ರಾಜ್ಯದಾಹ - Raajyadaaha(Ta Ra Su)
- ₹90
ಪ್ರಕಾಶಕರು | : | ಹೇಮಂತ ಸಾಹಿತ್ಯ |
Author | |
Ta Ra Su | |
Publisher | |
Hemantha Sahitya |
Reviews
There are no reviews for this product.
ಪ್ರಕಾಶಕರು | : | ಹೇಮಂತ ಸಾಹಿತ್ಯ |
Author | |
Ta Ra Su | |
Publisher | |
Hemantha Sahitya |
There are no reviews for this product.
Related Products
ಆ ಕಾಲ-ವ್ಯಾಪಾರಕ್ಕೆಂದು ಬಂದ ಬ್ರಿಟಿಷರು, ಪೋರ್ಚುಗೀಸರು ಭಾರತೀಯ ರಾಜರುಗಳ ಒಳಜಗಳದ ಸುಸಂಧಿಯನ್ನೇ ಸಾಧಿಸಿ ‘ತಮ್ಮ ರೊಟ್ಟಿ ಜಾರಿ ಎಲ್ಲಿ ಬೆಣ್ಣೆಗೆ ಬೀಳುತ್ತದೆ’ ಎಂದು ಕಾಯುತ್ತಿದ್ದ ಕಾಲ. ದಕ್ಷಿಣದಲ್ಲಿ ಪ್ರಬಲರಾದ ಮರಾಠರು, ಹೈದರಾಬಾದಿನ ನಿಜಾಮ, ಮೈಸೂರು ಸಂಸ್ಥಾನದ ಸರ್ವಾಧಿಕಾರಿ ಹೈದರಾಲಿ-ಇವರ ನಿರಂತರ ಹೋರಾಟದ ಏಳು-ಬೀಳುಗಳನ್ನವಲಂಬಿಸಿ ತಮ್ಮ ಅಳಿವು-ಉಳಿವುಗಳನ್ನು ಕರ್ನಾಟಕದ ಎಲ್ಲ ಪಾಳೆಯಗಾರರು ನಿರ್ಧರಿಸುತ್ತಿದ್ದ ಪರ್ವಕಾಲ.ಹೈದರಾಲಿಯ ಬಿರುಗಾಳಿಯ ದಾಳಿಯನ್ನು ಎದುರಿಸಲಾಗದೆ, ತಮ್ಮ ಸರ್ವಸ್ವವನ್ನೂ ಅರ್ಪಿಸಿ ತಮ್ಮ ಪ್ರಾಣರಕ್ಷಣೆ ಮಾಡಿಕೊಳ್ಳುತ್ತಿದ ಪಾಳೆಯಗಾರರಿದ್ದಾಗ ತನ್ನ ಅಪ್ರತಿಮ ಶೌರ್ಯ-ಸಾಹಸಗಳಿಂದ, ಜನತೆಯ ಅಭಿಮಾನಕೋಟೆಯ ರಕ್ಷಾಬಲದಿಮ್ದ ಎಂದೂ ಸೋತು, ಶರಣಾಗದೆ ಸುಮಾರು ಎರಡು ವರ್ಷಗಳ ಕಾಲ ಹೈದರಾಲಿಗೆ ಸವಾಲಾಗಿ ನಿಂತು ಸೆಣಸಿದ ಏಕೈಕ ಗಂಡು ಪಾಳೆಯಗಾರ-ಚಿತ್ರದುರ್ಗದ ಮದಕರಿನಾಯಕ.ಮದಕರಿನಾಯಕನ ದುರಂತ-ಒಂದು ನಾಡಿನ ದುರಂತ; ಆ ಕಥೆಯನ್ನೇ ಹೇಳುವ ಈ ‘ದುರ್ಗಾಸ್ತಮಾನ’-ಆ ಕಾಲದ ಮೌಲ್ಯಗಳ ಅಸ್ತಮಾನವನ್ನೂ ಪರ್ಯಾಯವಾಗಿ ಧ್ವನಿಸುತ್ತದೆ. ಎಂದೋ, ಶತಮಾನಗಳ ಹಿಂದೆ ನಡೆದುಹೋಗಿರಬಹುದಾದ ಇತಿಹಾಸವನ್ನು, ತಮ್ಮ ಪ್ರತಿಭೆಯ ಪರಶುಮಣಿಸ್ಪರ್ಶದಿಂದ ಸುವರ್ಣಾಧ್ಯಾಯವನ್ನಾಗಿಸಿ, ಕಣ್ಣಿಗೆ ಕಟ್ಟುವಂತೆ ಪುನರ್ ಸೃಷ್ಟಿಸಬಲ್ಲ ಕಲ್ಪನಾಶಕ್ತಿ, ಕಲಾಕೌಶಲ ಇರುವುದು-ತ.ರಾ.ಸು. ಒಬ್ಬರಿಗೇ.