ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಮರಳಿ ಮಣ್ಣಿಗೆ - Marali Mannige(Shivarama Karantha K) - Hard Cover

  • ₹350

Add to Wish List

Compare this Product

Ex Tax: ₹350

Availability: In Stock

Product Code: MARALIMANNIGE

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.

ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು.

Author
Shivarama Karantha K
Publisher
Sapna Book House

Reviews

There are no reviews for this product.

Write a review

Note: HTML is not translated!