ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಸಾಹಿತ್ಯ ವಿಮರ್ಶೆ - Saahitya Vimarshe(Ramachandran C N)

  • ₹150

Add to Wish List

Compare this Product

Ex Tax: ₹150

Availability: In Stock

Product Code: SAHITYAVIMRSHE

ಶ್ರೇಷ್ಠ ವಿಮರ್ಶೆಯ ಪರಂಪರೆ ಇರುವ ಕನ್ನಡದಲ್ಲಿ, ವಿಮರ್ಶೆಯ ತತ್ವ ಮತ್ತು ಸಿದ್ಧಾಂತಗಳಿಗೆ ಸಂಬಂಧಿಸಿದ ಗ್ರಂಥಗಳು ವಿರಳವೆಂದೇ ಹೇಳಬೇಕು. ಕನ್ನಡ ವಿಮರ್ಶೆಯ ಪ್ರಪಂಚದಲ್ಲಿ ಸಾಕಷ್ತು ಕೃಷಿ ಮಾಡಿರುವ ಡಾ. ಸಿ.ಎನ್. ರಾಮಚಂದ್ರನ್ ಬರೆದಿರುವ ವಿಮರ್ಶೆಯ ತತ್ವ ಮತ್ತು ಆಧುನಿಕ ವಿಮರ್ಶಾ ಪ್ರಸ್ಥಾನಗಳಿಗೆ ಸಂಬಂಧಿಸಿದ ಈ ಗ್ರಂಥವು ತುಂಬಾ ಪ್ರಸ್ತುತವಾಗಿದೆ.

ಆಧುನಿಕ ವಿಮರ್ಶಾ ಪ್ರಸ್ಥಾನಕ್ಕೆ ಸಂಬಂಧಿಸಿದ ಈ ಗ್ರಂಥದ ಎರಡನೆಯ ಭಾಗ ತುಂಬಾ ಮಹತ್ವಪೂರ್ಣವಾದುದು. ಕರ್ತೃ ಕೇಂದ್ರಿತ ವಿಮರ್ಶೆ, ಮನೋವೈಜ್ಞಾನಿಕ ವಿಮರ್ಶೆ, ಸಮಾಜ ಕೇಂದ್ರಿತ ವಿಮರ್ಶೆ, ಚಾರಿತ್ರಿಕ ವಿಮರ್ಶೆ, ಮಾರ್ಕ್ಸ್‌ವಾದಿ ವಿಮರ್ಶೆ, ಹಾಗೂ ಇತ್ತೀಚೆಗೆ ಪ್ರಚಲಿತವಿರುವ ಸ್ತ್ರೀವಾದಿ ವಿಮರ್ಶೆಯ ಸ್ವರೂಪಗಳನ್ನು ಲೇಖಕರು ವಿವರವಾಗಿ ಚರ್ಚಿಸಿದ್ದಾರೆ. ಪ್ರತಿಯೊಂದು ವಿಮರ್ಶಾ ಮಾರ್ಗದಲ್ಲಿಯೂ ಇರುವ ದೋಷಗಳ ವಿವೇಚನೆ ಇಲ್ಲಿ ಮುಖ್ಯವಾದುದು. ಸಾಹಿತ್ಯ ವಿಮರ್ಶೆಯ ತತ್ವ-ಸ್ವರೂಪಗಳನ್ನು ಅರಿಯುವವರಿಗೆ ವಿವಿಧ ಪ್ರಸ್ಥಾನಗಲ ಪರಿಜ್ಞಾನವನ್ನು ಒದಗಿಸುವ ಈ ಗ್ರಂಥ ತುಂಬಾ ಉಪಯುಕ್ತವಾಗಿದೆ.

Publisher
Ankita Pustaka

Reviews

There are no reviews for this product.

Write a review

Note: HTML is not translated!