಇದನ್ನು ತಿಳಿಯಬೇಕು...
Add to Cartಪ್ರಕಾಶಕರು ಗೋಮಿನಿ ಪ್ರಕಾಶನ ಮರೆತು ಹೋದ ಮೈಸೂರಿನ ಪುಟಗಳು - ಪುಸ್ತಕ ವಿಮರ್ಶೆ..
Add to Cartರಾಮಾಯಣವೆಂದರೆ ಸ್ಫೂರ್ತಿಯ ದೇವಗಂಗೆ, ಪ್ರೇರಣೆಯ ಕಾಮಧೇನು, ಆಪ್ತ ಸಲಹೆಯ ಕಲ್ಪವೃಕ್ಷ. ಅಲ್ಲಿ ಎಲ್ಲಿ ಮುಟ್ಟಿದರೂ ಬದುಕಿನ ಬುತ್ತಿ ಲಭ್ಯ. ಸಹಸ್ರಸಹಸ್ರ ಸಂವತ್ಸರಗಳಿಂದ ಅದು ಮನುಷ್ಯಜೀವನವನ್ನು ಪ್ರಭಾವಿಸಿದ್ದು ಇದೇ ಕಾರಣಕ್ಕೆ. * * * ಬಾಲ್ಯವೆಂದರೆ ಬದುಕಿನ ಬುನಾದಿ. ಬಾಲ್ಯವೆಂಬ ಬೇರಿನ ಮೇಲೆಯೇ ಬದುಕಿನ ವೃಕ್ಷದ ಅಸ್ತಿತ್ವ. ರಾಮಾಯಣದ ಬಾಲ್ಯ-ರಾಮನ ಬಾಲ್ಯ ಎರಡೂ ಆಗಿರುವ ಬಾಲಕಾಂಡ, ನಮ್ಮ ಬದುಕಿನ ಬೇರಿಗೆ ಎರೆಯುವ ನೀರು ಜೀವದ್ರಸ. * * * ಇಲ್ಲಿದೆ ಆ ಅಮೃತದ ಕೆಲವು ಹನಿಗಳು. ಅಮೃತದ ಹನಿಯೂ ಸಾಕು ಬದುಕಿನ ವಿಷ ಕಳೆಯಲು...
Add to Cartಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...
Add to Cartಹಿಮವಂತ ಮತ್ತು ಪ್ರಾರ್ಥನಾರ ಪ್ರೇಮ ಕಥೆ. ಓದುಗರನ್ನು ತುಂಬಾ ಕಾಡುವ ರವಿಬೆಳೆಗೆರೆಯವರ ಅದ್ಬುತ ಪ್ರೇಮ ಕಾವ್ಯ..
Add to Cart