ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಪದವ್ಯೂಹ - Padavyuha(Prahalad Rao A N)

  • ₹90

Add to Wish List

Compare this Product

Ex Tax: ₹90

Availability: In Stock

Product Code: PADAVYUHA

ಅ.ನಾ. ಪ್ರಹ್ಲಾದರಾವ್ ಅವರು ಹುಟ್ಟಿದ್ದು ೧೯೫೩ರಲ್ಲಿ. ಊರು ಕೋಲಾರ ತಾಲ್ಲೂಕಿನ ಅಬ್ಬಣಿ. ತಂದೆ ಎ. ಆರ್. ನಾರಾಯಣರಾವ್, ತಾಯಿ ಕಾವೇರಮ್ಮ. ಅಬ್ಬಣಿ, ಬಿದರಹಳ್ಳಿ, ಬೆಂಗಳೂರು ಹಾಗೂ ಕೋಲಾರದಲ್ಲಿ ವಿದ್ಯಾಭ್ಯಾಸ ಮಾಡಿದ ಅವರು ಮೊದಲು ಪತ್ರಿಕೋದ್ಯಮಿಯಾಗಿ ವೃತ್ತಿ ಆರಂಭಿಸಿ ನಂತರ ವಾರ್ತಾ ಇಲಾಖೆಗೆ ಸೇರಿ ಮುಖ್ಯಮಂತ್ರಿಗಳ ಕಚೇರಿಯೂ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ೨೦೧೩ರ ಜುಲೈನಲ್ಲಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ನಿವೃತ್ತರಾದರು. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಅ.ನಾ. ಪ್ರಹ್ಲಾದರಾವ್ ಕನ್ನಡ ಪದಬಂಧಗಳ ರಚನೆಯಲ್ಲಿ ದೊಡ್ಡ ಹೆಸರು. ಸುಮಾರು ೪೦,೦೦೦ ಪದಬಂಧಗಳು ಪ್ರಹ್ಲಾದರಾವ್ ಅವರ ಚಿಂತನಾಮೂಸೆಯಿಂದ ಮೂಡಿಬಂದಿವೆ. ಲೇಖಕರಾಗಿಯೂ ಹೆಸರಾಗಿರುವ ಅ.ನಾ. ಪ್ರಹ್ಲಾದರಾವ್ ಅವರ ಕೃತಿಗಳು: ರಘುಸುತರ ನಾಟಕಗಳು (ವಿಮರ್ಶೆ), ಪುರಸ್ಕಾರ (ಚಲನಚಿತ್ರ ಪ್ರಶಸ್ತಿಗಳನ್ನು ಕುರಿತು), ಬಂಗಾರದ ಮನುಷ್ಯ (ಡಾ. ರಾಜಕುಮಾರ್ ಜೀವನ ಚರಿತ್ರೆ), ನಿಸಾರೋಕ್ತಿಗಳು (ಸಂಪಾದನೆ), ಮಳೆನೀರು ಸಂರಕ್ಷಣೆ (ಜಲಮಂಡಳಿ ಪ್ರಕಟಣೆ), ಬೆಳ್ಳಿತೆರೆ ಬೆಳಗಿದವರು (ಚಲನಚಿತ್ರ ದಿಗ್ಗಜರನ್ನು ಕುರಿತು), ರಾಜಕುಮಾರ್ : ದಿ ಇನಿಮಿಟಬಲ್ ಆಕ್ಟರ್ ವಿತ್ ಗೋಲ್ಡನ್ ವಾಯ್ಸ್ (‘ಬಂಗಾರದ ಮನುಷ್ಯ‘ ಕೃತಿಯ ಆಂಗ್ಲ ಅವತರಣಿಕೆ), ಡಾ. ರಾಜ್ಕುಮಾರ್, ಟಿ.ಎಸ್. ಕರಿಬಸಯ್ಯ, ಶಾಂತಾ ಹುಬ್ಳಿಕರ್, ಪದಬಂಧದ ೫ ಪ್ರತ್ಯೇಕ ಪುಸ್ತಕಗಳು, ಪ್ರಾಣಪದಕ (ಶ್ರೀಮತಿ ಪಾರ್ವತಮ್ಮನವರ ದೃಷ್ಟಿಯಲ್ಲಿ ಡಾ. ರಾಜಕುಮಾರ್), ನನ್ನ ವಿಭಿನ್ನದಾರಿ - ರಜನಿಕಾಂತ್. ಜೊತೆಗೆ ಪದಲೋಕ, ಪದಕ್ರೀಡೆ. ಅಲ್ಲದೆ, ಹಿರಿಯ ಐ.ಎ.ಎಸ್. ಅಧಿಕಾರಿ ಕೆ. ಜೈರಾಜ್ ಅವರ ಆಡಳಿತ ಅನುಭವಗಳನ್ನು ಜೈತ್ರಯಾತ್ರೆ ಕೃತಿಯ ಮೂಲಕ ಅನಾಪ್ರ ಕಟ್ಟಿಕೊಟ್ಟಿದ್ದಾರೆ. ಇವರು ಬರೆದ ಒಂಭತ್ತು ಭಾವಗೀತೆಗಳ ಸಿ.ಡಿ. ವಸಂತ ಮಲ್ಲಿಕಾ ೨೦೦೮ರಲ್ಲಿ ಬಿಡುಗಡೆಗೊಂಡಿದೆ. ಅ.ನಾ. ಪ್ರಹ್ಲಾದರಾವ್ ಅವರಿಗೆ ಸಂದಿರುವ ಅನೇಕ ಪ್ರಶಸ್ತಿ ಪುರಸ್ಕಾರಗಳಲ್ಲಿ ಕೆಲವೆಂದರೆ ‘ಪ್ರಜಾರತ್ನ‘, ‘ಪದಬಂಧಬ್ರಹ್ಮ‘, ‘ಪದಬಂಧ ಸಾಮ್ರಾಟ್‘ ಮೊದಲಾದ ಬಿರುದುಗಳು; ‘ವಿಶ್ವೇಶ್ವರಯ್ಯ ಪ್ರಶಸ್ತಿ‘, ‘ಕರ್ನಾಟಕ ವಿಭೂಷಣ ಪ್ರಶಸ್ತಿ‘, ‘ಆರ್ಯಭಟ ಪ್ರಶಸ್ತಿ‘, ‘ಕೆಂಪೇಗೌಡ ಪ್ರಶಸ್ತಿ‘, ‘ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಸದ್ಭಾವನ ಪ್ರಶಸ್ತಿ‘ ಮೊದಲಾದ ಪ್ರಶಸ್ತಿ ಪುರಸ್ಕಾರಗಳು.

Author
A Naa Prahalada Rao
Publisher
Vasantha Prakashana

Reviews

There are no reviews for this product.

Write a review

Note: HTML is not translated!