ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ನಾಕುತಂತಿ (ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ) - Nalku Tanti(Bendre D R)

  • ₹100

Add to Wish List

Compare this Product

Ex Tax: ₹100

Availability: In Stock

Product Code: NALKUTANTI

ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ಜನವರಿ 31, 1986- ಅಕ್ಟೋಬರ್ 26, 1981) ಕನ್ನಡ ಸಾಹಿತ್ಯದ ನವೋದಯ ಕವಿ. ವರಕವಿ. ಮೊದಲ ಬಾರಿಗೆ ಕನ್ನಡಕ್ಕೆ ಪೂರ್ಣ ಪ್ರಮಾಣದ ಜ್ಞಾನಪೀಠವನ್ನು ತಂದವರು. ಕನ್ನಡ ಕಾವ್ಯಕ್ಕೆ ನಿಜವಾದ ಅರ್ಥದಲ್ಲಿ ಗೇಯತೆಯನ್ನು, ಲಾಲಿತ್ಯವನ್ನು, ಮಾಧುರ್ಯವನ್ನು ಬೇಂದ್ರೆಯವರು ತಂದರು. ಜನಸಾಮಾನ್ಯರ ಪದಗಳನ್ನು ಆರಿಸಿಕೊಂಡು, ಅವುಗಳನ್ನು ಅಧ್ಯಾತ್ಮದ ಔನ್ನತ್ಯಕ್ಕೆ ಏರಿಸಿದರು. ತಮ್ಮ ಜೀವಮಾನದ ಕೊನೆದಿನಗಳಲ್ಲಿ ಸಂಖ್ಯಾಶಾಸ್ತ್ರದ ಮೋಡಿಗೊಳಗಾಗಿ ಅವರು ಬರೆದ ಪದ್ಯಗಳು ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾದವು ಎನ್ನುವುದು ನಿಜ. ಬೇಂದ್ರೆಯವರು ಒಂದು ಬಹು ದೊಡ್ಡ `ದೌರ್ಬಲ್ಯ`ವೆಂದರೆ ಪ್ರವಾಹೋಪಾದಿಯಲ್ಲಿ ಬರುತ್ತಿದ್ದ ಉಕ್ಕಿ ಹರಿಯುತ್ತಿದ್ದ ತಮ್ಮ ಭಾವನೆಗಳಿಗೆ ಒಂದು ಒಡ್ಡನ್ನು ಹಾಕಲು ಅಸಮರ್ಥರಾದದ್ದು. ಹಾಗಾಗಿಯೇ ಬೇಂದ್ರೆಯವರು ಯಾವುದೇ `ಮಹಾಕಾವ್ಯ`ವನ್ನು ಬರೆಯಲು ಹೋಗಲಿಲ್ಲ. ಅವರ ಬದುಕೇ ಯಾವ ಮಹಾಕಾವ್ಯಕ್ಕೂ ಕಡಿಮೆಯಿಲ್ಲ ಎನ್ನುವುದು ಬೇರೆಯ ಮಾತು. ಬೇಂದ್ರೆಯವರ ಕುರಿತ ಈ ಕೃತಿಯನ್ನು ಶ್ರೀ ಟಿ.ಎಸ್. ಗೋಪಾಲ್ ರಚಿಸಿದ್ದಾರೆ.

Reviews

There are no reviews for this product.

Write a review

Note: HTML is not translated!