₹150
Ex Tax: ₹150
ಉರಿಬಿಸಿಲಿನ ಮಧ್ಯಾಹ್ನ ತುಂತುರು ಮಳೆಯಾಗುತ್ತದೆ. ಕರಿಬೆಟ್ಟದ ತಪ್ಪಲಲ್ಲಿ ಬಿಳಿಹೂವುಗಳು ಅರಳುತ್ತವೆ. ಉಬ್ಬುಹಲ್ಲಿನ ಹುಡುಗಿ ಜೀವ ಹಿಂಡುವಂತೆ ಹಾಡುತ್ತಾಳೆ. ಕಪ್ಪಗಿನ ಹುಡುಗ ಚೆಂದದ ಕತೆ ಬರೆಯುತ್ತಾನೆ. ಪ್ರೇಮಿಸಿದ ಹುಡುಗಿಯ ಹೆಸರನ್ನು ಮಗಳಿಗಿಟ್ಟು ಸಂಭ್ರಮಿಸುತ್ತೇವೆ. ಕೈ ಕೊಟ್ಟ ಪ್ರೇಮಿಯನ್ನು ಕಾಲವೇ ಮರೆಸುತ್ತದೆ. ಬತ್ತಿಹೋದ ನದಿಯಲ್ಲೂ ಮತ್ತೆ ನೀರು ಹರಿಯುತ್ತದೆ. ಎತ್ತರದ ಮನೆಯ ಚೆಲುವೆ ಆಕಾಶಕ್ಕೆ ಬಣ್ಣ ಬಳಿಯುತ್ತಾಳೆ. ಟ್ರಾಫಿಕ್ಕು ಕಿಕ್ಕಿರಿದ ರಸ್ತೆಯನ್ನೂ ಪುಟ್ಟ ಮಗು ಕ್ಷೇಮವಾಗಿ ದಾಟಿಹೋಗುತ್ತದೆ. ಮಿಸ್ ಕಾಲಿನ ಆಚೆತುದಿಯಲ್ಲಿ ಮುಗುಳ್ನಗೆಯೊಂದು ಕಾದಿರುತ್ತದೆ. ಮುಂಗಾರು ಮಳೆಯ ಮುಂಜಾನೆ ಬೆಟ್ಟಕ್ಕೆ ಎಳೆಬಿಸಿಲೇ ಹೊದಿಕೆಯಾಗುತ್ತದೆ. ಎಲ್ಲೋ ಕೇಳಿದ ಹಾಡು ಜೀವನಪೂರ್ತಿ ಕಾಯುತ್ತದೆ. ಕತ್ತಲ್ ರಾತ್ರಿಯಲ್ಲಿ ಅವಳ ನಸುನಗೆ ದಾರಿ ತೋರುತ್ತದೆ. ಬಯಲಿನಲ್ಲಿ ಬಿಳಿಹಕ್ಕಿ ಇಳಿದು ಕಾಮನಬಿಲ್ಲನ್ನು ಕಣ್ತುಂಬಿಕೊಳ್ಳುತ್ತವೆ. ಜೋಬಿನಲ್ಲಿ ಬಾಲ್ಯದಲ್ಲಿ ಹೆಕ್ಕಿದ ರೆಂಜೆ ಹೂವು ಹಾಗೆ ಉಳಿದಿರುತ್ತದೆ. ಪ್ರತಿ ಮಧ್ಯಾಹ್ನವೂ ಸವೆದು ಸವೆದು ಅವಳ ನೆನಪಿನಂಥ ಸಂಜೆಯಾಗುತ್ತದೆ. ದೇವರು ದೂರದಲ್ಲೆಲ್ಲೋ ಕೂತು ನೋಡೂತ್ತಿರುತ್ತಾನೆ. ನಮ್ಮ ಎದುರಿಗಿರುವ ತಿಳಿಯಾದ ಸರೋವರವನ್ನು ಅವನು ತಪ್ಪಿಯೂ ಕಲಕುವುದಿಲ್ಲ. ಅದಕ್ಕೇ, ಲೈಫ್ ಈಸ್ ಬ್ಯೂಟಿಫುಲ್...
Add to Cart