₹100
Ex Tax: ₹100
ಇದು ಸುಧಾ ಮೂರ್ತಿಯವರ ಮೊದಲ ಕಾದಂಬರಿ. ಈ ಕಥೆ ಯಾವುದೇ ಒಂದು ವ್ಯಕ್ತಿಯನ್ನು ಕುರಿತಾಗಿ ಬರೆದಿಲ್ಲ. ಔದ್ಯೋಗೀಕರಣದಿಂದ ಭಾರತದ ಆರ್ಥಿಕ ನವೀನ ಪರಿಸರದಲ್ಲಿ ಮುಂಬಯಿಯಂತಹ ನಗರಗಳು ತಲೆ ಎತ್ತಿವೆ. ಪೂನಾ, ಬೆಂಗಳೂರು, ಮದ್ರಾಸು, ದಿಲ್ಲಿ ನಗರಗಳೂ ಈಗ ಅದೇ ದಿಶೆಯಲ್ಲಿ ಸಾಗುತ್ತಲಿವೆ. ಮಾನವದ ದೇಹದಲ್ಲಿ ಹೃದಯವಿದ್ದಂತೆ, ಈಗ ಮುಂಬೈ ನಗರವು ಔದ್ಯೋಗಿಕರಣದ ಕೇಂದ್ರಬಿಂದುವಾಗಿದೆ. ಈ ಹೊಸ ವಾತಾವರಣವು ಹಲವಾರು ಹೊಸ ಸಮಸ್ಯೆಗಳನ್ನು ತಂದು ಒಡ್ಡಿದೆ. ಮನುಷ್ಯ ಮನುಷ್ಯರಲ್ಲಿ ಅಧಿಕಾರದ ಸ್ಪರ್ಧೆಯೂ ಒಂದು ಯಶಸ್ಸಿನ ಮೆಟ್ಟಲನ್ನು ಬೇಗನೇ ಏರಲು ಪಡುವ ಆತುರ! ಅದಕ್ಕಾಗಿ ಎಷ್ಟೆಲ್ಲ ತಾಕಲಾಟ? ಯಶಸ್ಸೇ ಜೀವನದ ಪರಮೋನ್ನತಿ ಅದುವೇ ಬಾಳಗುರಿ ಎಂದು ತಿಳಿದು ಅದಕ್ಕಾಗಿ ತಮ್ಮ ಜೀವನವನ್ನೇ ಧಾರೆಯೆರೆದ, ಧಾರೆಯೆರೆಯುತ್ತಿರುವ ಜನರು ಇದ್ದಾರೆ, ಇರುತ್ತಾರೆ, ಆಗುತ್ತಲೂ ಇದ್ದಾರೆ. ಇಂಥವರ ಕೌಟುಂಬಿಕ ಸಮಸ್ಯೆಗಳಾವುವು? ಅದಕ್ಕೆ ಈ ಮಹತ್ವಾಕಾಂಕ್ಷಿ ಜನರು ಕೊಡುವ ಬೆಲೆ ಯಾವುದು? ಅಂಥವರ ಮನೆಯಲ್ಲಿರುವವರ ಜಗತು ಯಾವುದು? ಅವರ ಸುಭದ್ರವಾದ ಆರ್ಥಿಕ ಪರಿಸ್ಥಿತಿಯಿದ್ದರೂ ಮನಃಶಾಂತಿ ಯಾವುದು? ಅವರ ಪ್ರತಿಕ್ರಿಯೆ ಏನು? ಈ ತೀವ್ರತಮ ಸ್ಪರ್ಧೆಯಲ್ಲಿ ವ್ಯಾವಹಾರಿಕ ಜಗತ್ತಿನಲ್ಲಿ, ಮಾನವ ಮಾನವೀಯತೆಯನ್ನು ಕಳೆದುಕೊಂಡು ಕೇವಲ ಯಾಂತ್ರಿಕನಾಗುತ್ತಾನೆಯೇ? ಬದಲಾಗುತ್ತಿರುವ ಈ ಹೊಸ ಮೌಲ್ಯಗಳನ್ನು, ಹೊಸ ಪರಿಸರವನ್ನು ಹೊಂದದೇ ಅದರಲ್ಲಿ ಬಳಲುವ, ನಿಷ್ಕ್ರಿಯವಾದ, ನೀರಸ ಜೀವನವನ್ನು ನಡೆಯಿಸುತ್ತಿರುವವರ ಜೀವನದ ಬಗ್ಗೆ ಬರೆದ ಕಥೆಯಿದು...
Add to Cart