ಶೂನ್ಯ- Shunya(Sreesha Belakavadi)
- ₹135
ಪ್ರಕಾಶಕರು | : | ಸಾವಣ್ಣ ಎಂಟರ್ಪ್ರೈಸಸ್ |
Publisher | |
Sawanna Enterprises |
Reviews
There are no reviews for this product.
Related Products
ಪ್ರಕಾಶಕರು:ಸಾವಣ್ಣ ಎಂಟರ್ಪ್ರೈಸಸ್ಡಾ. ಯಂಡಮೂರಿ ವೀರೇಂದ್ರನಾಥ್ ಅವರ ಶುಭನುಡಿನನಗೆ ಯತಿರಾಜ್ ವೀರಾಂಬುಧಿ ಅವರು ಮೂವತ್ತು ವರ್ಷಗಳಿಗೂ ಹಿಂದಿನಿಂದ ಪರಿಚಯ. ನನ್ನ ಕಾದಂಬರಿಗಳನ್ನು ಮೂಲದಲ್ಲಿ ಓದಲು ತೆಲುಗು ಕಲಿತರೆಂಬುದು ಸಂತೋಷದ ವಿಷಯ. ಯತಿರಾಜ್ ನನ್ನ ಅನೇಕ ಪುಸ್ತಕಗಳನ್ನು ಅವರ ಪ್ರಕಾಶನದಲ್ಲಿ ಪ್ರಕಟಿಸಿದ್ದಾಾರೆ. ನನ್ನ ಇತ್ತೀಚಿನ ಮೂರು ಪುಸ್ತಕಗಳನ್ನು ಕನ್ನಡಕ್ಕೆೆ ಅನುವಾದಿಸಿದ್ದಾಾರೆ. ಅವರು ‘ಲೈಫು ಇಷ್ಟೇನೆ..!’ ಪುಸ್ತಕದ ಥೀಮ್ ವಿವರಿಸಿದಾಗ ಅದು ಚೆನ್ನಾಾಗಿದೆ ಎನಿಸಿತು.ಯತಿರಾಜ್ ವೀರಾಂಬುಧಿ ಅವರಿಗೆ ಶುಭ ಕೋರುತ್ತೇನೆ. ಕಷ್ಟವೆನ್ನುವುದು ಜೀವನದ ಒಂದು ಭಾಗ. ಕಷ್ಟ ಬಂದಾಗ ನಮ್ಮ ಶಕ್ತಿಿಯ ಪರೀಕ್ಷೆ ನಡೆಯುತ್ತದೆ. ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವೆವೋ ಇಲ್ಲವೋ ಎನ್ನುವುದು ನಮ್ಮ ಮನೋಸ್ಥೈರ್ಯದ ಮೇಲೆ ಆಧಾರಗೊಂಡಿದೆ. ನಾವು ಇರುವುದು ಸಮಾಜದಲ್ಲಿ. ಇಲ್ಲಿ ನಮ್ಮ ಪ್ರತಿಯೊಂದು ಚಟುವಟಿಕೆಯನ್ನೂ ಸಮಾಜವು ದುರ್ಬೀನಿನಿಂದ ನೋಡುತ್ತಿಿರುತ್ತದೆ. ಕೆಲವೊಮ್ಮೆೆ ಅದಕ್ಕೆೆ ಉತ್ತರಿಸಬೇಕಾಗಬಹುದು. ಆದರೆ ನಮ್ಮ ಸಹಾಯಕ್ಕೆೆ ಸಮಾಜ ಪ್ರತಿಸಲ ಬರುವುದೇ? ಅಥವಾ ನಮ್ಮನ್ನು ಟೀಕೆ ಮಾಡುತ್ತಾಾ ಇರುವುದೇ? ಈ ತುಮುಲಗಳನ್ನು ಬಿಡಿಬಿಡಿಯಾಗಿ ಒಂದೊಂದೇ ಮೆಟ್ಟಿಿಲಿನಂತೆ ನೋಡಿದಾಗ ಅನೇಕ ಸತ್ಯಗಳು ಹೊಳೆಯುತ್ತವೆ. ಅದರಲ್ಲಿ ಕೆಲವು ಕಹಿಸತ್ಯಗಳೂ ಹೌದು..
