ಮಯೂರ - Mayura(Devudu)
- ₹150
ಕದಂಬ ವಂಶದ ಮಯೂರವರ್ಮನು ಕರ್ನಾಟಕ ಸಾಮ್ರಾಜ್ಯವನ್ನು ಕಟ್ಟಿದ ಬಗೆ ಈ ಕಾದಂಬರಿಯಲ್ಲಿ ಚಿತ್ರಿತವಾಗಿದೆ. ದೇವುಡು ಅವರ ಸರಳ ನಿರೂಪಣೆ, ಕಣ್ಣಿಗೆ ಕಟ್ಟಿದಂತೆ ಸನ್ನಿವೇಶಗಳನ್ನು ವರ್ಣಿಸುವ ಚಾತುರ್ಯ ಓದುಗರನ್ನು ಸೆರೆ ಹಿಡಿಯುತ್ತದೆ. ಸುಮಾರು 80 ವರ್ಷಗಳ ಹಿಂದೆಯೇ ಈ ಕಾದಂಬರಿ ರಚಿತವಾಗಿದ್ದರೂ ಇಂದಿಗೂ ಹೊಚ್ಚ ಹೊಸ ಕಾದಂಬರಿಯನ್ನೂ ಓದಿದ ಅನುಭವ ನೀಡುತ್ತದೆ. ಇತಿಹಾಸ ಪ್ರಸಿದ್ಧ ನಟ ಡಾ| ರಾಜ್‌ಕುಮಾರ್ ಅಭಿನಯದಲ್ಲಿ ಚಲನ ಚಿತ್ರವಾಗಿಯೂ ‘ಮಯೂರ’ ಕನ್ನಡಿಗರ ಹೃನ್ಮನ ಗೆದ್ದಿದೆ. ದೇವುಡು ಹೇಳುತ್ತಾರೆ ‘ಮಯೂರ’ವು ಕಥೆ, ಚರಿತ್ರೆಯಲ್ಲ. ಇದರಲ್ಲಿ ದಿಟಕ್ಕಿಂತಲೂ ದಿಟದಂತೆ ತೋರುವ ಸಟೆಯೇ ಹೆಚ್ಚು.
Author | |
Devudu | |
Publisher | |
Devudu Pratishtana |
Reviews
There are no reviews for this product.