ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಖುಷಿ - Kushi(Ganesh Yallapura)

  • ₹150

Add to Wish List

Compare this Product

Ex Tax: ₹150

Availability: In Stock

Product Code: KUSHI

ತಂಗಾಳಿ ಬೀಸಿದಾಗ ಒಂಥರಾ ಖುಷಿ. ಮಳೆಯ ಮೊದಲ ಹನಿ ಬಿದ್ದಾಗ ಇನ್ನೊಂಥರಾ ಖುಷಿ. ಎಲೆಯ ಮೇಲೆ ಬಿದ್ದ ಮಂಜಿನ ಹನಿಗೆ ಸೂರ್ಯಕಿರಣ ಮುತ್ತಿಟ್ಟಾಗ ಮತ್ತೊಂಥರಾ ಆನಂದ. ಜೀವನವನ್ನು ಬೆಂಗಳೂರು ಎಂದು ನಾವು ಭಾವಿಸಿದರೆ ಖುಷಿ ಎಂಬುದು ಮೆಜೆಸ್ಟಿಕ್ ಇದ್ದಂತೆ. ನಾವು ಈ ಖುಷಿಯಿಂದಲೇ ನಮ್ಮ ನಮ್ಮ ಪ್ರಯಾಣವನ್ನು ಪ್ರಾರಂಭಿಸುತ್ತೇವೆ. ಪ್ರಯಾಣ ಬೇರೆ ಬೇರೆ ದಿಕ್ಕುಗಳಲ್ಲಿ ಸಾಗುತ್ತದೆ. ಆಮೇಲೆ ಮತ್ತೆ ನಾವೆಲ್ಲ ಹುಡುಕುವುದು ಖುಷಿಯನ್ನೇ ಅಲ್ಲವೇ? ಎಲ್ಲೇ ಹೋದರೂ ಮೆಜೆಸ್ಟಿಕ್‌ಗೆ ತಾನೇ ಬರಬೇಕು? ಖುಷಿಯಿಂದ ನಾವು ಹುಟ್ಟುತ್ತೇವೆ. ಖುಷಿಯಿಂದ ಬೀಗುತ್ತಲೇ ಬೆಳೆಯುತ್ತೇವೆ. ಅದೇ ಖುಷಿ ನಮ್ಮ ಕಣಕಣಗಳಲ್ಲಿ ಮನೆ ಮಾಡುತ್ತದೆ. ಇಂಥ ಖುಷಿಯೇ ದೇವರು ಎಂದು ಉಪನಿಷತ್ ಹೇಳುತ್ತದೆ. ಆದರೆ ನಾವೀಗ ಎಲ್ಲಿದ್ದೇವೆ? ನಮ್ಮ ಕೆಲಸ, ಬದುಕು ನಮಗೆ ಖುಷಿ ಕೊಡುತ್ತಾ? ನಾವಾಡುವ ಮಾತು ಬೇರೆಯವರಿಗೆ ಬಿಡಿ, ಕನಿಷ್ಠ ನಮಗಾದ್ರೂ ಖುಷಿ ಕೊಡುತ್ತಾ? ನಮ್ಮ ಬದುಕಿನ ಜಂಜಾಟದಲ್ಲಿ ಮೈ ತುರಿಸಿಕೊಳ್ಳುವ ಖುಷಿಯಾದರೂ ನಮಗೆ ಉಳಿದಿದೆಯೇ? ನಮ್ಮ ಆನಂದವನ್ನು ಲಾಲ್ಲ್‌ಬಾಗ್‌ನಲ್ಲೋ ಊಟಿಯಲ್ಲೋ ಶಿಮ್ಲಾದಲ್ಲೋ ಸ್ವಿಟ್ಜರ್‌ಲ್ಯಾಂಡಿನಲ್ಲೋ ಹುಡುಕಲು ಹೋಗಿ ಅಲ್ಲಿ ಅದು ಸಿಕ್ಕಾಗ ಅದನ್ನು ಅಲ್ಲೇ ಬಿಟ್ಟು ಬಂದಿದ್ದೇವಾ? ಈ ಪ್ರಶ್ನೆಗಳು ಜೀವನದ ವಾಸ್ತವಕ್ಕೆ ನಮ್ಮನ್ನು ಕರೆತರುತ್ತವೆ. ಇಲ್ಲಿಂದ ಒಂದು ಸಣ್ಣ ಪ್ರಯತ್ನ ಮೌನವಾಗಿ ಪ್ರಾರಂಭವಾಗುತ್ತದೆ. ನಮ್ಮ ಹೆಜ್ಜೆಗಳನ್ನು ನಾವೇ ನೋಡಿಕೊಳ್ಳುತ್ತೇವೆ. ಸರಿ ತಪ್ಪುಗಳಿಗಿಂತ ಹೆಚ್ಚಾಗಿ ನಾವು ಮಾಡಬೇಕಾದುದು ಯಾವುದು ಎಂಬ ಅರಿವು ಮೂಡುತ್ತದೆ. ನಾವೆಲ್ಲ ಇದೇ ಹಾದಿಯಲ್ಲಿದ್ದೇವೆ. ಇದೇ ಮರೆತ ಹಾದಿಯ ಮೆಲುಕು.

Publisher
Sawanna Enterprises

Reviews

There are no reviews for this product.

Write a review

Note: HTML is not translated!