ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ನಾನೆಂದಿಗೂ ಸೋಲುವುದಿಲ್ಲ, ಸೋತರದು ನಾನಲ್ಲ!(ರಂಗಸ್ವಾಮಿ ಮೂಕನಹಳ್ಳಿ) - Naanendigu Soluvudilla, Sotaradu Naanalla!(Rangaswamy Mookanahalli)

  • ₹180

Add to Wish List

Compare this Product

Ex Tax: ₹180

Availability: In Stock

Product Code: NANENDU

ಸೋಲನ್ನು ಆಸ್ವಾದಿಸುವುದು ಕಲಿಯಬೇಕು ಏಕೆಂದರೆ ಬದುಕಿನ ನಿಜವಾದ ಅರ್ಥ ತಿಳಿಸುವುದು ಸೋಲು ಮಾತ್ರ. ಗೆಲುವು ಪಾಠ ಕಲಿಸುವುದಿಲ್ಲ. ಗೆದ್ದ ತಕ್ಷಣ ನಾವು ಅದನ್ನು ಆಸ್ವಾದಿಸಲು ಶುರು ಮಾಡುತ್ತೇವೆ. ಹೀಗಾಗಿ ಅದು ಮರುಕ್ಷಣದಿಂದ ಸೋಲಿಗೆ ತಯಾರು ಮಾಡುತ್ತದೆ. ಸೋಲು ಹಾಗಲ್ಲ ಅದು ಆತ್ಮವಿಮರ್ಶೆಗೆ ಜಾಗ ಮಾಡಿಕೊಡುತ್ತದೆ. ಹೀಗಾಗಿ ಅದು ಸದಾ ಗೆಲುವಿನ ಕಡೆಗೆ ನಮ್ಮನ್ನು ನೂಕುತ್ತದೆ. ಈಗ ಹೇಳಿನಾವು ಗೆಲುವನ್ನು ಪ್ರೀತಿಸಬೇಕೋ ಅಥವಾ ಸೋಲನ್ನೋಅಚ್ಚರಿ ಎನ್ನಿಸುತ್ತೆ ಅಲ್ವಾನಾವು ಬದುಕನ್ನು ನೋಡುವ ರೀತಿಯನ್ನು ಬದಲಿಸಿಕೊಂಡು ಬಿಟ್ಟರೆ ಸಾಕುಅದು ನಮ್ಮ ಬದುಕನ್ನು ಬದಲಿಸಿ ಬಿಡುತ್ತದೆ. ಸೋಲು ಕೊಡುತ್ತಿರುವ ನೋವಿನ ಮಟ್ಟ ಅತ್ಯಂತ ಹೆಚ್ಚಾಗಿದೆ ಎಂದರೆ ಅಲ್ಲೇ ಎಲ್ಲೊ ಒಂದೆರಡು ಅಡಿ ದೂರದಲ್ಲಿ ಯಶಸ್ಸು ನಮ್ಮನ್ನು ಅಪ್ಪಿಕೊಳ್ಳಲು ಕಾಯುತ್ತಿದೆ ಎಂದರ್ಥ. ನಮಗೆ ಅದು ತಿಳಿಯುವುದಿಲ್ಲಏಕೆಂದರೆ ಸೋಲು ಕೊಡುವ ಅಪಾರ ನೋವು ಕೆಲವೊಮ್ಮೆ ವರ್ಷಾನುಗಟ್ಟಲೆ ಇರುತ್ತದೆ!

ಮೇಲಿನ ಸಾಲುಗಳಲ್ಲಿ ಹೇಳಿದ ತತ್ವಜ್ಞಾನ ಹುಟ್ಟಿದ್ದು ಬದುಕು ನೀಡಿದ ಅನುಭವದಿಂದ! ಈ ಪುಸ್ತಕದ ಹೆಸರು `ನಾನೆಂದಿಗೂ ಸೋಲುವುದಿಲ್ಲಸೋತರದು ನಾನಲ್ಲ!ಎನ್ನುವುದು ಅಹಮಿಕೆಯಿಂದ ಹುಟ್ಟಿದ ಮಾತಲ್ಲ. ಅದು ಈ ಪುಸ್ತಕದಲ್ಲಿರುವ 18 ಮಹನೀಯರನ್ನು ಕಂಡು ಹುಟ್ಟಿದ ಶೀರ್ಷಿಕೆ! ಅದು ವ್ಯಕ್ತಿತ್ವದ ಹೆಸರು! ಛಲದ ಹೆಸರು! ಆತ್ಮವಿಶ್ವಾಸದ ಹೆಸರು!


Reviews

There are no reviews for this product.

Write a review

Note: HTML is not translated!