ಪ್ರೀತಿಯಿಂದ ರಮೇಶ್ - https://tinyurl.com/39twwmuz
 

ರಾಜಕುಮಾರ್ ಮತ್ತಷ್ಟು ಮುಖಗಳು(ಕಟ್ಟೆ ಗುರುರಾಜ್) - Rajkumar Matthashtu Mukhagalu(Katte Gururaj)

  • ₹150

Add to Wish List

Compare this Product

Ex Tax: ₹150

Availability: In Stock

Product Code: RAJKUMAR

ರಾಜ್ಕುಮಾರ್ ಬಹಳ ಸಿಂಪಲ್ ಬಿಡ್ರೀ.. ಬಿಳೀ ಪಂಚೆಷರಟು ಮಾತ್ರ ರಿಸೋರು’. ರಾಜ್ಕುಮಾರ್ ಅವರ ಬಗ್ಗೆ ಬಂದಾಗೆಲ್ಲ ಈ ಮಾತು ಬರೋದು. ದಶಕಗಳ ಕಾಲ ಅದು ಹೇಗೆ ಬರೀ ಪಂಚೆಷರಟು ರಿಸುತ್ತಾರೆ. ಪ್ಯಾಂಟು ಏಕೆ ಹಾಕಲಿಲ್ಲಬರೀ ಪಂಚೆಷರಟು ಹಾಕಿದರೆ ಮಾತ್ರ ಸಿಂಪಲ್ಲಾ?  ಅದರೊಳಗೆ ಸೇರೋ ದೇಹಕ್ಕೊಂದು ವ್ಯಕ್ತಿತ್ವ ಮುಖ್ಯ ಅಲ್ವಾಅದು ಹೇಗಿತ್ತು ಅನ್ನೋ ಪ್ರಶ್ನೆಗೆ ಮತ್ತದೆ ಪಂಚೆ ಷರಟುಗಳ ಉತ್ತರವೇ ಬರುತ್ತಿತ್ತು. ಹುಟ್ಟೂರುಓಡಾಡಿದ ಜಾಗ ಗುರುತು ಮಾಡಿಅವರಿಟ್ಟ ಹೆಜ್ಜೆ ಗುರುತುಗಳ ಮೇಲೆ ಮತ್ತೆ ಮತ್ತೆ ನಮ್ಮ ಹೆಜ್ಜೆ ಊರುತ್ತಾಉರುಳು ಸೇವೆ ಮಾಡುತ್ತಿದ್ದ ನಂಜನಗೂಡಲ್ಲಿ ಅಲೆದಾಡುತ್ತಾಇಷ್ಟಪಟ್ಟು ತಿನ್ನುತ್ತಿದ್ದ ಹೋಟೆಲ್‌ಗಳೆಲ್ಲಾ ಹುಡುಕಾಡುತ್ತಿದ್ದಾಗ ಅರ್ಥವಾಗಿದ್ದು ಏನೆಂದರೆರಾಜ್ಕುಮಾರ್ ಸಿಂಪಲ್‌ನ ಸೂತ್ರಧಾರ ಮತ್ಯಾರು ಅಲ್ಲಕೊನೇತನಕ ಅವರೊಳಗಿದ್ದ ಮುತ್ತುರಾಜನೇ ಅನ್ನೋದು.

ನಾನಾಗಲಿನೀವಾಗಲಿಯಾವ ನಟರೇ ಆಗಲಿವೃತ್ತಿ ಜೀವನಕ್ಕೆ ಕಾಲಿಡುವ ಆರಂದಲ್ಲಿ ಅವರೊಳಗಿರುವ ಮುಗ್ಧತೆಆ ವ್ಯಕ್ತಿತ್ವ ಆಮೇಲಾಮೇಲೆ ಅವರಲ್ಲಿ ಇರೋದಿಲ್ಲ. ಅದರಲ್ಲೂಹೆಸರುಹಣ ದಕ್ಕಿದಾಗಲಂತೂ ತನ್ನೊಳಗೆ ಮೂಲ ವಿಗ್ರಹದ ಥರ ಇರೋ  ಮುಗ್ಧತೆ  ಕಾಣೆಯಾಗಿಬಿಡುತ್ತದೆ. ರಾಜ್ಕುಮಾರರು ಇದಕ್ಕೆ ಅಪವಾದ. ಸಿನಿಮಾದಲ್ಲಿ ಪಾರ್ಟ್ ಕೇಳಿಕೊಂಡು ಅಪ್ಪನ ಜೊತೆ ಮದರಾಸಿಗೆ ಹೋದಾಗ ಇದ್ದ ಮುಗ್ಧತೆರಾಜ್ಕುಮಾರನಾಗಿಹೆಸರುಹಣಜನಪ್ರಿಯತೆ ಎಲ್ಲ ಗಳಿಸಿದ ಮೇಲೂ ಆಂತರ್ಯದಲ್ಲಿ ಹಾಗೇ ಬದುಕಿತ್ತು. ನಮಗೆಲ್ಲಾ ಸಿಂಪಲ್ ಆಗಿ ಕಾಣ್ತಾ ಇದ್ದದ್ದು ರಾಜ್ಕುಮಾರರಾದರೂ ಅದಕ್ಕೆ ಕಾರಣೀಭೂತರು ಈ ಮುತ್ತುರಾಜ್. ಸಿಂಪಲ್‌ಗೆ ಸ್ಯಾಂಪಲ್ ಆಗಿರೋ ಅವರನ್ನು ಈ ಪುಸ್ತಕದಲ್ಲಿ ಹಿಡಿದಿಟ್ಟಿದ್ದೇವೆ..


Reviews

There are no reviews for this product.

Write a review

Note: HTML is not translated!