ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಪರ್ವ - Parva(S Bhyrappa) - Paperback

  • ₹840

Add to Wish List

Compare this Product

Ex Tax: ₹840

Availability: In Stock

Product Code: PARVA

ವ್ಯಾಸ ಮಹರ್ಷಿಗಳ ‘ಮಹಾಭಾರತ’ವನ್ನು ಆಧಾರವಾಗಿಟ್ಟುಕೊಂಡು  ರಚಿತವಾಗಿರುವ ಕಾದಂಬರಿ ‘ಪರ್ವ’. ಇದೊಂದು ಮರುಸೃಷ್ಟಿ. ಕಾವ್ಯ ಇತಿಹಾಸ ಪುರಾಣಗಳ ಮಿಶ್ರಣವಾದ ಪ್ರಾಚೀನ ಮಹಾಕೃತಿಯೊಂದನ್ನು ಆಧುನಿಕ ಸಾಹಿತ್ಯಪ್ರಕಾರವಾದ ಕಾದಂಬರಿಯನ್ನಾಗಿ ನಿರ್ಮಿಸುವ ಪ್ರಕ್ರಿಯೆಯಲ್ಲಿ, ಶ್ರೇಷ್ಠ ಕಾದಂಬರಿಕಾರರೊಬ್ಬರ ಪಕ್ವವಾದ ಮನಸ್ಸು ಕಾಲ ದೇಶಗಳನ್ನು ದಾಟಿ ಹೇಗೆ ಕೆಲಸ ಮಾಡಿದೆ ಎಂಬುದನ್ನು ಇಲ್ಲಿ ನೋಡಬಹುದು. ಸೃಜನಶೀಲ ಪ್ರತಿಭೆಯ ಸಾಹಸ ಈ ಬೃಹತ್ಕಾದಂಬರಿಯ ಪುಟಪುಟಗಳಲ್ಲಿ  ಸ್ಫುಟಗೊಂಡಿದೆ. ಮೂಲಕೃತಿಯ ಅಲೌಕಿಕ ಅಂಶಗಳಿಂದ ಪಾರಾಗಿ, ಸಾಮಾನ್ಯರನ್ನೂ ಅಸಾಮಾನ್ಯರನ್ನೂ ಒಂದೇ ದೃಷ್ಟಿಯಿಂದ ನೋಡಿ, ಆದರ್ಶ ವಾಸ್ತವತೆಗಳನ್ನು ಮೇಳವಿಸಿ, ಯಾವುದೋ ಕಾಲದ ವ್ಯಕ್ತಿ ಸಂಗತಿಗಳು ನಮ್ಮ ಕಾಲದವಾಗಿ, ನಮಗೆ ತೀರ ಹತ್ತಿರದವಾಗಿ ಮಾರ್ಪಡುವ ಕಲಾಕೌಶಲವನ್ನು ಈ ಕಾದಂಬರಿ ತೋರಿಸುತ್ತದೆ. ಕಾದಂಬರಿಕಾರರಿಗಿರುವ ಮಾನವಸ್ವಭಾವದ ನಿಕಟ  ಪರಿಚಯ, ಈ ಪರಿಚಯವನ್ನು ತೋರುವಲ್ಲಿ ಅವರು ಮೆರೆಯುವ ಸಂಯಮ ಹಾಗೂ ಅಲಿಪ್ತತೆಗಳು ವ್ಯಾಸಗುಣಗಳೇ ಆಗಿವೆ. ಫಲವಾಗಿ ‘ಪರ್ವ’ ನಮ್ಮ ಕಾಲದ ಒಂದು ಶ್ರೇಷ್ಠ ಕಲಾಕೃತಿಯಾಗಿದೆ.
Author
SL Bhyrappa
Publisher
Saahitya Bhandara

Reviews

There are no reviews for this product.

Write a review

Note: HTML is not translated!