ಸುಳಿಯಲ್ಲಿ ಸಿಕ್ಕವನಂತೆ ದುರಂತದೆಡೆಗೆ ಸಾಗುವ ಮದಕರಿನಾಯಕನ ಬದುಕಿನ ವಿವಿಧ ಮುಖಗಳು ಬಿಚ್ಚಿಕೊಳ್ಳುವ ಬೃಹತ್ವೇಶ್ಮದ ಮೇಲೆ ಎಲ್ಲ ರಸಗಳ ವರ್ಣಗಳನ್ನೂ ಬಳಸಿ ಚಿತ್ರಿಸುವಾಗ ಅರವತ್ತಮೂರರ ತ.ರಾ.ಸು. ಹದಿಹರೆಯದವರನ್ನೂ ನಾಚಿಸುವ ಬಿಸಿನೆತ್ತರ ಕಾವನ್ನು ಕಾರುತ್ತಿರುವಮ್ತೆ, ಪುಟಪುಟಗಳಲ್ಲೂ ತಮ್ಮ ಮಣ್ಣಿನ ಮೇಲಣ ಅಭಿಮಾನವನ್ನು ಅಭಿವ್ಯಕ್ತಿಸಿದಂತೆ ಕಾಣುತ್ತದೆ; ನೆತ್ತರು ಕುದಿಸುವ ತಮ್ಮ ಎಂದಿನ ಸಿಡಿಲಭಾಷೆಯಲ್ಲಿ, ಕಣ್ಣುಕೋರೈಸುವ ಮಿಂಚಿನ ಶೈಲಿಯಲ್ಲಿ, ಆಳ ಅನುಭವ-ಚಿಂತನಗಳ ರಸಪಾದಕಲ್ಲಿ ಈ ಕೃತಿಯನ್ನೊಂದು ರುದ್ರಾಧ್ಯಾಯವನ್ನಾಗಿಸಿದ್ದಾರೆ...
Add to Cartತ.ರಾ.ಸು. ಕಥೆ ಹೇಳುವುದರಲ್ಲಿ ನಿಸ್ಸೀಮರು. ಅವರ ಭಾಷೆಯ ಹರವು ವಿಶಾಲವಾದದ್ದು. ಚಿತ್ರಮಯವಾಡ ವರ್ಣನೆ, ಅಂತಃಕರಣ ಉಕ್ಕಿಬರುವ ಸಂಭಾಷಣೆ, ರೋಮಾಂಚಕಾರಕ ಕಾರ್ಯಕಾರಣಪುರಸ್ಸರವಾದ ಘಟನೆಗಳ ನಿರೂಪಣೆ ಸಿಡಿಲಿನಂತಹ ಭಾವಗಳು, ಪಾರಿಜಾತ ಸ್ಪರ್ಶದಂತಹ ಮಾರ್ದವತೆ, ವೀರ್ಯವತ್ತಾದ ಭಾಷೆ, ಪರಿಣಾಮಕಾರಿಯಾದ ದೃಶ್ಯಗಳ ನಿರೂಪಣೆ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ಶೈಲಿ. ಇವರ ದೃಶ್ಯ ವರ್ಣನೆಗಳನ್ನು ಓದುತ್ತಿದ್ದರೆ ನಾಟಕಶಾಲೆಯಲ್ಲಿ ಕುಳಿತು ದೃಶ್ಯ ವೀಕ್ಷಿಸುತ್ತಿದ್ದೇವೆಯೋ ಎನಿಸುತ್ತದೆ. ಒಬ್ಬರ ಧ್ವನಿಯ ಶಕ್ತಿಯು ಮೈ ಜುಮ್ಮೆನಿಸಿದರೆ, ಇನ್ನೊಬ್ಬರ ಮನದ ಮೆಲು ನಿಟ್ಟುಸಿರು ಕೇಳಿಸುತ್ತದೆ. ಮಗದೊಬ್ಬರ ಕಣ್ಣಂಚಿನಲ್ಲಿ ಅಂತಃಕರಣದ ಆಳದಿಂದ ಹೊರತುಳುಕುವ ಕಂಬನಿ ಕಾಣುತ್ತದೆ.ಓದುಗರ ಮನವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಬಲ್ಲ, ಅಂತಃಕರಣವನ್ನು ತಾಕಬಲ್ಲ, ಮತ್ತೆ ಮತ್ತೆ ರೋಮಾಂಚನಗೊಳಿಸಬಲ್ಲ ಕಥೆಗಳನ್ನು ತ.ರಾ.ಸು. ತುಂಬ ಸಮರ್ಥವಾಗಿ ಹೇಳಿದ್ದಾರೆನ್ನುವುದಕ್ಕೆ ಇವರ ಅನೇಕ ಕಾದಂಬರಿಗಳು ಮತ್ತೆ ಮತ್ತೆ ಮುದ್ರಣಗೊಂಡು ಚಲನಚಿತ್ರವಾಗಿರುವುದೇ ಸಾಕ್ಷಿಯಾಗಿದೆ...
Sold outkannadalokakarnataka@gmail.com
ದೂರವಾಣಿ/ವಾಟ್ಸಪ್ಪ್ : +91-8660404034