Add to Cartಸಿನಿಮಾ ಬರಹಗಳೆಂದರೆ ಅದು ಸಾಹಿತ್ಯವಲ್ಲ, ಕೇವಲ ವರ್ಣರಂಜಿತ ಸುದ್ದಿಗಳು ಎನ್ನುವ ಭಾವನೆ ತುಂಬಾ ಹಿಂದಿನಿಂದಲೂ ಇದೆ. ಸಿನಿಮಾ ಮಾಧ್ಯಮ ಕೂಡ ಮೇಲೂ ನೋಟಕ್ಕೆ ಹಾಗೆ ಅನಿಸಿದರೂ ಕಥೆ, ಕವನ, ಕಾದಂಬರಿ ಅಥವಾ ಆತ್ಮ ಕಥೆಗಳ ಮೂಲಕ ಗಂಭೀರವಾದ ಸಾಹಿತ್ಯವೊಂದು ಕಟ್ಟಿಕೊಡುವ ಬದುಕಿನ ಅನುಭೂತಿ, ಸಿನಿಮಾದಲ್ಲೂ ಸಾಧ್ಯ ಎಂಬುದನ್ನು ‘ಗೇಟ್ ಕೀಪರ್’ ಪುಸ್ತಕ ಹೇಳುತ್ತದೆ. ಈ ಕೃತಿಯಲ್ಲಿ ಜಗತ್ತಿನ ಹತ್ತಾರು ಭಾಷೆ, ನೂರಾರು ಬದುಕಿನ ಒಳ ಚಿತ್ರಣಗಳ ಕಥನಾಗಳು ಇವೆ. ಅಂಥ ಕಥನಗಳ ಜತೆಗೆ ನಮ್ಮ ಸಿನಿಮಾ- ಬದುಕನ್ನೂ ಸಹ ಪಕ್ಕದಲ್ಲಿಟ್ಟು ನೋಡುವ ಸ್ಮೂಕ್ಷ್ಮ ಸಂವೇದನೆಯ ಪ್ರಯತ್ನವೂ ಇಲ್ಲಿದೆ. ಕನ್ನಡದ ಜತೆಗೆ ಬೆಂಗಾಲಿ, ಹಿಂದಿ, ಮರಾಠಿ, ಗುಜರಾತಿ, ಮಲಯಾಳಂ, ಇರಾನ್, ಕೊರಿಯಾ, ಫ್ರೆಂಚ್, ಇಟಲಿ, ಚೈನಾ, ಜಪಾನ್, ಬ್ರೆಜಿಲ್... ಹೀಗೆ ಜಗತ್ತಿನ ಹಲವು ಕ್ಲಾಸಿಕ್ ಚಿತ್ರಗಳ ಒಳ ನೋಟಗಳು ಇಲ್ಲಿವೆ. ಓದುವ ಅಭಿರುಚಿ ಹೊಂದಿದ ಓದುಗನೊಬ್ಬ ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವಷ್ಟು ಕುತೂಹಲ, ರೋಚಕತೆ, ಅಭಿರುಚಿ ಮೂಡಿಸುವ ಸಿನಿಮಾ ಸಾಹಿತ್ಯ ಕೃತಿಯಿದು. ತೆರೆಯಲ್ಲಿ ಒಂದು ಸಿನಿಮಾ ಬಣ್ಣಗಳ ಮೂಲಕವೋ, ಸುಂದರವಾದ ಲೊಕೇಷನ್ ಮೂಲಕವೋ, ಭಾವನೆಗಳನ್ನು ಮೀಟುವ ಹಾಡುಗಳ ಮೂಲಕವೋ, ಮನಸ್ಸಿನ ಮೇಲೆ ಸವಾರಿ ಮಾಡುವಷ್ಟು ಚುರುಕಾದ ಸಂಭಾಷಣೆಗಳ ಮೂಲಕವೋ ಪ್ರೇಕ್ಷಕನನ್ನು ಹಿಡಿದಿಟ್ಟುಕೊಂಡು ಕೊನೆ ತನಕ ಸಾಗುವ ಹಾಗೆ ಕೃತಿಯ ಪ್ರತಿಯೊಂದು ಅಧ್ಯಾಯವೂ ಅಂತಹದ್ದೇ ಕುತೂಹಲ, ರೋಚಕತೆಯೊಂದಿಗೆ ಸಾಗುತ್ತವೆ ಎಂಬುದು ‘ಗೇಟ್ ಕೀಪರ್’ ಕೃತಿಯ ಹೆಚ್ಚುಗಾರಿಕೆ. ಸಿನಿಮಾ ಪ್ರೇಮಿಗಳಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ, ಜಗತ್ತಿನ ಕ್ಲಾಸಿಕ್ ಸಿನಿಮಾಗಳ ಮೋಡಿ ಒಳಗಾದವರಿಗೆ, ಈಗಷ್ಟೆ ಸಿನಿಮಾ ಕನಸು ಕಟ್ಟಿಕೊಂಡು, ಸಿನಿಮಾ ಕತೆಗಳ ಕಟ್ಟುವ ದಾರಿಯಲ್ಲಿರುವ ಉತ್ಸಾಹಿ ಸಿನಿ ಕೃಷಿಕರಿಗೆ ಈ ಪುಸ್ತಕ ಸದಾ ಜತೆಯಾಗಿರುವ ಅರ್ಹತೆಯನ್ನು ಹೊಂದಿದೆ...
Add to Cart